About Us Advertise with us Be a Reporter E-Paper

ಸಿನಿಮಾಸ್

ಕಲಾವಿದರ ಮಕ್ಕಳಿಗೆ ಜವಾಬ್ದಾರಿ ಜಾಸ್ತಿ: ದರ್ಶನ್

ಸ್ಯಾಂಡಲ್‌ವುಡ್‌ನ ಕ್ಯಾಡ್ಬರೀಸ್ ಧರ್ಮ ಕೀರ್ತಿರಾಜ್ ಅವರ ನಟನೆಯ ಚಾಣಾಕ್ಷ ಸಿನಿಮಾವು ಸದ್ದಿಲ್ಲದೇ ಶೂಟಿಂಗ್ ಮುಗಿಸಿಕೊಂಡು ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚಿಗೆ ಕಲಾವಿದರ ಸಂಘದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿಕೊಂಡಿದ್ದು, ಧ್ವನಿಸುರಳಿ ಬಿಡುಗಡೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್, ‘ಚಿತ್ರರಂಗಕ್ಕೆ ಹೊಸ ಮುಖಗಳು ಪ್ರವೇಶಿಸಿ ಅವಕಾಶಗಳನ್ನು ಸುಲಭವಾಗಿ ಪಡೆಯಬಹುದು. ಆದರೆ ಕಲಾವಿದರ ಮಕ್ಕಳಿಗೆ ಅದು ಕಷ್ಟದ ಕೆಲಸವಾಗಿರುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಚಿತ್ರೀಕರಣದ ಸಂದರ್ಭದಲ್ಲಿ ಬೇರೆಯವರು ಜಾಸ್ತಿ ಟೇಕ್ ತೆಗೆದುಕೊಂಡರೆ ನಿರ್ದೇಶಕರು ಸುಮ್ಮನಿರುತ್ತಾರೆ. ಕಲಾವಿದರ ಮಕ್ಕಳು ಇದನ್ನು ಮಾಡಿದಾಗ ಅವರು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಉದ್ಯಮದಲ್ಲಿ ತೆವಳಿ, ಉರುಳಿಕೊಂಡು, ಅಂಬೆಗಾಲಿಡುತ್ತಾ ತಕ್ಕಮಟ್ಟಿಗೆ ಬಂದಿದ್ದೇನೆ. ಧರ್ಮ ಕೂಡ ಅದೇ ದಾರಿಯಲ್ಲಿರುವುದು ವಿಶೇಷ.

ಚಿತ್ರ ಹಿಟ್ ಆಗಲಿ’ ಎಂದು ತಂದೆಯ ಕನಸನ್ನು ಮಗ ಚಾಣಾಕ್ಷನಾಗಿ ಹೇಗೆ ನಿಭಾಯಿಸುತ್ತಾನೆಂಬುದು ಸಿನಿಮಾದ ಸಾರಾಂಶವಾಗಿದ್ದು, ಲವ್, ಸೆಂಟಿಮೆಂಟ್, ಕಾಮಿಡಿ, ಆಕ್ಷನ್ ಇತ್ಯಾದಿ ಅಂಶಗಳೆಲ್ಲವೂ ಚಿತ್ರದಲ್ಲಿದೆಯಂತೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ತಮ್ಮ ಲಾಕಪ್ ಡೆತ್ ಚಿತ್ರದ ನಂತರ ಅದ್ದೂರಿ ಆಕ್ಷನ್ ಸೀನ್‌ಗಳನ್ನು ಚಾಣಾಕ್ಷದಲ್ಲಿ ಸಂಯೋಜಿಸಿರುವುದು ಚಿತ್ರದ ಹೈಲೈಟ್ ಆಗಿದೆಯಂತೆ.
ಗೆಳೆಯನ ಚಿತ್ರಕ್ಕೆ ಶುಭ ಹಾರೈಸಲು ವಿನೋಧ್ ಪ್ರಭಾಕರ್, ತರುಣ್‌ಸುಧೀರ್, ಸಿಂಧೂ ಲೋಕನಾಥ್, ಕೃಷಿ ತಾಪಂಡ ಆಗಮಿಸಿದ್ದರು.

ನಾಯಕ ಧರ್ಮ ಕೀರ್ತಿರಾಜ್, ನಾಯಕಿ ಇನ್‌ಸ್ಪೆಕ್ಟರ್ ಪಾತ್ರ ಮಾಡಿರುವ ಅಭಯ್, ನೃತ್ಯ ನಿರ್ದೇಶಕ ತ್ರಿಭುವನ್ ಥ್ಯಾಂಕ್‌ಸ್ ಹೇಳಲಿಕ್ಕೆ ಸಮಯ ಮೀಸಲಿಟ್ಟರು. ಲಹರಿ ಸಂಸ್ಥೆಯು ಚಾಣಾಕ್ಷದ ಹಾಡುಗಳನ್ನು ಹೊರತಂದಿದ್ದು, ಸೆನ್ಸಾರ್ ಮಂಡಳಿಯಿಂದ ಈಗಾಗಲೇ ಯು/ಎ ಪ್ರಮಾಣ ಪತ್ರ ಲಭಿಸಿದೆ. ಎಲ್ಲ ಅಂದುಕೊಂಡಂತಾದರೆ ಮುಂದಿನ ವರ್ಷ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Tags

Related Articles

Leave a Reply

Your email address will not be published. Required fields are marked *

Language
Close