Fish Venkat: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತೆಲುಗು ಚಿತ್ರರಂಗದ ಹಿರಿಯ ನಟ ಫಿಶ್ ವೆಂಕಟ್ ನಿಧನ
ತೆಲುಗು ಚಿತ್ರರಂಗದ ಹಿರಿಯ ನಟ ಮತ್ತು ಹಾಸ್ಯ ಕಲಾವಿದ ಫಿಶ್ ವೆಂಕಟ್ (ಮಂಗಲಂಪಲ್ಲಿ ವೆಂಕಟೇಶ್) ಜುಲೈ 18ರಂದು ತಮ್ಮ 53ನೇ ವಯಸ್ಸಿನಲ್ಲಿ ನಿಧನರಾದರು. ಕಿಡ್ನಿ ಸಂಬಂಧಿತ ರೋಗದಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಫಿಶ್ ವೆಂಕಟ್

ಹೈದರಾಬಾದ್: ತೆಲುಗು ಚಿತ್ರರಂಗದ (Telugu Film Industry) ಹಿರಿಯ ನಟ ಮತ್ತು ಹಾಸ್ಯ ಕಲಾವಿದ ಫಿಶ್ ವೆಂಕಟ್ (Fish Venkat) (ಮಂಗಲಂಪಲ್ಲಿ ವೆಂಕಟೇಶ್) ಶುಕ್ರವಾರ (ಜುಲೈ 18) ತಮ್ಮ 53ನೇ ವಯಸ್ಸಿನಲ್ಲಿ ನಿಧನರಾದರು. ಕಿಡ್ನಿ ಸಂಬಂಧಿತ ರೋಗದಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನ (Hyderabad) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ವೆಂಕಟ್ ಇತ್ತೀಚೆಗೆ ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ (ICU) ಕಿಡ್ನಿ ಕಸಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ತಿಂಗಳ ಆರಂಭದಲ್ಲಿ, ವೆಂಕಟ್ ಅವರ ಪುತ್ರಿ ಶ್ರಾವಂತಿ, ತಂದೆಯ ಆರೋಗ್ಯದ ಬಗ್ಗೆ ಮಾತನಾಡಿದ್ದರು. “ತಂದೆಯ ಸ್ಥಿತಿ ಗಂಭೀರವಾಗಿದೆ. ಕಿಡ್ನಿ ಕಸಿಗೆ ಕನಿಷ್ಠ 50 ಲಕ್ಷ ರೂ. ಖರ್ಚಾಗಲಿದೆ. ಪ್ರಭಾಸ್ ತಂಡದಿಂದ ಆರ್ಥಿಕ ಸಹಾಯದ ಕರೆ ಬಂದಿತ್ತು” ಎಂದಿದ್ದರು. ಆದರೆ ವೆಂಕಟ್ ಅವರ ಕುಟುಂಬದ ಇನ್ನೊಬ್ಬ ಸದಸ್ಯ ಆ ಕರೆ ನಕಲಿಯಾಗಿತ್ತು ಎಂದು ಸ್ಪಷ್ಟಪಡಿಸಿದ್ದರು. “ಪ್ರಭಾಸ್ ಅವರ ಸಹಾಯಕನೆಂದು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಆದರೆ, ಅದು ನಕಲಿ ಕರೆಯಾಗಿತ್ತು. ಯಾವುದೇ ಆರ್ಥಿಕ ಸಹಾಯ ಬಂದಿಲ್ಲ” ಎಂದು ತಿಳಿಸಿದ್ದರು.
ಈ ಸುದ್ದಿಯನ್ನು ಓದಿ: Viral Video: ಸ್ಕೂಟರ್‌ಗೆ ಅಡ್ಡ ಬಂದ ಬೀದಿ ಶ್ವಾನ;ಬಾಲಕ ಸ್ಥಳದಲ್ಲೇ ಸಾವು
ಫಿಶ್ ವೆಂಕಟ್ ಯಾರು?
ಫಿಶ್ ವೆಂಕಟ್ ತೆಲುಗು ಚಿತ್ರರಂಗದ ಪ್ರಸಿದ್ಧ ಹಾಸ್ಯನಟರಾಗಿದ್ದರು. ತೆಲಂಗಾಣ ಶೈಲಿಯಲ್ಲಿ ಮಾತನಾಡುವ ಅವರು ‘ಫಿಶ್’ ಎಂಬ ಅಡ್ಡಹೆಸರು ಗಳಿಸಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ, ‘ಗಬ್ಬರ್ ಸಿಂಗ್’, ‘ಅಧುರ್ಸ್’, ‘ಡಿಜೆ ಟಿಲ್ಲು’, ‘ಬನ್ನಿ’, ಮತ್ತು ‘ಖುಷಿ’ಯಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು. ತೆಲುಗಿನಲ್ಲಿ ಖಳನಟನಾಗಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.
ಹಾಸ್ಯ ಮತ್ತು ಖಳನಾಯಕ ಪಾತ್ರಗಳಲ್ಲಿ ಅವರ ನಟನೆ ಎಲ್ಲರ ಮೆಚ್ಚುಗೆಗೆ ಪತ್ರವಾಗಿತ್ತು. ‘ಆದಿ’ ಚಿತ್ರದ “ತೊಡಗೊಟ್ಟು ಚಿನ್ನ” ಸಂಭಾಷಣೆ ಐಕಾನಿಕ್ ಆಗಿತ್ತು. ಅವರ ನಿಧನವು ಚಿತ್ರರಂಗದಲ್ಲಿ ಶೋಕದ ವಾತಾವರಣ ಸೃಷ್ಟಿಸಿದ್ದು, ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.