ಸೋಮವಾರದ ಪರೀಕ್ಷೆಯಲ್ಲಿ ʻಪೆದ್ದಿʼ ಪಾಸ್; ಕರ್ನಾಟಕದಲ್ಲಿ ರಾಮ್ ಚರಣ್ ಸಿನಿಮಾಗೆ ಈವರೆಗೂ ಸಿಕ್ಕ ಹಣವೆಷ್ಟು?
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಐದೇ ದಿನಗಳಲ್ಲಿ 315 ಕೋಟಿ ರೂ. ಗಳಿಸಿದೆ. ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಅತ್ಯಂತ ವೇಗವಾಗಿ 300 ಕೋಟಿ ಕ್ಲಬ್ ಸೇರಿದ ಮೊದಲ ಸೋಲೋ ಚಿತ್ರ ಇದಾಗಿದೆ. ಕರ್ನಾಟಕದಲ್ಲಿಯೂ ಪೆದ್ದಿ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ.
-
ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ನಾಯಕನಾಗಿ ನಟಿಸಿರುವ ‘ಪೆದ್ದಿ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಜೂನ್ 4 ರಂದು ವಿಶ್ವಾದ್ಯಂತ ತೆರೆಕಂಡ ಈ ಸಿನಿಮಾ, ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು ಉತ್ತಮ ಕಮಾಯಿ ಮಾಡುತ್ತಿದೆ. ಸದ್ಯ ಈ ಚಿತ್ರವು ಕೇವಲ 5 ದಿನಗಳಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದು, ವಿಶ್ವಾದ್ಯಂತ ಒಟ್ಟು 315 ಕೋಟಿ ರೂ.ಗಳನ್ನು ಬಾಚಿಕೊಂಡಿದೆ.
Peddi Review: ಕ್ರಾಸ್‌ಓವರ್ ಅಥ್ಲೀಟ್ ಪೆದ್ದಿಯ ಸಾಧಾರಣ ಆಟ; ಬದುಕಿನ ಗುರುತಿಗಾಗಿ ನಡೆಯುವ ಅಸಾಧಾರಣ ಹೋರಾಟ!
5 ದಿನಗಳಲ್ಲೇ 300 ಕೋಟಿ ಕ್ಲಬ್‌ಗೆ ಎಂಟ್ರಿ
ಬಾಕ್ಸ್ ಆಫೀಸ್‌ನಲ್ಲಿ ಚಾಂಪಿಯನ್ ಆಗಿ ಮುನ್ನುಗ್ಗುತ್ತಿರುವ ‘ಪೆದ್ದಿ’ ಸಿನಿಮಾ, ಕೇವಲ 5 ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 315 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ. ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಅತ್ಯಂತ ವೇಗವಾಗಿ 300 ಕೋಟಿ ಕ್ಲಬ್ ಸೇರಿದ ಮೊದಲ ಸೋಲೋ ಚಿತ್ರ ಎಂಬ ಹೆಗ್ಗಳಿಕೆಗೆ ಪೆದ್ದಿ ಪಾತ್ರವಾಗಿದೆ. ರಾಮ್ ಚರಣ್ ಅವರ ನಟನೆ, ಕ್ರೀಡಾ ಸ್ಫೂರ್ತಿಯ ಕಥೆ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ವಾರಾಂತ್ಯಕ್ಕೆ 292 ಕೋಟಿ ರೂ. ಗಳಿಸಿದ್ದ ಈ ಸಿನಿಮಾದ ಸೋಮವಾರದ ಗಳಿಕೆಯೂ 20 ಕೋಟಿ ರೂ. ದಾಟಿದೆ. ಆ ಮೂಲಕ ಮೊದಲ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದೆ.
ಪೆದ್ದಿ ಬಾಕ್ಸ್ ಆಫೀಸ್ ರಿಪೋರ್ಟ್
BOX OFFICE CHAMPION #PEDDI continues his dominance 🔥🔥#Peddi collects a gross of over 315 CRORES + GROSS WORLDWIDE in 5 days ❤🔥#PEDDI Now In Cinemas 💥https://t.co/EMhY3eMGKq pic.twitter.com/e5fZ2thleb
— PEDDI (@PeddiMovieOffl) June 9, 2026
ಕರ್ನಾಟಕದಲ್ಲಿ ಸಿಕ್ಕ ಹಣವೆಷ್ಟು?
ಕರ್ನಾಟಕದ ಬಾಕ್ಸ್ ಆಫೀಸ್‌ನಲ್ಲೂ ‘ಪೆದ್ದಿ’ ಭರ್ಜರಿ ಬೇಟೆಯಾಡುತ್ತಿದೆ. ಮೊದಲ ದಿನವೇ ಕರ್ನಾಟಕದಲ್ಲಿ 8 ಕೋಟಿ ರೂ.ಗಳಿಗೂ ಅಧಿಕ ಕಮಾಯಿ ಮಾಡಿದ್ದ ಈ ಸಿನಿಮಾ, ವಾರದ ಮೊದಲ ದಿನವಾದ ಸೋಮವಾರವೂ ತನ್ನ ಗಟ್ಟಿ ಹಿಡಿತ ಸಾಧಿಸಿ ಪಾಸ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಪರಭಾಷಾ ಸಿನಿಮಾವೊಂದು ಕರ್ನಾಟಕದ ಮಾರುಕಟ್ಟೆಯಲ್ಲಿ ಕೇವಲ 5 ದಿನಗಳಲ್ಲಿ ₹23 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವುದು ಒಂದು ದೊಡ್ಡ ದಾಖಲೆಯಾಗಿದೆ.
ಕರ್ನಾಟಕದ 5 ದಿನಗಳ ಕಲೆಕ್ಷನ್ ವಿವರ:
ಮೊದಲ ದಿನ: 8.85 ಕೋಟಿ ರೂ.
ಎರಡನೇ ದಿನ: 3.42 ಕೋಟಿ ರೂ.
ಮೂೂರನೇ ದಿನ: 4.69 ಕೋಟಿ ರೂ.
ನಾಲ್ಕನೇ ದಿನ: 4.76 ಕೋಟಿ ರೂ.
ಐದನೇ ದಿನ (ಸೋಮವಾರ): 1.32 ಕೋಟಿ ರೂ.
ಒಟ್ಟು ಕಲೆಕ್ಷನ್: 23.04 ಕೋಟಿ ರೂಪಾಯಿಗಳು
ಆನ್‌ಲೈನ್ ಬುಕಿಂಗ್ಸ್‌ನಲ್ಲಿ ಸೆನ್ಸೇಷನ್
ಉತ್ತರ ಭಾರತದ ಪ್ರೇಕ್ಷಕರಿಗೆ ಕ್ರೇಜಿ ಆಫರ್
ಇನ್ನು, ಉತ್ತರ ಭಾರತದ ಮಾರುಕಟ್ಟೆಯಲ್ಲಿ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಇದರ ಭಾಗವಾಗಿ ಮಂಗಳವಾರದ (ಜೂನ್ 9) ಒಂದು ದಿನ ಉತ್ತರ ಭಾರತದ ಆಯ್ದ ಕೆಲವು ಪ್ರಮುಖ ಚಿತ್ರಮಂದಿರಗಳಲ್ಲಿ ‘ಪೆದ್ದಿ’ ಚಿತ್ರದ ಟಿಕೆಟ್ ದರವನ್ನು ಕೇವಲ 199 ರೂ.ಗಳಿಗೆ ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಆರಂಭದಲ್ಲಿ ಟಿಕೆಟ್ ದರ ಜಾಸ್ತಿ ಇರುತ್ತದೆ. ಆದರೆ ಪೆದ್ದಿ ತಂಡದ ಈ ಹೊಸ ನಿರ್ಧಾರ ಸಿನಿಮಾದ ಕಲೆಕ್ಷನ್ ಹೆಚ್ಚಿಸಲು ಸಹಕಾರಿಯಾಗಲಿದೆ ಎನ್ನಲಾಗಿದೆ.
Janhvi Kapoor: 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಪಾತ್ರಕ್ಕೆ ಅಗೌರವ! ಏನಿದು ಚರ್ಚೆ?
ಈ ಚಿತ್ರದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದರೆ, ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಈ ಸಿನಿಮಾಕ್ಕೆ ಸಖತ್ ಬೂಸ್ಟ್ ನೀಡಿದೆ.