ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Super Hit: ʻಬಿಗ್‌ ಬಾಸ್‌ʼ ಮಾತ್ರವಲ್ಲ ಸ್ಯಾಂಡಲ್‌ವುಡ್‌ನಲ್ಲೂ ಗಿಲ್ಲಿ ನಟನ ಹವಾ ಶುರು; ಹೀರೋ ಆಗಿಬಿಟ್ರು ಮಾತಿನ ಮಲ್ಲ!

Gilli Nata Sandalwood Debut: 'ಬಿಗ್ ಬಾಸ್' ಕನ್ನಡ 12 ಶೋನ ಜನಪ್ರಿಯ ಸ್ಪರ್ಧಿ ಗಿಲ್ಲಿ ನಟ ಅವರು ನಾಯಕನಾಗಿ ನಟಿಸಿರುವ 'ಸೂಪರ್ ಹಿಟ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಗೌರವ್ ಶೆಟ್ಟಿ ಕೂಡ ಹೀರೋ ಆಗಿ ನಟಿಸಿರುವ ಈ ಚಿತ್ರಕ್ಕೆ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆದ ʻಮಾತಿನ ಮಲ್ಲʼ ಗಿಲ್ಲಿ ನಟ; ಯಾವ ಸಿನಿಮಾ?

-

Avinash GR
Avinash GR Dec 2, 2025 2:54 PM

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟನ ಹವಾ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾರೇ ಬರಲಿ, ಯಾರೇ ಇರಲಿ ನನ್ನ ರೇಂಜ್‌ಗೆ ಯಾರಿಲ್ಲ ಅನ್ನೋ ಥರ ಆಟ ಆಡ್ತಿದ್ದಾರೆ ಗಿಲ್ಲಿ ನಟ. ಆಡಿಯೆನ್ಸ್‌ ಕೂಡ ಗಿಲ್ಲಿ ನಟ ಅವರನ್ನು ಬಹಳ ಪ್ರೀತಿಯಿಂದ ಮೆಚ್ಚಿಕೊಳ್ಳುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅದು ಗೊತ್ತಾಗುತ್ತಿದೆ ಕೂಡ. ಇದೀಗ ಗಿಲ್ಲಿ ನಟ ಕಡೆಯಿಂದ ಒಂದು ಬಂಪರ್‌ ನ್ಯೂಸ್‌ ಕೇಳಿಬಂದಿದೆ. ಅದೇನಪ್ಪ ಅಂದ್ರೆ, ಅವರೀಗ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿದ್ದಾರೆ.

ಸೈಲೆಂಟ್ ಆಗಿ ಸಿನಿಮಾ ಮುಗಿಸಿರುವ ಗಿಲ್ಲಿ ನಟ

ಗಿಲ್ಲಿ ನಟ ಬಿಗ್‌ ಬಾಸ್‌ ಮನೆಯೊಳಗೆ ಹೋಗುವುದಕ್ಕೂ ಮುನ್ನವೇ ತಾವು ಹೀರೋ ಆಗಿರುವ ಸಿನಿಮಾದ ಶೂಟಿಂಗ್‌ ಮುಗಿಸಿಕೊಟ್ಟಿದ್ದಾರೆ. ʻಸೂಪರ್‌ ಹಿಟ್‌ʼ ಹೆಸರಿನ ಈ ಸಿನಿಮಾದಲ್ಲಿ ಗೌರವ್‌ ಶೆಟ್ಟಿ ಕೂಡ ಹೀರೋ. ಇಬ್ಬರ ಜುಗಲ್ಬಂಧಿಯಲ್ಲಿ ಮೂಡಿಬಂದಿರುವ ʻಸೂಪರ್‌ ಹಿಟ್‌ʼ ಸಿನಿಮಾದ ಟೀಸರ್‌ ಆಗಲೇ ಎಲ್ಲರ ಗಮನಸೆಳೆದಿದೆ. ಸದ್ಯ ಈ ಸಿನಿಮಾ ಬಿಡುಗಡೆಗೆ ತಯಾರಾಗಿ ನಿಂತಿದೆ. ಸಿನಿಮಾವೊಂದು ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗೋದು ವಾಡಿಕೆ. ಆದರೆ, ಈ ಸಿನಿಮಾದ ಶೀರ್ಷಿಕೆಯೇ ʻಸೂಪರ್ ಹಿಟ್ʼ ಅಂತ ಇರುವುದು ವಿಶೇಷ. ಇನ್ನು, ಇದಕ್ಕೆ ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಕೂಡ ಇದೆ.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಈ ಚಿತ್ರಕ್ಕೆ ವಿಜಯಾನಂದ ಎಂಬುವವರು ನಿರ್ದೇಶನ ಮಾಡಿದ್ದು, ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಉಮೇಶ್‌ ಜಿ ಅವರು ಹಣ ಹಾಕಿದ್ದಾರೆ. "ಕಥೆಗೆ ಈ ಶೀರ್ಷಿಕೆ ಸೂಕ್ತವಾಗಿದ್ದರಿಂದ ಸೂಪರ್‌ ಹಿಟ್‌ ಎಂದು ಹೆಸರಿಟ್ಟಿದ್ದೇವೆ. ಈಚೆಗೆ ಸು ಫ್ರಂ ಸೋ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನಮ್ಮ ಈ ಚಿತ್ರಕ್ಕೂ ಅಂಥದ್ದೇ ಬೆಂಬಲ ಸಿಗುವ ಆಶಯ ಮತ್ತು ಭರವಸೆ ಇದೆ" ಎನ್ನುತ್ತಾರೆ ವಿಜಯಾನಂದ. ಅಂದಹಾಗೆ, ಇವರು ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್‌ ಅವರ ಸಹೋದರ. ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಕಮರ್ಶಿಯಲ್ ಹಾದಿಯಲ್ಲಿ ಈ ಸಿನಿಮಾವನ್ನು ರೂಪಿಸಿದ್ದಾರಂತೆ.

BBK 12: 'ಗಿಲ್ಲಿ ನಟ ಹುಲಿ, ಒನ್‌ ಮ್ಯಾನ್‌ ಆರ್ಮಿ, ಅವ್ನೇ ಬಿಗ್‌ ಬಾಸ್‌ ಶೋ ನಡೆಸ್ತಾ ಇದ್ದಾನೆ'; ಜೊತೆಗಿದ್ದ ಸ್ಪರ್ಧಿಯಿಂದಲೇ ಬಂತು ಅಚ್ಚರಿಯ ಮಾತು!

ಥ್ರಿಲ್ಲರ್ ಕಾಮಿಡಿ ಜಾನರ್‌ನ ಸಿನಿಮಾ

"ಈಗಾಗಲೇ ನಮ್ಮ ಸೂಪರ್‌ ಹಿಟ್‌ ಸಿನಿಮಾದ ಎಲ್ಲಾ ಕೆಲಸಗಳು ಮುಕ್ತಾಯಗೊಂಡಿವೆ. ಒಂದೊಳ್ಳೆ ಸಮಯ ನೋಡಿ ಬಿಡುಗಡೆ ಮಾಡಲಿದ್ದೇವೆ. ಇಡೀ ಸಿನಿಮಾದಲ್ಲಿ ಆರಂಭದಿಂದ ಕೊನೆಯವರೆಗೂ ಪ್ರತೀ ಹತ್ತು ನಿಮಿಷಕ್ಕೊಮ್ಮೆ ಪ್ರೇಕ್ಷಕರನ್ನು ಬೆರಗಾಗಿಸುವಂಥ ಅಂಶಗಳು, ತಿರುವುಗಳಿವೆ. ಮೊದಲ ಬಾರಿ ಥ್ರಿಲ್ಲರ್ ಕಾಮಿಡಿ ಜಾನರಿನಲ್ಲಿ ಭಿನ್ನ ಪ್ರಯತ್ನವಾಗಿ ಈ ಸಿನಿಮಾ ಮಾಡಿದ್ದೇವೆ" ಎನ್ನುತ್ತಾರೆ ವಿಜಯಾನಂದ.

ಹಲವು ಅನುಭವಿ ಕಲಾವಿದರ ನಟನೆ

ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ಜೊತೆಗೆ ಶ್ವೇತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು, ʻಭೀಮʼ ಖ್ಯಾತಿಯ ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜಿಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣವನ್ನು ಆರ್ ಡಿ ನಾಗಾರ್ಜುನ ಮಾಡಿದ್ದಾರೆ. ಸಂಕಲನದ ಹೊಣೆ ಶ್ರೀಕಾಂತ್ ಅವರದ್ದು. ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ ವಿ ನಾಗೇಂದ್ರ ಪ್ರಸಾದ್.