ವಿಶ್ವವಾಣಿ

ನನಗೆ ಮರ್ಯಾದೆ ಸಿಗುತ್ತಿಲ್ಲ: ಮುಲಾಯಂ ಸಿಂಗ್‌

ತಮಗೆ ಯಾರೂ ಮರ್ಯಾದೆ ನೀಡುತ್ತಿಲ್ಲ ಎಂದಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌, ತಾವು ಸತ್ತ ಬಳಿಕ ಜನ ತಮ್ಮನ್ನು ನೆನೆಯಬಹುದು ಎಂದಿದ್ದಾರೆ.

2017ರ ಆರಂಭದಲ್ಲಿ ಸಮಾಜವಾದಿ ಪಕ್ಷದ ಉಸ್ತುವಾರಿ ವಿಚಾರವಾಗಿ ಸಾಕಷ್ಟು ತಿಕ್ಕಾಟ ನಡೆದಿತ್ತು. ಬಳಿಕ ಮುಲಾಯಂ ಪುತ್ರ ಅಖಿಲೇಶ್‌ ಯಾದವ್‌ ಪಕ್ಷದ ಚುಕ್ಕಾಣಿ ವಹಿಸಿಕೊಂಡಿದ್ದರು.

“ಇಂದು ನನ್ನನ್ನು ಯಾರೂ ಗೌರವಿಸುತ್ತಿಲ್ಲ. ಬಹುಶಃ ನನ್ನ ಸಾವಿನ ಬಳಿಕ ಇವರೆಲ್ಲ ನನ್ನನ್ನು ನೆನೆಯಲಿದ್ದಾರೆ. ಈ ದೇಶದಲ್ಲಿ ಸತ್ತ ಬಳಿಕ ಜನರು ಗೌರವ ನೀಡುತ್ತಾರೆ ಎಂದು ರಾಮಮನೋಹರ್‌ ಲೋಹಿಯಾಜೀ ಹೇಳಿದ್ದು ನೆನೆಪಾಗುತ್ತಿದೆ” ಎಂದು ಮುಲಾಯಂ ಇದೇ ಸಂದರ್ಭ ತಿಳಿಸಿದ್ದಾರೆ.