ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 12: ಅಬ್ಬಬ್ಬಾ! ಕಾಸ್ಟ್ಯೂಮ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಜಾಹ್ನವಿ! ʻಬಿಗ್‌ ಬಾಸ್‌ʼಗಾಗಿ ಮಾಡಿದ್ರು ಫುಲ್‌ ಶಾಪಿಂಗ್!‌

Bigg Boss Kannada 12 Jhanvi: ಬಿಗ್ ಬಾಸ್ ಕನ್ನಡ ಸೀಸನ್ 12 ರಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಜಾಹ್ನವಿ ಅವರು, ಶೋಗೆ ಹೋಗುವುದಕ್ಕೂ ಮುನ್ನ ಮಾಡಿದ ಶಾಪಿಂಗ್ ಬಗ್ಗೆ ಅಚ್ಚರಿಯ ವಿವರ ಹಂಚಿಕೊಂಡಿದ್ದಾರೆ. 'ಬಿಗ್ ಬಾಸ್‌ನಲ್ಲಿ ಕೋಟ್ಯಂತರ ಜನರು ನೋಡುತ್ತಾರೆ' ಎಂಬ ಕಾರಣಕ್ಕೆ, ತಮ್ಮ ಕಾಸ್ಟ್ಯೂಮ್‌, ಮೇಕಪ್‌ ಮತ್ತು ಪಿಆರ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರಂತೆ ಜಾಹ್ನವಿ!

BBK 12: ಕಾಸ್ಟ್ಯೂಮ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಜಾಹ್ನವಿ!

-

Avinash GR
Avinash GR Dec 2, 2025 7:22 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಿಂದ ಎಲಿಮಿನೇಟ್‌ ಆಗಿ ಜಾಹ್ನವಿ ಅವರು ಹೊರಗೆ ಬಂದಿದ್ದಾರೆ. ವೀಕ್ಷಕರ ಹೆಚ್ಚಿನ ಪ್ರೀತಿ ಗಳಿಸುವಲ್ಲಿ ವಿಫಲರಾದ ಅವರು ಶೋನಿಂದ ಎಲಿಮಿನೇಟ್‌ ಆಗಿದ್ದಾರೆ. ಇದೀಗ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಬಿಗ್ ಬಾಸ್‌ ಮನೆಗೆ ಹೋಗುವುದಕ್ಕೂ ಮುನ್ನ ಮಾಡಿದ ಶಾಪಿಂಗ್‌ ಬಗ್ಗೆ, ಅದಕ್ಕಾಗಿ ಖರ್ಚಾದ ಹಣದ ಬಗ್ಗೆ ಜಾಹ್ನವಿ ಮಾತನಾಡಿದ್ದಾರೆ.

4 ಲಕ್ಷ ರೂ. ಹಣ ಖರ್ಚಾಗಿದ್ದೇಕೆ?

"ನನಗೆ ದುಡ್ಡು ಮುಖ್ಯವಾಗಿಲ್ಲ. ನನ್ನ ಕಾಸ್ಟ್ಯೂಮ್‌, ಪಿಆರ್‌, ಮೇಕಪ್‌ಗೆಂದೇ ಅಂದಾಜು ನಾಲ್ಕು ಲಕ್ಷ ರೂಪಾಯಿ ಖರ್ಚಾಗಿದೆ. ಬಿಗ್‌ ಬಾಸ್‌ನಲ್ಲಿ ನನ್ನನ್ನು ಕೋಟ್ಯಂತರ ಜನರು ನೋಡುತ್ತಾರೆ ಎಂಬ ಕಾರಣಕ್ಕೆ ನಾನು ಇಷ್ಟೆಲ್ಲಾ ಹಣವನ್ನು ಹೂಡಿಕೆ ಮಾಡಿದ್ದೆ. ಕೋಟ್ಯಂತರ ಜನರು ನೋಡುವ ಶೋ ಅದು, ಹಾಗಾಗಿ, ಲುಕ್ಸ್‌ ಮೇಲೆ ಕಾಂಪ್ರಮೈಸ್‌ ಆಗೋದೇ ಬೇಡ ಎಂದು ನಿರ್ಧರಿಸಿದ್ದೆ. ನಾನು ಹಾಕುತ್ತಿದ್ದ ಕಾಸ್ಟ್ಯೂಮ್‌ ಬಗ್ಗೆಯೇ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಅಷ್ಟೊಂದು ರೀಚ್‌ ಆಗಿದೆ ಅಲ್ವಾ? ಅದೇ ನನಗೆ ಖುಷಿ ನೀಡುತ್ತಿದೆ" ಎಂದು ಜಾಹ್ನವಿ ಹೇಳಿದ್ದಾರೆ.

BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ

ಇಷ್ಟು ದೊಡ್ಡ ರಿಯಾಲಿಟಿ ಶೋನಲ್ಲಿ ಭಾಗಿಯಾಗುವುದೇ ಖುಷಿ

"ನನ್ನೆಲ್ಲಾ ಡಿಸೈನರ್ಸ್‌ಗೆ ಥ್ಯಾಂಕ್ಸ್‌ ಹೇಳಬೇಕು. ನಾನು ಹಾಕಿಕೊಳ್ಳುವ ಕಾಸ್ಟ್ಯೂಮ್‌ ಬಗ್ಗೆಯೂ ಇಷ್ಟೊಂದು ಟಾಕ್‌ ಆದಾಗ ನನಗೆ ಖುಷಿ ಆಗುತ್ತದೆ. ನಾವೇನು ಅಂದುಕೊಂಡು ಹೋಗಿದ್ದೆವೋ, ಅದು ವರ್ಕ್‌ ಆಗಿದೆ ಅಂದ್ರೆ ಅದೇ ಸಂತೋಷ ನಮಗೆ. ವೀಕೆಂಡ್‌ ಅಲ್ಲಿ ನಾನು ಹಾಕಿರುವ ಕಾಸ್ಟ್ಯೂಮ್‌ ಕೊಲಾಬ್ರೇಷನ್‌ ಬರ್ತಾ ಇತ್ತು. ಬಾಕಿ ಎಲ್ಲಾ ನಾನೇ ಖರ್ಚು ಮಾಡಿ ತಗೊಂಡಿದ್ದು. ನಾನು ಈ ಶೋಗೆ ಕಾಡಿಬೇಡಿ ಬಂದರೂ, ಅದು ದುಡ್ಡಿಗಲ್ಲ. ಆ ಶೋನ ರೀಚ್‌ ಎಷ್ಟು ಎಂಬುದು ನನಗೆ ಗೊತ್ತು. ಅದಕ್ಕಾಗಿ ನಾನು ಬಂದೆ. ದುಡ್ಡು ಎಷ್ಟು ಬರುತ್ತದೆ ಎಂಬುದಕ್ಕಿಂತ ಇಂಥದ್ದೊಂದು ದೊಡ್ಡ ರಿಯಾಲಿಟಿ ಶೋನಲ್ಲಿ ಭಾಗಿಯಾಗುವುದೇ ಒಂದು ಖುಷಿ" ಎಂದು ಜಾಹ್ನವಿ ಹೇಳಿದ್ದಾರೆ.

BBK 12: ಆ ಮೂರು ಮಂದಿ 'ಬಿಗ್‌ ಬಾಸ್‌' ಫಿನಾಲೆ ತಲುಪೋದು ಫಿಕ್ಸ್‌; ಜಾಹ್ನವಿ ಇಷ್ಟು ಕಾನ್ಫಿಡೆಂಟ್‌ ಆಗಿ ಹೇಳಿದ್ದೇಕೆ? ಯಾರಾಗಬೇಕು ವಿನ್ನರ್?

ಅಂದಹಾಗೆ, ಜಾಹ್ನವಿ ಅವರು ಈ ಸೀಸನ್‌ ಸ್ಟ್ರಾಂಗೆಸ್ಟ್‌ ಸ್ಪರ್ಧಿಗಳಲ್ಲಿ ಒಬ್ಬರು. ಅವರು ಈ ಶೋನಿಂದ ಇಷ್ಟು ಬೇಗ ಎಲಿಮಿನೇಷನ್‌ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಅದು ನಡೆದಿದೆ. ಆ ಬಗ್ಗೆ ಜಾಹ್ನವಿಗೂ ಕೂಡ ಬೇಸರ ಇದೆ. ಈಗಲೂ ವಾಪಸ್‌ ಕರೆದರೆ ಬಿಗ್‌ ಬಾಸ್‌ಗೆ ಖುಷಿಯಿಂದ ಹೋಗುವುದಾಗಿ ಹೇಳಿಕೊಳ್ಳುತ್ತಾರೆ ಜಾಹ್ನವಿ.