BBK 12: ಆ ಮೂರು ಮಂದಿ 'ಬಿಗ್ ಬಾಸ್' ಫಿನಾಲೆ ತಲುಪೋದು ಫಿಕ್ಸ್; ಜಾಹ್ನವಿ ಇಷ್ಟು ಕಾನ್ಫಿಡೆಂಟ್ ಆಗಿ ಹೇಳಿದ್ದೇಕೆ? ಯಾರಾಗಬೇಕು ವಿನ್ನರ್?
Bigg Boss Kannada 12 Finale Contestants: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಿಂದ ಎಲಿಮಿನೇಟ್ ಆಗಿರುವ ಜಾಹ್ನವಿ ಅವರು ಫಿನಾಲೆ ರೇಸ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಾಪ್ 3 ರಲ್ಲಿ ಇರುವ ಸ್ಪರ್ಧಿಗಳು ಯಾರು ಎಂದು ಜಾಹ್ನವಿ ಹೇಳಿದ್ದಾರೆ.
-
ಕಳೆದ ವಾರದ ಬಿಗ್ ಬಾಸ್ ಮನೆಯಿಂದ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಜಾಹ್ನವಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಸದ್ಯ ಜಾಹ್ನವಿ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು, ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಯಲ್ಲಿ ಟಾಪ್ 3 ಸ್ಪರ್ಧಿಗಳ್ಯಾರು? ಈ ಸಲ ಯಾರು ವಿನ್ನರ್ ಆಗಬೇಕು ಎಂಬುದರ ಬಗ್ಗೆ ಜಾಹ್ನವಿ ಮುಕ್ತವಾಗಿ ಮಾತನಾಡಿದ್ದಾರೆ.
ಟಾಪ್ 3ರಲ್ಲಿ ಗಿಲ್ಲಿ ಇರೋದು ಖಚಿತ!
ಹೌದು, ಜಾಹ್ನವಿ ಅವರು ಹೇಳಿರುವ ಪ್ರಕಾರ, ಟಾಪ್ 3ರಲ್ಲಿ ಗಿಲ್ಲಿ ನಟ ಇರುವುದು ಫಿಕ್ಸ್ ಅಂತೆ. ಅವರ ಜೊತೆಗೆ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಕೂಡ ಬಿಗ್ ಬಾಸ್ ಫಿನಾಲೆಯಲ್ಲಿ ಟಾಪ್ 3ರಲ್ಲಿ ಸ್ಥಾನ ಪಡೆಯಲಿದ್ದಾರಂತೆ. "ನನ್ನ ಪ್ರಕಾರ, ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅವರು ಟಾಪ್ 3ರಲ್ಲಿ ಇರ್ತಾರೆ ಅನ್ಸತ್ತೆ ಮತ್ತು ಅವರು ಇರಬೇಕು ಕೂಡ. ಅಸಲಿಗೆ ನನಗೆ ಗಿಲ್ಲಿ ಮತ್ತು ರಕ್ಷಿತಾ ನನ್ನ ಫೇವರೇಟ್ ಏನಲ್ಲ. ಆದರೂ ಅವರ ಆಟದ ವೈಖರಿಯನ್ನು ಗಮನಿಸಿದಾಗ, ಅವರು ಅಲ್ಲಿ ಇರಬೇಕು ಎಂಬುದು ನನ್ನ ಅಭಿಪ್ರಾಯ. ಟಾಪ್ 5ರಲ್ಲಿ ಬರಲು ಇನ್ನೂ ಬೇಕು. ಆದರೆ ಆ ಇಬ್ಬರು ಯಾರು ಎಂದು ನನಗಂತೂ ಕಾಣಿಸುತ್ತಿಲ್ಲ. ಅಷ್ಟೊಂದು ವರ್ತ್ ಯಾರೂ ಇಲ್ಲ" ಎಂದು ಜಾಹ್ನವಿ ಅವರು ಹೇಳಿದ್ದಾರೆ.
BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ
ಅಶ್ವಿನಿ ಗೌಡ ಅವರು ವಿನ್ನರ್ ಆಗಲಿ
"ಬಿಗ್ ಬಾಸ್‌ನಲ್ಲಿ ಈವರೆಗೂ ಶ್ರುತಿ ಒಬ್ಬರೇ ಫಿಮೇಲ್ ವಿನ್ನರ್. ಹಾಗಾಗಿ, ಈ ಸಲ ಅಶ್ವಿನಿ ಗೌಡ ಅವರು ವಿನ್ನರ್ ಆಗಬೇಕು. ತಪ್ಪಾಗಿದೆ, ಆಗಿಲ್ಲ ಎಂದು ನಾನು ಹೇಳುವುದಿಲ್ಲ. ಅನ್ನಿಸಿದ್ದನ್ನ ಅವರು ನೇರವಾಗಿ ಹೇಳುತ್ತಿದ್ದಾರೆ. ಟಾಸ್ಕ್‌ಗಳನ್ನು ಕೂಡ ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಗಿಲ್ಲಿ ಎಲ್ಲರನ್ನು ನಗಿಸುತ್ತಿದ್ದಾರೆ, ಬಹಳಷ್ಟು ಜನರನ್ನು ಸೆಳೆದಿದ್ದಾರೆ. ಆದರೆ ಬಿಗ್ ಬಾಸ್ ಅನ್ನೋದು ವ್ಯಕ್ತಿತ್ವದ ಆಟ ಅಂತ ನಾನು ಹೇಳಿದ್ದೇನೆ. ಗಿಲ್ಲಿಯಲ್ಲಿ ನಾವು ಕಾಮಿಡಿ ಬಿಟ್ಟರೆ ಬೇರೇನೂ ನಾನು ನೋಡಿಲ್ಲ. ಅವನಲ್ಲಿ ಬೇರೆ ಎಮೋಷನ್ಸ್ ಕಾಣುತ್ತಿಲ್ಲ. ಆದರೂ ಬಿಗ್ ಬಾಸ್ ಗೆಲ್ಲೋದು ಅವನೇ. ಆದರೆ ನನಗೆ ಅಶ್ವಿನಿ ಗೌಡ ಅವರೇ ಗೆಲ್ಲಬೇಕು" ಎಂದು ಜಾಹ್ನವಿ ಹೇಳಿದ್ದಾರೆ.
Bigg Boss Kannada 12: ಬಿಗ್ ಬಾಸ್ ಮನೆಯಿಂದ ಜಾಹ್ನವಿ ಔಟ್! ಕಣ್ಣೀರಿಟ್ಟ ಅಶ್ವಿನಿ ಗೌಡ
ಸದ್ಯ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ಜಾಹ್ನವಿ ಕೂಡ ಗಿಲ್ಲಿನೇ ಗೆಲ್ಲೋದು ಅನ್ನೋ ಮಾತನ್ನು ಹೇಳಿದ್ದಾರೆ. ಆದರೆ ಅವರಿಗೆ ಅಶ್ವಿನಿ ಗೌಡ ಅವರು ಗೆಲ್ಲಬೇಕು ಎಂಬ ಆಸೆ ಇದೆ.