About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಅಂಡಮಾನ್‌‌ನಲ್ಲಿ ಅಮೇರಿಕಾ ಪ್ರವಾಸಿಗನ ಕೊಲೆ

ಫೋರ್ಟ್‌ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್‌ಗೆ ಭೇಟಿ ನೀಡಿದ ಪ್ರವಾಸಿಗನನ್ನು ಹರಿತ ಶಸ್ತ್ರಾಸ್ತ್ರಗಳಿಂದ ಇರಿದು ಬುಡಕಟ್ಟು ಜನಾಂಗ ಕೊಲೆಗೈದಿದೆ ಎಂದು ಬುಧವಾರ ಪೋಲಿಸರು ತಿಳಿಸಿದ್ದಾರೆ.

ಅಂಡಮಾನ್‌ನ ಉತ್ತರ ಸೆಂಟಿನೆಲ್ ದ್ವೀಪಗಳಿಗೆ ಆಗಮಿಸಿದ ಅಮೇರಿಕಾ ಪ್ರವಾಸಿಗ ಜಾನ್ ಅಲೆನ್ ಚಾವ್ ಎಂಬ ವ್ಯಕ್ತಿಯನ್ನು ಕೊಂದ ಆರೋಪದಡಿ 7 ಮೀನುಗಾರರನ್ನು ಬಂಧಿಸಲಾಗಿದೆ ಎಂದು ಪೋಲಿಸ್ ಅಧಿಕಾರಿ ವಿಜಯ್ ಸಿಂಗ್ ತಿಳಿಸಿದ್ದಾರೆ. ಆಶ್ಚರ್ಯ ವಿಷಯವೆಂದರೆ ಈ ದ್ವೀಪಕ್ಕೆ ಪ್ರವಾಸಿಗರ ಭೇಟಿಗೆ ಸರಕಾರದಿಂದ ನಿರ್ಬಂಧವಿದೆ. ಪೋಲಿಸ್ ದಾಖಲೆಗಳ ಪ್ರಕಾರ ಅಮೇರಿಕ ಪ್ರವಾಸಿಗನ ಕುಟುಂಬದವರನ್ನು ಸಂಪರ್ಕಿಸಲು ಎಂದು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿನ ಮೂಲನಿವಾಸಿಗಳು ತಮ್ಮದೇ ಸಣ್ಣ ಅರಣ್ಯವನ್ನು ಹೊಂದಿದ್ದು, ಅಲ್ಲಿ ವಾಸಿಸುತ್ತಿದ್ದು, ಹೊರಗಿನವರೊಡನೆ ಸಂಪರ್ಕ ಬಯಸುವುದಿಲ್ಲ. ಅಲ್ಲದೆ ಅವರ ಪ್ರದೇಶಕ್ಕೆ ಬಂದ ಅಪರಿಚಿತ ವ್ಯಕ್ತಿಗಳ ಮೇಲೆ ದಾಳಿ ಮಾಡುವುದು ಸರ್ವೆಸಾಮಾನ್ಯವಾಗಿದೆ.

ಮಾಧ್ಯಮ ವರದಿಯ ಆಧಾರದ ಮೇಲೆ ಮೃತಪಟ್ಟ ಅಮೇರಿಕಾದ ವ್ಯಕ್ತಿಯು ಅಂಡಮಾನ್ ದ್ವೀಪಗಳಿಗೆ ಸಾಹಸಮಯ ಪ್ರವಾಸಕ್ಕಾಗಿ ಆಗಮಿಸಿದ್ದನು ಎಂದು ತಿಳಿದುಬಂದಿದೆ. ಇಲ್ಲಿ ಸಾವನ್ನಪ್ಪಿರುವ ವ್ಯಕ್ತಿಯ ದೇಹವನ್ನು ಪೋಲಿಸರು ವಶಕ್ಕೆ ತೆಗೆದುಕೊಳ್ಳಬೇಕಾಗಿದೆ.

ಅಂಡಮಾನ್‌ನ ಉತ್ತರ ಸೆಂಟಿನಾಲ್ ದ್ವೀಪಗಳಲ್ಲಿ ಜನಾಂಗದವರು ಎಷ್ಟು ಮಂದಿ ಇದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಅವರ ಸಂಖ್ಯೆ ಕ್ಷಿಣಿಸುತ್ತಿದೆ, ಸರಕಾರ ಇದರ ಕುರಿತು ಗಮನ ಹರಿಸಬೇಕು.ಈ ಪ್ರದೇಶವು ಒಂದು ಸಂರಕ್ಷಿತ ಪ್ರದೇಶವಾಗಿದ್ದು, ಪ್ರವಾಸಿಗರಿಗೆ ನಿರ್ಬಂಧವಿದೆ ಎಂದು ಸಮಾಜಶಾಸ್ತ್ರ, ವಿಜ್ಞಾನಿ ಮತ್ತು ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್‌ನ ಪ್ರೋಪೆಸರ್ ಶಿವ ವಿಶ್ವನಾಥನ್ ಅವಲತ್ತುಕೊಂಡಿದ್ದಾರೆ.

ಈ ಪ್ರದೇಶದಲ್ಲಿ ಮೀನು ಹಿಡಿಯುವುದು ಅಪರಾಧ ಆದರೂ ಮೀನುಗಾರರು, ಆಮೆ, ಕಡಲ ನಳ್ಳಿ ಹಾಗೂ ಸಮುದ್ರ ಸೌತೆಗಳ ಆ ಪ್ರದೇಶಕ್ಕೆ ಮೀನು ಹಿಡಿಯಲು ಹೋಗುತ್ತಾರೆ. ಈ ಹಿಂದೆ 2006ರಲ್ಲಿ ಈ ಪ್ರದೇಶದ ಬುಡಕಟ್ಟು ಜನಾಂಗ ಇಬ್ಬರು ಮೀನುಗಾರರನ್ನು ಕೊಲೆಗೈದಿತ್ತು.

Tags

Related Articles

Leave a Reply

Your email address will not be published. Required fields are marked *

Language
Close