ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿಯ ಕೊಲೆ ಅಂತ್ಯ

Posted In : ಧಾರವಾಡ, ರಾಜ್ಯ

ಧಾರವಾಡ : ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವೊಂದು ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ  ಜಯನಗರ ಬಡಾವಣೆಯಲ್ಲಿ ಸಂಭವಿಸಿದೆ.

ಪರಮಾನಂದ ಕೆಂಬಾವಿ(25) ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಪರಮಾನಂದ ಜಯನಗರ ಬಡಾವಣೆಯ ನಿವಾಸಿಯಾಗಿದ್ದು, ಮೂವರಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪರಮಾನಂದ, ಬೀದಿ ಬದಿಯ ಎಗ್ ರೈಸ್ ಅಂಗಡಿ ಇಟ್ಡುಕೊಂಡಿದ್ದ.

ಭಾನುವಾರ ಮಧ್ಯರಾತ್ರಿ ಅಂಗಡಿಗೆ ಬಂದ ಮೂವರಿಂದ ಆರಂಭಗೊಂಡ ಜಗಳ ಅತಿರೇಕಕ್ಕೆ ತಿರುಗಿ ಪರಮಾನಂದನ ಕೊಲೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

nineteen − one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top