About Us Advertise with us Be a Reporter E-Paper

ವಿ +

ಅಮ್ಮಂದಿರೇ ರಿಲ್ಯಾಕ್ಸ್ ಆಗಿರಿ!

ಡಾ. ಮಾಲಾ ಪ್ರಕಾಶ್

9 ತಿಂಗಳು  ಒಡಲೊಳಗೆ ಬೆಚ್ಚಗೆ, ಸುರಕ್ಷಿತವಾಗಿದ್ದ  ನವಜಾತ ಶಿಶುವಿಗೆ ಭೂಮಿಗೆ ಕಾಲಿಡುತ್ತಿದ್ದಂತೆ ಒಮ್ಮೆಲೇ ಅಸುರಕ್ಷಿತಾ ಭಾವ ಕಾಡುತ್ತದೆ. ಅಮ್ಮನ ಎದೆಹಾಲನ್ನು ಸೇವಿಸುತ್ತಿದ್ದಂತೆ ರೊಚ್ಚು ಹಿಡಿದು ಅಳುತ್ತಿದ್ದ ಕಂದಮ್ಮ ತಟ್ಟನೆ ತನ್ನ ಅಳು ನಿಲ್ಲಿಸಿಬಿಡುತ್ತದೆ. ನವಜಾತ ಶಿಶುವಿನ ಆರೋಗ್ಯ ಹಾಗೂ ಪೌಷ್ಟಿಕಾಂಶಕ್ಕಾಗಿ ಎದೆಹಾಲು ಉಣಿಸುವುದು ಉತ್ತಮ ಮಾರ್ಗ. ಸ್ತನಪಾನವು ನಿಸರ್ಗ ಸಹಜ ರೋಗ ನಿರೋಧಕ ಶಕ್ತಿ ಮತ್ತು ಪ್ರೊಟೀನ್ ಒಳಗೊಂಡಿದ್ದು, ಸುಲಭವಾಗಿ ಜೀರ್ಣವಾಗುವ ಶಕ್ತಿಯನ್ನು ಹೊಂದಿದೆ. ಜತೆಗೆ ಮಗುವನ್ನು ರೋಗ ಮತ್ತು  ಕಾಪಾಡುತ್ತದೆ. ಇದಲ್ಲದೇ ತಾಯಿ ಮತ್ತು ಮಗುವಿನ ನಡುವೆ ಉತ್ತಮ ಬಾಂಧವ್ಯ ಬೆಸೆಯುತ್ತದೆ. ಹೀಗಾಗಿಯೇ ಆರು ತಿಂಗಳವರೆಗೆ ಮಗುವಿಗೆ ಸ್ತನಪಾನ ಮಾಡಿಸುವುದು ಸೂಕ್ತ ಎಂದು ವೇಕ್ ಫಿಟ್ ಸಂಸ್ಥೆ ಜೊತೆ ನಡೆಸಿದ ಸಂವಾದದಲ್ಲಿ ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರು ಹೇಳುತ್ತಾರೆ.

ಮಗು ಜನಿಸಿದ ಒಂದು ಗಂಟೆಯೊಳಗೇ ಹಾಲು ಉಣಿಸುವುದು ಸೂಕ್ತ. ಇದರಿಂದ ಹಲವು ಅಗತ್ಯ ಪೋಷಕಾಂಶಗಳು ಮಗುವಿಗೆ ದೊರೆಯುತ್ತವೆ. ಮಗುವಿಗೆ ಜನ್ಮ ನೀಡಿದ ಮೊದಲ ದಿನದ ಎದೆಹಾಲು ಹಲವು ಪೋಷಕಾಂಶಗಳನ್ನು ಒಳಗೊಂಡಿರುವುದಷ್ಟೇ ಅಲ್ಲ, ಮಗುವನ್ನು ಬ್ಯಾಕ್ಟೀರಿಯಾ  ವೈರಸ್‌ಗಳಿಂದ ಉಂಟಾಗುವ ಸೋಂಕುಗಳಿಂದ ರಕ್ಷಿಸುತ್ತವೆ. ಜನಿಸಿದ ತಕ್ಷಣವೇ ತಾಯಿ ಹಾಲು ಸೇವಿಸದ ಮಗುವು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ, ಮಗುವಿನ ಸಾವು ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ವರದಿ ಪ್ರಕಾರ, ವಿಶ್ವದಾದ್ಯಂತ ಜನಿಸುವ ಪ್ರತಿ ಐವರಲ್ಲಿ ಮೂರು ಶಿಶುಗಳಿಗೆ ಮೊದಲ ಗಂಟೆಯಲ್ಲೇ ಸ್ತನಪಾನ ದೊರೆಯುತ್ತಿಲ್ಲ.

ಮಗುವಿನ ಚಲನವನಲಗಳ ಮೇಲೆ ನಿಗಾ ಇಡಿ

ಮಗು ಜನಿಸಿದ ಮೊದಲ ವಾರದಲ್ಲಿ ದಿನದ  ಗಂಟೆ ಸಮಯದಲ್ಲಿ 8ಕ್ಕೂ ಹೆಚ್ಚು ಬಾರಿ ಆಹಾರ ಬೇಡುತ್ತದೆ. ಇದು ಹಾಲು ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿನ ದೇಹದ ತೂಕವನ್ನು ಎರಡನೇ ವಾರದ ಹೊತ್ತಿಗೆ ಹೆಚ್ಚಿಸಲು ನೆರವಾಗುತ್ತದೆ. ಮಗುವಿಗೆ ಇಂತಹ ನಿರ್ದಿಷ್ಟ ಸಮಯಕ್ಕೆ ಹಾಲುಣಿಸಬೇಕು ಎಂದು ಸಮಯವನ್ನು ನಿಗದಿಪಡಿಸಿಕೊಳ್ಳುವ ಬದಲು, ತಾಯಿಯು ಆಗಾಗ್ಗೆ ಮಗುವಿನ ತುಟಿಗಳನ್ನು ಪರಿಶೀಲಿಸುವುದು, ಬಾಯಲ್ಲಿ ಬೆರಳಿಟ್ಟು ಮಗು ಹಾಲು ಬೇಡುತ್ತಿದೆಯೇ ಎಂದು ಪರಿಶೀಲಿಸುವುದು ಸೂಕ್ತ. ಈ ಮೂಲಕ ಹಾಲು ಉಣಿಸುವುದು ತುಂಬಾ ಒಳ್ಳೆಯದು.

ತಾಯಂದಿರಿಗೆ ಇದು ಕಡ್ಡಾಯ

ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ತಾಯಂದಿರು 48 ಗಂಟೆ ನಂತರವಷ್ಟೇ ಹಾಲುಣಿಸಬೇಕು ಮತ್ತು ಎರಡನೇ ಪ್ರಸವದ ವೇಳೆ 24ಗಂಟೆ ನಂತರವಷ್ಟೇ ಹಾಲುಣಿಸಬೇಕು ಎಂಬ ಭಯದಿಂದ ಹೊರಬರಬೇಕು. ದೇಹವು ಆಕ್ಸಿಟೊಸಿನ್ ಹಾರ್ಮೊನ್ ಬಿಡುಗಡೆ ಮಾಡಿದರೆ ತಾಯಿಗೆ ಹೆಚ್ಚು ಆರಾಮದಾಯಕ ಎನಿಸುತ್ತದೆ.

ಹೆಚ್ಚಿನ ವಿಶ್ರಾಂತಿ ಅಗತ್ಯ

ಪ್ರಸವದ ನಂತರ ಮಹಿಳೆಯರಿಗೆ ಹೆಚ್ಚು ವಿಶ್ರಾಂತಿ ಅಗತ್ಯ. ಮಹಿಳೆಯರು ಯಾವುದೇ ಆರೋಗ್ಯವಂತರಾಗಿ ದೇಹ ವನ್ನು ಸದೃಢವಾಗಿ  ಸೂಕ್ತ ಹಾಸಿಗೆ ಅಗತ್ಯ. ಇದು  ದೇಹವನ್ನು ಸಿಂಕಿಂಗ್ ಮತ್ತು ಕರ್ಲಿಂಗ್ ಸಮಸ್ಯೆಯಿಂದ ದೂರ ಇಡುತ್ತವೆ. ಅಲ್ಲದೇ ಹಾಯಾಗಿ ಮಲಗಲು ಸಹಕರಿಸುತ್ತವೆ. ಇದು ಬೆನ್ನು ಹುರಿ ಯಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಹಗಲಿನಲ್ಲಿ ಶಕ್ತಿಯನ್ನೂ ಹೆಚ್ಚಿಸುತ್ತದೆ. ಒಳ್ಳೆಯ ಹಾಸಿಗೆಯು ತಾಯಿ ತನ್ನ ಮಗುವಿಗೆ ಹಾಲುಣಿಸಲು ಮತ್ತು ಹೆಚ್ಚು ಕ್ರಿಯಾಶೀಲವಾಗಿ ಮಗುವಿನ ಕಡೆಗೆ ಕಾಳಜಿ ವಹಿಸಲು ಹಾಗೂ ರೋಗಗಳಿಂದ ದೂರ ಮಾಡಲು ಸಹಕಾರಿ.

(ಲೇಖಕಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು)

Tags

Related Articles

Leave a Reply

Your email address will not be published. Required fields are marked *

Language
Close