About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ನ್ಯೂಜಿಲ್ಯಾಂಡ್‍ನಲ್ಲಿ ದೇಶಾಭಿಮಾನ ಮೆರೆದ್ರು ಕೂಲ್ ಕೂಲ್ ಧೋನಿ! (ವಿಡಿಯೊ)

ಹ್ಯಾಮಿಲ್ಟನ್​: ಭಾನುವಾರ ನ್ಯೂಜಿಲೆಂಡ್​ನ ಹ್ಯಾಮಿಲ್ಟನ್​ನಲ್ಲಿ ಕಿವೀಸ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ಸೋಲನುಭವಿಸಿತು. ಆದ್ರೆ, ಈ ಪಂದ್ಯದಲ್ಲಿ ನಡೆದ ಒಂದು ಘಟನೆಯಿಂದ ಎಂ.ಎಸ್.ಧೋನಿ ಮಾತ್ರ ಅಭಿಮಾನಿಗಳ ಮನಸು ಗೆದ್ದಿದ್ದಾರೆ.

ಪಂದ್ಯದ ವೇಳೆ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿದ್ದ ಸೆಕ್ಯೂರಿಟಿಯನ್ನೂ ಲೆಕ್ಕಿಸದೆ ಪಿಚ್​ಗೆ ನುಗ್ಗಿದ್ದ. ಧೋನಿಯ ಅಭಿಮಾನಿ, ತನ್ನ ನೆಚ್ಚಿನ ಆಟಗಾರನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದ. ಆದ್ರೆ ಈ ವೇಳೆ ಆತ ಒಂದು ತಪ್ಪು ಮಾಡಿದ್ದ. ಪಿಚ್​ಗೆ ಬಂದ ಅಭಿಮಾನಿಯ ಕೈಯಲ್ಲಿ ಭಾರತದ ತ್ರಿವರ್ಣ ಧ್ವಜವಿತ್ತು. ಪಿಚ್​ಗೆ ಬಂದೋನೆ ಧೋನಿ ಪಾದಕ್ಕೆ ಎರಗಿದ್ದ. ಈ ವೇಳೆ ಆತನ ಕೈಯಲ್ಲಿದ್ದ ತಿರಂಗಾ, ಧೋನಿಯ ಕಾಲಿಗೆ ತಗುಲಿದೆ. ಕೂಡಲೇ ಎಚ್ಚೆತ್ತ ಮಾಹಿ, ತ್ರಿವರ್ಣ ಧ್ವಜವನ್ನ ಅಭಿಮಾನಿಯ ಕೈಯಿಂದ ತೆಗೆದುಕೊಂಡು ಮೇಲೆತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನ ನೋಡಿದ ಧೋನಿ ಅಭಿಮಾನಿಗಳು, ಮಾಹಿಯ ದೇಶಾಭಿಮಾನಕ್ಕೆ ಶಹಬ್ಬಾಸ್ ಅಂತಾ ಪ್ರಶಂಸೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close