ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anchor Anushree: ಈಡೇರಿದ ಆಸೆ; ಅಪ್ಪು ಅಭಿಮಾನಿ ಕೈ ಹಿಡಿಯಲಿರುವ ಅನುಶ್ರೀ, ಪರಿಚಯದ ಕಥೆಯೇ ರೋಚಕ

ಆ್ಯಂಕರ್ ಅನುಶ್ರೀ ಅವರಿಗೆ ಇದೀಗ ಕಂಕಣ ಭಾಗ್ಯ ಕೂಡಿ ಬಂದಿದೆ. ಉದ್ಯಮಿ ರೋಷನ್‌ ಅವರ ಜೊತೆ ಅನುಶ್ರೀ ಸಪ್ತಪದಿ ತುಳಿಯಲಿದ್ದಾರೆ. ಆಗಸ್ಟ್ 28ಕ್ಕೆ ತಮ್ಮ ಫ್ಯಾಮಿಲಿ ನೋಡಿದ ಹುಡುಗನನ್ನೇ ಅನುಶ್ರೀ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ರ್ಯಾಂಡ್ ಆಗಿ ನಿರೂಪಕಿ ಅನುಶ್ರೀ ವಿವಾಹ ನಡೆಯಲಿದೆ ಎಂದು ತಿಳಿಯಲಿದೆ.

ಕೊನೆಗೂ ಈಡೇರಿದ ಆಸೆ; ಅಪ್ಪು ಅಭಿಮಾನಿಯ ಕೈ ಹಿಡಿಯುತ್ತಿರುವ ಅನುಶ್ರೀ

Profile Vishakha Bhat Jul 19, 2025 1:19 PM

ಬೆಂಗಳೂರು: ಆ್ಯಂಕರ್ ಅನುಶ್ರೀ (Anchor Anushree) ಅವರಿಗೆ ಇದೀಗ ಕಂಕಣ ಭಾಗ್ಯ ಕೂಡಿ ಬಂದಿದೆ. ಉದ್ಯಮಿ ರೋಷನ್‌ ಅವರ ಜೊತೆ ಅನುಶ್ರೀ ಸಪ್ತಪದಿ ತುಳಿಯಲಿದ್ದಾರೆ. ಆಗಸ್ಟ್ 28ಕ್ಕೆ ತಮ್ಮ ಫ್ಯಾಮಿಲಿ ನೋಡಿದ ಹುಡುಗನನ್ನೇ ಅನುಶ್ರೀ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ರ್ಯಾಂಡ್ ಆಗಿ ನಿರೂಪಕಿ ಅನುಶ್ರೀ ವಿವಾಹ ನಡೆಯಲಿದೆ ಎಂದು ತಿಳಿಯಲಿದೆ. ಇದೀಗ ಅನುಶ್ರೀ ಅವರ ಭಾವಿ ಪತಿ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳು ತಿಳಿದು ಬಂದವೆ. ಕನ್ನಡದ ಖ್ಯಾತಿ ನಿರೂಪಕಿ ಆಗಿರುವ ಅನುಶ್ರೀ ಪುನೀತ್‌ ರಾಜ್‌ಕುಮಾರ್‌ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಇದೀಗ ರಾಜ್‌ಕುಮಾರ್‌ ಫ್ಯಾಮಿಲಿಗೆ ರೋಷನ್‌ ಬಹಳ ಆತ್ಮೀಯರು ಎಂದು ತಿಳಿದು ಬಂದಿದೆ.

ತಮ್ಮ ಆಸೆಯಂತೆ ಅನುಶ್ರೀ ಅಪ್ಪು ಅಭಿಮಾನಿ ಜೊತೆ ವಿವಾಹವಾಗಲಿದ್ದಾರೆ. ಗಂಧದ ಗುಡಿ ಸಿನಿಮಾ ಇವೆಂಟ್ ನಲ್ಲಿ ಅನುಶ್ರೀ ಹಾಗೂ ರೋಷನ್‌ ಭೇಟಿಯಾಗದ್ದರಂತೆ. ಈ ಇವೆಂಟ್‌ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರು ಆಯೋಜನೆ ಮಾಡಿದ್ದರು. ಅದೇ ಕಾರ್ಯಕ್ರಮದಲ್ಲಿ ಅನುಶ್ರೀ ನಿರೂಪಣೆಯನ್ನು ಮಾಡಿದ್ದರು. ರೋಷನ್ ಕೂಡ ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು. ಆಗ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅದೇ ಸ್ನೇಹ ಇದೀಗ ಮದುವೆಯವರೆಗೆ ಬಂದು ನಿಂತಿದೆ.

ದೊಡ್ಮನೆ ಸೊಸೆ, ಯುವರಾಜ್‌ ಪತ್ನಿ ಶ್ರೀದೇವಿ ಹಾಗೂ ರೋಷನ್‌ ಉತ್ತಮ ಸ್ನೇಹಿತರಂತೆ. ಕಳೆದ ಎಂಟು ವರ್ಷಗಳಿಂದ ಶ್ರೀದೇವಿ ಹಾಗೂ ರೋಷನ್‌ ಪರಿಚಯಸ್ಥರು ಎಂದು ಹೇಳಲಾಗಿದೆ. ರಾಜ್‌ ಕುಮಾರ್‌ ಕುಟುಂಬಸ್ಥರೊಂದಿಗೆ ಉತ್ತಮ ಬಾಂಧ್ಯವ ಹೊಂದಿರುವ ಅನುಶ್ರೀಗೆ ಕಲೆ ವರ್ಷಗಳ ಹಿಂದೆಯೇ ರೋಷನ್‌ ಪರಿಚಯವಾಗಿತ್ತು. ಪುನೀತ ಪರ್ವದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರಿಂದ ಇನ್ನಷ್ಟು ಆತ್ಮೀಯಾಗಿದ್ದರು. ಇದೀಗ ಅನುಶ್ರೀ ಹಾಗೂ ರೋಷನ್‌ ಮದುವೆಯಾಗುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Anchor Anushree: ಆ್ಯಂಕರ್ ಅನುಶ್ರೀ ಕೈ ಹಿಡಿಯುವ ಹುಡುಗನ ಫೋಟೋ ವೈರಲ್

ಅನುಶ್ರೀ ಅವರು ಅಪ್ಪು ಅವರ ದೊಡ್ಡ ಅಭಿಮಾನಿ. ಪುನೀತ್ ನಿಧನ ಹೊಂದಿದ ಬಳಿಕವೂ ಸಾಕಷ್ಟು ಕಡೆ ಅವರ ಒಡನಾಟದ ಕುರಿತು ಅನುಶ್ರೀ ಹೇಳಿಕೊಂಡಿದ್ದಾರೆ. ಮತ್ತೊಂದು ವಿಶೇಷವೇನೆಂದರೆ, ಯೂಟ್ಯೂಬ್ ಚಾನೆಲ್​ಗೆ ಅಪ್ಪು ಫೋಟೋ ಇರೋ ಲೋಗವನ್ನು ಅನುಶ್ರೀ ಮಾಡಿಸಿದ್ದಾರೆ. ಅವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ನಡೆಯುವ ಸಂದರ್ಶನಗಳಲ್ಲಿ ಪುನೀತ್‌ರನ್ನು ನೆನಪಿಸಿಕೊಳ್ಳುತ್ತಾರೆ ಹಾಗೂ ಆಗಮಿಸುವ ಗೆಸ್ಟ್‌ಗಳಿ ಪುನೀತ್‌ ಇರುವ ಬೆಳ್ಳಿ ನಾಣ್ಯ ನೀಡುತ್ತಾರೆ. ಈ ಅಭಿಮಾನಕ್ಕೆ ಮನಸೋತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಅಪ್ಪು ಬಳಸುತ್ತಿದ್ದ ದುಬಾರಿ ಸೈಕಲ್‌ ಗಿಫ್ಟ್‌ ನೀಡಿದ್ದರು. ಇದೀಗ ರೋಷನ್ ಕೂಡ ಪುನೀತ್​​ ಅವರ ದೊಡ್ಡ ಫ್ಯಾನ್ ಎಂದು ತಿಳಿದು ಬಂದಿದೆ.