BBK 12: 'ಗಿಲ್ಲಿ ನಟ ಹುಲಿ, ಒನ್ ಮ್ಯಾನ್ ಆರ್ಮಿ, ಅವ್ನೇ ಬಿಗ್ ಬಾಸ್ ಶೋ ನಡೆಸ್ತಾ ಇದ್ದಾನೆ'; ಜೊತೆಗಿದ್ದ ಸ್ಪರ್ಧಿಯಿಂದಲೇ ಬಂತು ಅಚ್ಚರಿಯ ಮಾತು!
Risha Gowda On Gilli Nata: ಗಿಲ್ಲಿ ನಟ ಬಗ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿ ರಿಷಾ ಗೌಡ ಅಚ್ಚರಿಯ ಮಾತುಗಳನ್ನಾಡಿದ್ದಾರೆ. "ಗಿಲ್ಲಿ ಹುಲಿ, ಅವನು ಒನ್ ಮ್ಯಾನ್ ಆರ್ಮಿ, ಅವನಿಂದಲೇ ಈ ಶೋ ನಡೆಯುತ್ತಿದೆ. ಗಿಲ್ಲಿ ಬಿಟ್ರೆ ಬೇರೇನೂ ಕಾಣ್ತಿಲ್ಲ" ಎಂದು ಅವರು ಹೇಳಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಯಾವ ರೀತಿ ಆಟ ಆಡುತ್ತಿದ್ದಾರೆ. ಹೇಗೆ ಆಡಿಯೆನ್ಸ್‌ನ ಸೆಳೆದುಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಒಮ್ಮೊಮ್ಮೆ ಅವರ ಮಿತಿಮೀರಿದ ವರ್ತನೆಯಿಂದ ಕಿರಿಕಿರಿ ಆಗಿದ್ದೂ ಉಂಟು. ಆದರೂ ಗಿಲ್ಲಿ ಸದ್ಯ ಈ ಸೀಸನ್ ಟಾಪ್ ಪರ್ಫಾಮರ್ ಅನ್ನೋದನ್ನು ಅಲ್ಲಗಳೆಯುವಂತಿಲ್ಲ. ಈ ನಡುವೆ ಬಿಗ್ ಬಾಸ್ 12 ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿ, ಗಿಲ್ಲಿ ಜೊತೆ ಒಂದಷ್ಟು ಸಮಯ ಕಳೆದಿದ್ದ ರಿಷಾ ಗೌಡ ಅವರು, "ಗಿಲ್ಲಿ ನಟ ಹುಲಿ, ಒನ್ ಮ್ಯಾನ್ ಆರ್ಮಿ, ಅವ್ನೇ ಬಿಗ್ ಬಾಸ್ ಶೋ ನಡೆಸ್ತಾ ಇದ್ದಾನೆ" ಎಂದು ಹೇಳಿದ್ದಾರೆ.
ಗಿಲ್ಲಿ ಬಿಟ್ರೆ ಬೇರೇನೂ ಕಾಣಿಸ್ತಾ ಇಲ್ಲ
ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, "ಗಿಲ್ಲಿ ಹುಲಿ.. ಅವನು ಒನ್ ಮ್ಯಾನ್ ಆರ್ಮಿ. ಈ ಶೋವನ್ನು ಅವನು ನಡೆಸ್ತಾ ಇದ್ದಾನೆ. ಈ ಗೆಸ್ಟ್‌ಗಳು ಹೋಗಿರಲಿಲ್ಲ ಎಂದರೆ, ಅವನು ನಡೆಸ್ತ ಇದ್ದ. ಅಲ್ಲಿ ಗಿಲ್ಲಿ ಬಿಟ್ರೆ ಬೇರೇನೂ ಕಾಣಿಸ್ತಾ ಇಲ್ಲ. ಗಿಲ್ಲಿ ಟಾಪ್ ಅಲ್ಲೇ ಇದ್ದಾನೆ. ಅವನನ್ನು ಕೆಳಗೆ ಇಳಿಸೋಕೆ ಯಾರಿಂದಲೂ ಆಗೋದಿಲ್ಲ. ಆದರೆ ಅವನಿಂದಲೇ ಅವನು ಇಳಿತಾ ಇದ್ದಾನ ಅಂತ. ಈ ವಾರ ಸುದೀಪ್ ಸರ್ ವೀಕೆಂಡ್ ಅಲ್ಲಿ ಹೇಳುವ ಮಾತುಗಳಿಂದ ಅವರು ಎಚ್ಚೆತ್ತುಕೊಂಡರೆ ಮತ್ತೆ ಮೇಲೆ ಹೋಗ್ತಾನೆ" ಎಂದು ಹೇಳಿದ್ದಾರೆ.
BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ವಿಚಾರವಾಗಿ ಗಿಲ್ಲಿ-ರಿಷಾ ನಡುವೆ ಜಗಳ
ಗಿಲ್ಲಿಯನ್ನು ಸುದೀಪ್ ಸರ್ ಪ್ರಶ್ನೆ ಮಾಡ್ತಾರೆ
"ಈ ವಾರ ಅತಿಥಿಗಳ ಜೊತೆಗೆ ಗಿಲ್ಲಿ ನಡೆದುಕೊಂಡ ರೀತಿಯನ್ನು ಸುದೀಪ್ ಅವರು ವೀಕೆಂಡ್‌ನಲ್ಲಿ ಚರ್ಚೆ ಮಾಡಿಯೇ ಮಾಡ್ತಾರೆ ಎಂಬುದು ರಿಷಾ ಗೌಡ ಅವರ ಅಭಿಪ್ರಾಯ. "ನಾನು ಬರೆದುಕೊಡ್ತಿನಿ. ಖಂಡಿತಾ ಸುದೀಪ್ ಸರ್ ಇದನ್ನು ಮಾತಾಡಿಯೇ ಮಾತಾಡ್ತಾರೆ. ಸುದೀಪ್ ಅವರಿಂದ ಯಾರಿಗೂ ಅನ್ಯಾಯ ಆಗಿಲ್ಲ. ಅವರು ಕಡೆಯಿಂದ ನ್ಯಾಯ ಅಂದರೆ ನ್ಯಾಯ. ಹಾಗಾಗಿ, ಈ ವಿಚಾರವನ್ನು ಸುದೀಪ್ ಸರ್ ಅಡ್ರೆಸ್ ಮಾಡಿಯೇ ಮಾಡ್ತಾರೆ" ಎಂದ ರಿಷಾ ಹೇಳಿದ್ದಾರೆ.
ಈ ಬಾರಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿದ್ದ ರಿಷಾ ಗೌಡ
ಗಿಲ್ಲಿಯಿಂದನೆ ಈ ಸೀಸನ್
"ಸುದೀಪ್ ಸರ್ ಮಾತನಾಡಿ, ಅದರ ಬಗ್ಗೆ ಹೇಳಿದಾಗ ಅವನು ತಿದ್ದಿಕೊಳ್ತಾನೆ ಅನ್ನಿಸುತ್ತದೆ. ಫನ್ ಅಂತ ಹೋಗಿ ಅತಿಥಿಗಳಿಗೆ ಅವನು ಹಾಗೇ ಹೇಳಿದ್ದು ಬೇಜಾರ್ ಆಯ್ತು. ಗಿಲ್ಲಿ ಇಲ್ಲ ಅಂದರೆ ಬಿಗ್ ಬಾಸ್ ಹೇಗೆ? ಹಾಗೇ ಅನ್ನಿಸಿಬಿಟ್ಟಿದೆ. ನಾನು ಮನೆಯೊಳಗೆ ಇದ್ದೆ. ಬೇರೆ ಸೀಸನ್ ನಂಗೆ ಗೊತ್ತಿಲ್ಲ. ಆದರೆ ಈ ಸೀಸನ್ ಮಾತ್ರ ಗಿಲ್ಲಿಯಿಂದನೆ. ಗಿಲ್ಲಿ ಜೊತೆ ಜಗಳ ಆಡುವವರೆಲ್ಲಾ ನೆಗೆಟಿವ್ ಆಗ್ತಾರೆ" ಎಂದ ರಿಷಾ ಗೌಡ ಹೇಳಿದ್ದಾರೆ.
ಗಿಲ್ಲಿ ನನ್ನನ್ನು ನಗಿಸಿದ್ದಾನೆ
"ತೂಕವಾಗಿರುವ ಮನುಷ್ಯ ಗಿಲ್ಲಿ. ಆಟ ಆಡುವ ರೀತಿಯಿಂದ ತನ್ನತನವನ್ನ ಕಳೆದುಕೊಳ್ಳುತ್ತಾರೆ ಎಂದರೆ, ಅದನ್ನು ಅವರೇ ಸರಿ ಮಾಡಿಕೊಳ್ಳಬೇಕು. ಗಿಲ್ಲಿಗೆ ತುಂಬಾ ಸಪೋರ್ಟ್ ಇದೆ. ನನ್ನ ಮತ್ತು ಗಿಲ್ಲಿ ನಡುವೆ ಎಂಥದ್ದೇ ಜಗಳ ಆಗಿರಲಿ. ಆದರೆ ನಾನು ಮನೆಯಲ್ಲಿ ಇದ್ದಾಗ ನನ್ನನ್ನು ನಗಿಸಿದ್ದಾನೆ. ಅದು ಪರಿಶುದ್ಧವಾದ ನಗು. ಗಿಲ್ಲಿಗೆ ಎಲ್ಲರ ಸಪೋರ್ಟ್ ಇರಲಿ, ಅವನು ತಪ್ಪಾದಾಗ ತಿದ್ದಿಕೊಳ್ಳುತ್ತಾನೆ ಅನಿಸುತ್ತದೆ" ಎಂದ ರಿಷಾ ಹೇಳಿದ್ದಾರೆ.