ನಿಗೂಢವಾಗೆ ಉಳಿದ ಬಡೇ ಸಾಬ್! ಈ ಪಾತ್ರ ನಿರ್ವಹಿಸೋದು ಯಾರು?
Dhurandhar 2: ಧುರಂಧರ್ 2 ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿರುವಾಗ, ಒಂದು ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ. ಆದಿತ್ಯ ಧರ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಾಯಕರಾಗಿರುವ ಈ ಚಿತ್ರವು ಈಗಾಗಲೇ ಭಾರಿ ಸಂಚಲನ ಮೂಡಿಸಿದೆ, ಆದರೆ ಬಡೇ ಸಾಹೇಬ್ ಪಾತ್ರದಲ್ಲಿ ನಟಿಸುವ ನಟನ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬುತ್ತಿವೆ. ಧುರಂಧರ್ 2 ಸಿನಿಮಾದಲ್ಲಿ ಬಡೇ ಸಾಬ್ ಎಂಬ ಪಾತ್ರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಪಾತ್ರದ ಬಗ್ಗೆ ಟೇಲರ್‌ನಲ್ಲಿ ಯಾವುದೇ ಉತ್ತರ ದೊರೆತಿಲ್ಲ. ಬಹುಶಃ ಈ ಪಾತ್ರವನ್ನು ನೇರವಾಗಿ ಸಿನಿಮಾದಲ್ಲಿಯೇ ತೋರಿಸಬಹುದು ಎನ್ನಲಾಗುತ್ತಿದೆ.