ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಗಿಲ್ಲಿ ಬಗ್ಗೆ ಅಚ್ಚರಿಯ ವಿಚಾರವನ್ನ ಹೊರಹಾಕಿದ ರಕ್ಷಿತಾ; ಏಕಾಏಕಿ ಗರಂ ಆದ ಅಶ್ವಿನಿ ಗೌಡ! ಅಷ್ಟಕ್ಕೂ ಆಗಿದ್ದೇನು?

Bigg Boss Kannada 12 Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಕ್ಯಾಪ್ಟನ್ ಧನುಷ್ ಅವರು ನೀಡಿದ ರ್ಯಾಂಕಿಂಗ್ ವಿವಾದಕ್ಕೆ ಕಾರಣವಾಗಿದೆ. 11 ಸ್ಪರ್ಧಿಗಳಲ್ಲಿ ಗಿಲ್ಲಿ ನಟನಿಗೆ 2ನೇ ಸ್ಥಾನ ನೀಡಿದ್ದನ್ನು ಇತರ ಸ್ಪರ್ಧಿಗಳು ಪ್ರಶ್ನಿಸಿದರು. ಈ ವೇಳೆ ರಕ್ಷಿತಾ ಶೆಟ್ಟಿ ನೀಡಿದ ಹೇಳಿಕೆಯೊಂದು ಅಶ್ವಿನಿ ಗೌಡ ಅವರ ಕಣ್ಣನ್ನು ಕೆಂಪಾಗಿಸಿತು.

ಗಿಲ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಕ್ಷಿತಾ; ಕೆರಳಿದ ಅಶ್ವಿನಿ ಗೌಡ!

-

Avinash GR
Avinash GR Dec 2, 2025 1:08 PM

ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಆಗಿರುವ ಧನುಷ್‌ಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದರು. ಅದೇನಪ್ಪ ಅಂದ್ರೆ, ಮನೆಯೊಳಗೆ ಇರುವ 11 ಸ್ಪರ್ಧಿಗಳಿಗೆ ರ್ಯಾಕಿಂಗ್‌ ನೀಡಬೇಕಿತ್ತು. ಇದು ಈ ವಾರದ ನಾಮಿನೇಷನ್‌ ಮೇಲೂ ಪರಿಣಾಮ ಬೀರಲಿದೆ ಎಂದು ಮೊದಲೇ ಬಿಗ್‌ ಬಾಸ್‌ ಎಚ್ಚರಿಸಿದ್ದರು. ಅದರಂತೆಯೇ ಧನುಷ್‌ ಒಬ್ಬೊಬ್ಬರಿಗೆ ಒಂದೊಂದು ಸ್ಥಾನವನ್ನು ನೀಡುತ್ತಾ ಹೋದರು. 11ನೇ ಸ್ಥಾನವನ್ನು ಮಾಳು ನಿಪನಾಳ್‌ಗೆ ನೀಡಿದರೆ, 1ನೇ ಸ್ಥಾನವನ್ನು ಕಾವ್ಯಗೆ ನೀಡಿದರು. ಗಿಲ್ಲಿಗೆ 2ನೇ ಸ್ಥಾನ ನೀಡಿದರು.

ಪ್ರಶ್ನೆ ಮಾಡಿದ ಸ್ಪರ್ಧಿಗಳು

ಯಾವಾಗ ಗಿಲ್ಲಿ ನಟನಿಗೆ 2ನೇ ಸ್ಥಾನ ಸಿಕ್ಕಿತೋ, ಮಿಕ್ಕವರು ಇದರ ಬಗ್ಗೆ ಪ್ರಶ್ನೆ ಮಾಡಿದರು. ಗಿಲ್ಲಿ ನಟ ಏನೇನೂ ಕೆಲಸ ಮಾಡೋದಿಲ್ಲ, ಅವನಿಗ್ಯಾಕೆ 2ನೇ ಸ್ಥಾನ ಅಂತ ಕೂಗಾಡಿದರು. ಈ ವೇಳೆ ರಕ್ಷಿತಾ ಶೆಟ್ಟಿ ಒಂದು ಗಂಭೀರ ಆರೋಪ ಮಾಡಿದರು. ಇದು ಅಶ್ವಿನಿ ಗೌಡಗೆ ಸಿಟ್ಟು ಬರುವಂತೆ ಮಾಡಿತು. ಅಷ್ಟಕ್ಕೂ ಏನದು ಆರೋಪ? ಮುಂದೆ ಓದಿ.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಗಿಲ್ಲಿಗೆ ಜನಪ್ರಿಯತೆ ಇದೆ

"ನನಗೆ ಒಂದು ಡೌಟ್‌ ಇದೆ. ನೀವು (ಧನುಷ್‌) 2ನೇ ಸ್ಥಾನದಲ್ಲಿ ಗಿಲ್ಲಿಯನ್ನು ನಿಲ್ಲಿಸಿದ್ದೀರಿ ಅಲ್ವಾ? ಯಾಕೆ ಅಲ್ಲಿ ನಿಲ್ಲಿಸಿದ್ರಿ ಅಂದರೆ, ಗಿಲ್ಲಿಯನ್ನು ಜನರು ಇಷ್ಟಪಡ್ತಾರೆ, ಅವರು ಜನಪ್ರಿಯರಾಗಿದ್ದಾರೆ ಎಂದು ನೀವು ಅವರನ್ನು 2ನೇ ಸ್ಥಾನದಲ್ಲಿ ನಿಲ್ಲಿಸಿದ್ದೀರಿ. ಆ ಮೂಲಕ ನೀವು ಸೇಫ್‌ ಆಟ ಆಡುತ್ತಿದ್ದೀರಿ ಅಂತ ನನಗೆ ಅನ್ನಿಸುತ್ತಿದೆ" ಎಂದು ಧನುಷ್‌ಗೆ ರಕ್ಷಿತಾ ಶೆಟ್ಟಿ ಕೌಂಟರ್‌ ಕೊಟ್ಟರು.

ಇದು ಅಶ್ವಿನಿ ಗೌಡ ಅವರ ಕೋಪಕ್ಕೆ ಕಾರಣವಾಯಿತು. "ಗಿಲ್ಲಿ ಜನಪ್ರಿಯರಾಗಿದ್ದಾರೆ ಎಂದು ನಿನಗೆ ಇಲ್ಲಿ ದಿನ ಟಿವಿ ಹಾಕಿ ತೋರಿಸ್ತಾ ಇದ್ದಾರಾ? ನ್ಯೂಸ್‌ ಪೇಪರ್‌ ಅಲ್ಲಿ ಹೇಳ್ತಾ ಇದ್ದಾರಾ? ಮತ್ತೆ ಯಾಕೆ ಅಂತ ಸ್ಟೇಟ್‌ಮೆಂಟ್‌ನ ಕೊಡ್ತಿಯಾ" ಎಂದು ರಕ್ಷಿತಾಗೆ ಗರಂ ಆಗಿಯೇ ಕೇಳಿದರು ಅಶ್ವಿನಿ ಗೌಡ. ಅದಕ್ಕೆ ಪ್ರತಿಕ್ರಿಯಿಸಿದ ರಕ್ಷಿತಾ, "ನಾನು ಆ ರೀತಿ ಹೇಳಲಿಲ್ಲ, ನನಗೆ ಅದು ಫೀಲ್‌ ಆಯ್ತು ಅಷ್ಟೇ. ಅಂದರೆ, ಗಿಲ್ಲಿಗೆ ಜನಪ್ರಿಯತೆ ಇದೆ, ಅವನಿಗೆ ಸಪೋರ್ಟ್‌ ಮಾಡಿದರೆ, ನನಗೂ ಜನರು ಸಪೋರ್ಟ್‌ ಮಾಡ್ತಾರೆ ಎಂಬ ಫೀಲಿಂಗ್‌ ಧನುಷ್‌ಗೆ ಇದೆ ಎಂದು ನಾನು ಹೇಳಿದ್ದು" ಅಂತ ಸಮಾಜಾಯಿಷಿ ನೀಡಿದ್ದಾರೆ ರಕ್ಷಿತಾ.

BBK 12: 'ಗಿಲ್ಲಿ ನಟ ಹುಲಿ, ಒನ್‌ ಮ್ಯಾನ್‌ ಆರ್ಮಿ, ಅವ್ನೇ ಬಿಗ್‌ ಬಾಸ್‌ ಶೋ ನಡೆಸ್ತಾ ಇದ್ದಾನೆ'; ಜೊತೆಗಿದ್ದ ಸ್ಪರ್ಧಿಯಿಂದಲೇ ಬಂತು ಅಚ್ಚರಿಯ ಮಾತು!

ಗಿಲ್ಲಿಗೆ ಜನಪ್ರಿಯತೆ ಇರುವುದಂತೂ ನಿಜ!

ಹೌದು, ಬಿಗ್‌ ಬಾಸ್‌ ಮನೆಯೊಳಗೆ ಈ ಬಗ್ಗೆ ಎಷ್ಟೇ ಚರ್ಚೆ ಆಗಲಿ, ಆದರೆ ಹೊರಗಡೆ ಗಿಲ್ಲಿ ನಟನಿಗೆ ಭಾರಿ ಜನಪ್ರಿಯತೆ ಇರುವುದಂತೂ ಪಕ್ಕಾ. ಈ ಬಾರಿಯ ಬಿಗ್‌ ಬಾಸ್‌ ಶೋನಲ್ಲಿ ಒಂದು ಶುದ್ಧ ಮನರಂಜನೆ ನೀಡುವಲ್ಲಿ ಗಿಲ್ಲಿ ಯಶಸ್ಸು ಸಾಧಿಸಿದ್ದಾರೆ, ಅವರಿಂದಾಗಿಯೇ ನಾವು ಬಿಗ್‌ ಬಾಸ್‌ ನೋಡ್ತಾ ಇರುವುದು ಎಂದು ಮಾತುಗಳನ್ನು ವೀಕ್ಷಕರು ಹೇಳುತ್ತಿದ್ದಾರೆ.