Kiara Advani and Sidharth: ಕಿಯಾರಾ-ಸಿದಾರ್ಥ್ ಮಗುವಿನ ಫೇಸ್ ರಿವೀಲ್? ಸಲ್ಲು ಜೊತೆಗಿರುವ ಫೋಟೋದ ಅಸಲಿಯತ್ತು ಏನು?
ಬಾಲಿವುಡ್ ಸಿನಿಮಾ ಹಾಗೂ ಬಿಗ್ ಬಾಸ್ ಖ್ಯಾತಿಯ ನಟ ಸಲ್ಮಾನ್ ಖಾನ್ ಅವರು ನಟಿ ಕಿಯಾರ ಅಡ್ವಾಣಿ ಅವರ ಆರೋಗ್ಯ ವಿಚಾರಿಸಲು ಬಂದಿದ್ದು ಮಗುವಿನ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದಾರ್ಥ್ ಫ್ಯಾಮಿಲಿ ಜೊತೆಗೆ ನಟ ಸಲ್ಮಾನ್ ಖಾನ್ ಫೋಟೊ ವೈರಲ್ ಆಗುತ್ತಿದೆ. ಇಷ್ಟು ಬೇಗ ಪುಟ್ಟ ಮಗುವಿನ ಫೋಟೊ ಶೇರ್‌ಮಾಡಿಕೊಂಡಿದ್ದಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗಿದ್ದು, ಇದೀಗ ಫೋಟೊ ಹಿಂದಿನ ಅಸಲಿ ಸತ್ಯ ಬಯಲಾಗಿದೆ.


ನವದೆಹಲಿ: ಬಾಲಿವುಡ್‌ನ ಸೆಲೆಬ್ರಿಟಿ ಕಪಲ್‌ಗಳಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರ (Sidharth Malhotra) ಮತ್ತು ಕಿಯಾರ ಅಡ್ವಾಣಿ (Kiara Advani) ಕೂಡ ಒಬ್ಬರಾಗಿದ್ದಾರೆ. ಈ ದಂಪತಿಗಳಿಗೆ ಜುಲೈ 15ರಂದು ಹೆಣ್ಣು ಮಗು ಜನಿಸಿದ್ದು ಈ ಖುಷಿಯ ವಿಚಾರವನ್ನು ಇತ್ತೀಚೆಗಷ್ಟೆ ದಂಪತಿಗಳು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರ ದಂಪತಿ ಗಳಿಗೆ ಸಿನಿಮಾ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭ ಹಾರೈಸುತ್ತಿದ್ದು ಈ ನಡುವೆ ಬಾಲಿವುಡ್ ಸಿನಿಮಾ ಹಾಗೂ ಬಿಗ್ ಬಾಸ್ ಖ್ಯಾತಿಯ ನಟ ಸಲ್ಮಾನ್ ಖಾನ್ ಅವರು ನಟಿ ಕಿಯಾರ ಅಡ್ವಾಣಿ ಅವರ ಆರೋಗ್ಯ ವಿಚಾರಿಸಲು ಬಂದಿದ್ದು ಮಗುವಿನ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದಾರ್ಥ್ ಫ್ಯಾಮಿಲಿ ಜೊತೆಗೆ ನಟ ಸಲ್ಮಾನ್ ಖಾನ್ ಫೋಟೊ ವೈರಲ್ ಆಗುತ್ತಿದೆ. ಇಷ್ಟು ಬೇಗ ಪುಟ್ಟ ಮಗುವಿನ ಫೋಟೊ ಶೇರ್‌ಮಾಡಿಕೊಂಡಿದ್ದಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗಿದ್ದು ಇದೀಗ ಫೋಟೊ ಹಿಂದಿನ ಅಸಲಿ ಸತ್ಯ ಬಯಲಾಗಿದೆ.
ನಟಿ ಕಿಯಾರ ಅಡ್ವಾಣಿ ಅವರು ಮುಂಬೈನ ರಿಲಯನ್ಸ್ ಆಸ್ಪತ್ರೆಯಲ್ಲಿ ಡೆಲಿವರಿ ಮಾಡಿಸಿ ಕೊಂಡಿದ್ದು ತಾಯಿ ಮತ್ತು ಮಗುವಿನ ಆರೋಗ್ಯವಾಗಿದ್ದಾರೆ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಪೋಸ್ಟ್ ಒಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೆ ನಟಿ ಕಿಯಾರ ಆರೋಗ್ಯ ವಿಚಾರಿಸಲು ನಟ ಸಲ್ಮಾನ್ ಖಾನ್ ಬಂದಿದ್ದು ಅಲ್ಲಿ ಮಗುವಿನ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ ಎನ್ನಲಾಗಿತ್ತು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ಏರ್ಪಡುವಂತೆ ಮಾಡಿದ್ದು ಇದು ಫೇಕ್ ಫೋಟೊ ಎಂಬ ಸತ್ಯ ತಿಳಿದುಬಂದಿದೆ.
ದಂಪತಿ ಜೊತೆಗೆ ನಟ ಸಲ್ಮಾನ್ ಖಾನ್ ಇರುವ ಫೋಟೊ ಎಡಿಟ್ ಮಾಡಿರುವುದಾಗಿದೆ. ಈ ಫೋಟೊದಲ್ಲಿ ಇರುವ ಮಗು ಸಿದ್ಧಾರ್ಥ್ ದಂಪತಿಯದ್ದಲ್ಲ ಮೂವರಿಗೂ ಡೀಪ್ ಎಐ ಬಳಸಿ ಫೇಕ್ ಫೋಟೊ ರಚಿಸಲಾಗಿದೆ. ಇನ್ನು ಕೆಲವರು ಇದು ಶೂಟಿಂಗ್ ನಲ್ಲಿ ಭಾಗಿಯಾದ ಹಳೆ ಫೋಟೊ ಎಂದು ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಯು ತಮ್ಮ ಮಗಳ ಜನನದ ನಂತರ ಈ ಬಗ್ಗೆ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ತಮಗೆ ಶುಭಾಶಯ ತಿಳಿಸಿದವರಿಗೆ ಧನ್ಯವಾದಗಳು, ಈ ಹೊಸ ಪ್ರಯಾಣಕ್ಕೆ ನಾವು ನಮ್ಮ ಮೊದಲ ಹೆಜ್ಜೆ ಇಡುತ್ತಿದ್ದು ಈ ಖುಷಿಯನ್ನು ಮೊದಲು ನಾವು ಕುಟುಂಬದೊಂದಿಗೆ ಆನಂದಿಸಲು ಆಶಿಸುತ್ತೇವೆ. ನಮ್ಮ ಪ್ರೈವೆಸಿಗೆ ಆದ್ಯತೆ ನೀಡಿ ಎಂದು ಮನವಿ ಮಾಡಿಕೊಂಡು ಪೋಸ್ಟ್ ಅನ್ನು ನಟ ಸಿದ್ಧಾರ್ಥ್ ಹಂಚಿಕೊಂಡಿದ್ದಾರೆ. ಹೀಗಾಗಿ ವೈರಲ್ ಆದ ಫೋಟೊ ಫೇಕ್ ಎಂಬುದು ಕಾತರಿಯಾಗಿದೆ.
ಬಾಲಿವುಡ್ ನಟಿ ಕಿಯಾರಾ ಹಾಗೂ ಸಿದ್ದಾರ್ಥ್ ಅವರು ಈ ಹಿಂದೆ ಶೇರ್ಷಾ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ಸಿನಿಮಾ ಅವರಿಬ್ಬರ ನಡುವೆ ಪ್ರೀತಿ ಮೂಡಿಸಲು ಮೂಲ ಕಾರಣವಾಗಿತ್ತು ಎನ್ನಲಾಗಿದೆ. ಇವರಿಬ್ಬರು 2023ರ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಸದ್ಯ ಇವರ ಬದುಕಿನ ಹೊಸ ಅಧ್ಯಯನ ಆರಂಭವಾಗಿದ್ದು ಮಗುವಿನ ಫೋಟೋ ಕಾಣಲು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ.