About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಇಸ್ಲಾಮಿಕ್‌ ದೇಶಗಳಿಂದ ಭಾರತಕ್ಕೆ ಬರುವ ಮುಸ್ಲಿಮರು ನಿರಾಶ್ರಿತರಲ್ಲ: ತ್ರಿಪುರಾ ರಾಜ್ಯಪಾಲ

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳ ಬಹುಸಂಖ್ಯಾರ ಮತಾಂಧ ಕೃತ್ಯಗಳಿಂದ ದೇಶ ಬಿಟ್ಟು ಬಂದ ಹಿಂದೂಗಳು, ಸಿಖ್ಖರು, ಕ್ರೈಸ್ತರು ಹಾಗು ಬೌದ್ಧರನ್ನು ಮಾತ್ರವೇ ನಿರಾಶ್ರಿತರು ಎನ್ನಲು ಬರುತ್ತದೆ

ಅಗರ್ತಲಾ: ನಿರಾಶ್ರಿತರಿಗೂ ಅಕ್ರಮ ವಲಸಿಗ ಘಾತುಕರಿಗೂ ಇರುವ ವ್ಯತ್ಯಾಸನ್ನು ತ್ರಿಪುರಾ ರಾಜ್ಯಪಾಲರರು ವ್ಯಾಖ್ಯಾನಿಸಿದ್ದಾರೆ.

“ತಮ್ಮ ದೇಶದಲ್ಲಿ ನಿಜವಾಗಿಯೂ ರಾಜಕೀಯ, ಧಾರ್ಮಿಕ, ಜನಾಂಗೀಯ ಕಾರಣಗಳಿಂದ ಅಸಲಿ ಹಿಂಸಾಚಾರ ನಡೆದು, ಅಲ್ಲಿಂದ ಪರಾರಿಯಾಗಿ ಬಂದಲ್ಲಿ ಅವರನ್ನು ನಿರಾಶ್ರಿತರು ಎನ್ನಬಹುದು. ಉದ್ಯೋಗ ಅಥವಾ ಆರ್ಥಿಕ ಅವಕಾಶಗಳಿಗಾಗಿ ಬರುವವರನ್ನು ನಿರಾಶ್ರಿತರು ಎನ್ನಲು ಬರುವುದಿಲ್ಲ ಇವರೆಲ್ಲ ನುಸುಳುಕೋರರು” ಎಂದು ರಾಜ್ಯಪಾಲ ತಥಾಗತಾ ರಾಯ್ ಹೇಳಿದ್ದಾರೆ.

ಅಸ್ಸಾಂ ಪೌರತ್ವ ನೋಂದಣಿ ವಿರುದ್ಧ ಹೌಹಾರುತ್ತಿರುವ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ರಾಯ್‌, “ಮೊದಲು ನಿರಾಶ್ರಿತರು ಎನ್ನುವ ಪದಕ್ಕೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಯಾವ ವ್ಯಾಖ್ಯಾನ ನೀಡಲಾಗಿದೆ ಎಂಬುದನ್ನು ನೋಡಿ ತಿಳಿಯಲಿ” ಎಂದು ಹೇಳಿದ್ದಾರೆ. ತನ್ನ ದೇಶದಿಂದ ಮತ್ತೊಂದು ದೇಶಕ್ಕೆ ದಾಟಿ ಬರುವವರೆಲ್ಲ ನಿರಾಶ್ರಿತರಾಗುವುದಿಲ್ಲ ಎಂದು ರಾಯ್‌ ತಿಳಿಸಿದ್ದಾರೆ.

“ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳ ಬಹುಸಂಖ್ಯಾರ ಮತಾಂಧ ಕೃತ್ಯಗಳಿಂದ ದೇಶ ಬಿಟ್ಟು ಬಂದ ಹಿಂದೂಗಳು, ಸಿಖ್ಖರು, ಕ್ರೈಸ್ತರು ಹಾಗು ಬೌದ್ಧರನ್ನು ಮಾತ್ರವೇ ನಿರಾಶ್ರಿತರು ಎನ್ನಲು ಬರುತ್ತದೆ. ಆದರೆ ಭಾರತ ಸರಕಾರ ಈ ಉಲ್ಲೇಖವನ್ನು ಅಧಿಕೃತವಾಗಿ ಇನ್ನೂ ಒಪ್ಪಿಕೊಂಡಿಲ್ಲ. ಭಾರತಕ್ಕೆ ಬರುವ ಮುಸ್ಲಿಮರು ನಿರಾಶ್ರಿತರಾಗುವುದಿಲ್ಲ. ಏಕೆಂದರೆ ಅವರ ತಾಯ್ನೆಲದಲ್ಲಿ ಅವರ ಮೇಲೆ ಯಾವುದೇ ಹಿಂಸಾಚಾರಗಳು ನಡೆದಿಲ್ಲ” ಎಂದು ರಾಯ್ ತಿಳಿಸಿದ್ದಾರೆ.

ಅಸ್ಸಾಂ ರಾಜ್ಯದಲ್ಲಿ 40 ಲಕ್ಷ ಅಕ್ರಮ ಬಾಂಗ್ಲಾ ನುಸುಳುಕೋರರು ನೆಲೆಸಿದ್ದಾರೆ ಎಂಬ ಕ್ರೂರ ವಾಸ್ತವ ಬೆಳಕಿಗೆ ಬಂದಿದ್ದು, ಇವರನ್ನು ಮುಖ್ಯವಾಹಿನಿಯಿಂದ ಕಿತ್ತೊಗೆಯಬೇಕೆಂಬ ಕೂಗುಗಳು ಕೇಳಿ ಬರುತ್ತಿದೆ. ಅಲ್ಲದೇ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ತ್ವರಿತ ಅತ್ಯಗತ್ಯತೆಯಲ್ಲಿ ಪಶ್ಚಿಮ ಬಂಗಾಳದಲ್ಲೂ ಮಾಡಬೇಕೆಂಬ ಬಲವಾದ ಆಗ್ರಹಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close