ಹಿಂದೂ ಯುವಕನ ಚಿಕಿತ್ಸೆಗೆ ಮೊಹರಂ ದೇಣಿಗೆ ಹಣ

Posted In : ದೇಶ

ಮಿಡ್ನಾಪುರ್: ಪಶ್ಚಿಮ ಬಂಗಾಳದ ಖರಗಪುರದಲ್ಲಿ ವಾಸಿಸುವ ಮುಸ್ಲಿಮರು ಪ್ರಸಕ್ತ ವರ್ಷದ ಮೊಹರಂ ಮೆರವಣಿಗೆ ರದ್ದು ಗೊಳಿಸಿ, ಅದರ ಹಣವನ್ನು ಕ್ಯಾನ್ಸರ್ ಪೀಡಿತ ಹಿಂದೂ ಯುವಕನ ಚಿಕಿತ್ಸೆಗೆ ನೀಡಲು ನಿರ್ಧರಿಸಿ ಮಾನವೀಯತೆ ಮೆರೆದಿದ್ದಾರೆ.

ಮೆರವಣಿಗೆ ಆಯೋಜಿಸುವ ಸಮಾಜ ಸಂಘ ಕ್ಲಬ್ 50 ಸಾವಿರ ರು. ದೇಣಿಗೆ ಯನ್ನು ಹಾಡ್ಗಿಕ್ಸ್‌ ಲಿಂಫೋಮಾ ಕಾಯಿಲೆಯಿಂದ ಬಳಲುತ್ತಿರುವ ಅಬಿರ್ ಭುನಿಯಾ(35) ಎಂಬವರ ಚಿಕಿತ್ಸೆಗೆ ನೀಡಲಿದ್ದಾರೆ. ದಕ್ಷಿಣ ಕೋಲ್ಕತಾದ ಸರೋಜ್ ಗುಪ್ತಾ ಕ್ಯಾನ್ಸರ್ ಸೆಂಟರ್‌ನಲ್ಲಿ ಕೆಮೋಥೆರಪಿ ಚಿಕಿತ್ಸೆ ಪಡೆಯು ತ್ತಿರುವ ಅರ್ಬಿಗೆ ಮೂಳೆ ಮಜ್ಜೆಯ ಕಸಿ ಸಹಿತ ಚಿಕಿತ್ಸೆಗೆ 12 ಲಕ್ಷ ರು. ಬೇಕಾಗಿದೆ.

ಮೆರವಣಿಗೆಯನ್ನು ಪ್ರತಿ ವರ್ಷ ಆಯೋಜಿಸಬಹುದು. ಆದರೆ ಮೊದಲು ಜೀವವೊಂದನ್ನು ಉಳಿಸಬೇಕು ಎಂದು ಸಂಘದ ಕಾರ್ಯದರ್ಶಿ ಅಮ್ಜದ್ ಖಾನ್ ಹೇಳುತ್ತಾರೆ. ನಾನು ಗುಣಮುಖ ನಾಗುತ್ತೇನೆಯೇ ಅಥವಾ ಇಲ್ಲವೇ ಗೊತ್ತಿಲ್ಲ. ಆದರೆ ನೆರೆಹೊರೆ ಯವರ ಮಾನವೀಯತೆ ನನ್ನ ಹೃದಯ ತಟ್ಟಿದೆ ಎಂದು ಅವರು ಹೇಳುತ್ತಾರೆ.

ಅನಾಥನಾಗಿರುವ ಅಬಿರ್ ದಂಪತಿ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುಸ್ಲಿಮರು ಚಿಕಿತ್ಸೆಗೆ ಹಣ ಹೊಂದಿಸು ತ್ತಿರುವ ವಿಷಯ ತಿಳಿದು ಖರಗಪುರ ಮುನಿಸಿಪಾಲಿಟಿ ಅಧ್ಕಕ್ಷ ಪ್ರದೀಪ್ ಸರ್ಕಾರ್ ಕೂಡ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಮೊದಲು ಸಿತಾಲ ದೇವಿಯ ಮಂದಿರಕ್ಕೆ ಗೇಟ್ ನಿರ್ಮಿಸಲು ಮುಸ್ಲಿಮರು ಧನ ಸಹಾಯ ಮಾಡಿದ್ದರು.

Leave a Reply

Your email address will not be published. Required fields are marked *

twenty + 19 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top