ಬ್ರಿಟನ್ ನಲ್ಲಿ ದಾವೂದ್ ಆಸ್ತಿ ಮುಟ್ಟುಗೋಲು

Posted In : ವಿದೇಶ

ಲಂಡನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟನ್ ಸರಕಾರ 1993 ಸರಣಿ ಸ್ಪೋಟದ ಆರೋಪಿ ದಾವೂದ್ ಇಬ್ರಾಹಿಂ ಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಮಾಡಿಕೊಂಡಿದೆ. ಈ ಮೂಲಕ ನರೇಂದ್ರ ಮೋದಿ ಸರಕಾರಕ್ಕೆ ಬಹು ದೊಡ್ಡ ಯಶಸ್ಸು ದೊರಕಿದಂತಾಗಿದೆ. ಕಳೆದ ಆಗಸ್ಟ್ ನಲ್ಲಿ ಬ್ರಿಟನ್ ದಾವೂದ್ ನ ಹಣಕಾಸು ವ್ಯವಹಾರದ ವರದಿ ನೀಡಿತ್ತು.

ವಾರ್ವಿಕ್ ಶೈರ್ ಮತ್ತು ಮಿಡ್ ಲ್ಯಾಂಡ್ ನ ಗೃಹ ಸಮುಚ್ಚಯ ಪ್ರದೇಶದಲ್ಲಿ ದಾವೂದ್ ತನ್ನದೇ ಆದ ಐಷಾರಾಮಿ ಹೊಟೇಲ್ ಹೊಂದಿದ್ದನೆಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಇಬ್ರಾಹಿಂ ಮುಂಬೈನಲ್ಲಿ 1993 ಸರಣಿ ಸ್ಫೋಟದ ಪ್ರಮುಖ ಆರೋಪಿ ಯಾಗಿದ್ದು, ಈ ಘಟನೆಯಲ್ಲಿ 260 ಅಮಾಯಕರು ಪ್ರಾಣ ಕಳೆದುಕೊಂಡು, 700 ಕ್ಕೂ ಅಧಿಕ ಜನ ಗಂಭೀರವಾಗಿ ಗಾಯ ಗೊಂಡಿದ್ದರು. ನಂತರ ದೇಶ ಬಿಟ್ಟು ಪಲಾಯನ ಮಾಡಿ, ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾ ನೆಂದು ವರದಿಯಾಗಿತ್ತು.

ಇದಕ್ಕೆ ಇಂದು ನೀಡುವಂತೆ ಆಗಿನ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ದಾವೂದ್ ಕರಾಚಿಯಲ್ಲಿದ್ದಾನೆ ಎಂದಿದ್ದರು. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮುಷರಫ್, ದಾವೂದ್ ಪಾಕ್ ನಲ್ಲೇ ಇರಬಹುದು ಅಥವಾ ಇನ್ನೇಲ್ಲೇ ಇರಬಹುದು. ಆದರೆ ಭಾರತ ಮುಸ್ಲಿಂಮರ ಹತ್ಯೆ ಮಾಡುತ್ತಿದ್ದು, ದಾವೂದ್ ಸೂಕ್ತ ಪ್ರತಿಕ್ರಿಯೆ ನೀಡುತ್ತಿದ್ದಾನೆ ಎಂದು ಹೇಳಿದ್ದರು.

 

Leave a Reply

Your email address will not be published. Required fields are marked *

fifteen − thirteen =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top