About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಪಕ್ಷದ ವರಿಷ್ಠರ ನಿರ್ಧಾರದ ಮೇಲೆ ನನ್ನ ರಾಜಕೀಯ ಭವಿಷ್ಯ: ನಿಖಿಲ್ ಕುಮಾರಸ್ವಾಮಿ

ಭಾರತೀನಗರ: ನನ್ನ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅವರ ಆದೇಶದಂತೆ ನಡೆಯುತ್ತೇನೆ ಎಂದು ಚಿತ್ರನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಭಾರತೀನಗರದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣನವರ ನಿವಾಸದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶಾಸಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮುಖಂಡರು ಒತ್ತಾಯ ಮಾಡುತ್ತಿದ್ದು, ಅವರ ಒತ್ತಾಯವನ್ನು ಗೌರವಿಸುತ್ತೇನೆ. ಆದರೂ, ಪಕ್ಷದ ವರಿಷ್ಠರದ್ದೇ ಅಂತಿಮ ತಿರ್ಮಾನ ಆಗಿರುತ್ತದೆ ಎಂದು ಹೇಳಿದರು.

ಸದ್ಯ ನಾನು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. 25ರಂದು ನಾನು ಅಭಿನಯಿಸಿರುವ ಸೀತಾರಾಮ ಕಲ್ಯಾಣ ಬಿಡುಗಡೆ ಆಗಲಿದ್ದು, ಚಿತ್ರದ ಪ್ರಚಾರಕ್ಕಾಗಿ ಎಲ್ಲೆಡೆ ಹೋಗುತ್ತಿದ್ದೇನೆ. ಅದರಂತೆ ಮಂಡ್ಯ ಜಿಲೆಯಲ್ಲೂ ವ್ಯಾಪಕ ಪ್ರಚಾರ ಕಾರ್ಯಕೈಗೊಂಡಿದ್ದೇನೆ ಎಂದು

ಚಿತ್ರರಂಗದಲ್ಲಿ ನನಗೆ ಡಾ. ರಾಜ್‌ಕುಮಾರ್ ಸ್ಫೂರ್ತಿಯಾಗಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಬೇಕೆಂಬುದು ನನ್ನ ಆಶಯ. ಆದರೆ, ರಾಜಕೀಯಕ್ಕೆ ಬರುವ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ವರಿಷ್ಠರು ನನ್ನ ಸ್ಪರ್ಧೆ ಅಥವಾ ರಾಜಕೀಯಕ್ಕೆ ಬರುವ ಬಗ್ಗೆ ತಿರ್ಮಾನ ಮಾಡುತ್ತಾರೆ. ರಾಜಕೀಯಕ್ಕೆ ಬಂದರೆ ಚಿತ್ರರಂಗದಲ್ಲಿ ಇರುವುದಿಲ್ಲ ಎಂದಲ್ಲ. ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರ ಎರಡರೂ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ರಾಜ್ಯದ ಮುಖ್ಯಮಂತ್ರಿಯ ಮಗನಾಗಿ ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಅಪಸ್ವರ ಸಹಜ: ಆಡಳಿತ ನಡೆಸುತ್ತಿರುವುದು ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರಕಾರ. ಸಾಮಾನ್ಯವಾಗಿ ಕುಟಂಬದಲ್ಲಿ ಗಂಡ-ಹೆಂಡತಿ ನಡುವೆಯೇ ಅಪಸ್ವರ ಇರುತ್ತೆ. ಇನ್ನು ಸಮ್ಮಿಶ್ರ ಸರಕಾರದಲ್ಲೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅದೆಲ್ಲವನ್ನೂ ಸರಿಯಾಗಿ ಕೊಂಡೊಯ್ಯುವುದೇ ಸವಾಲಿನ ಕೆಲಸ ಎಂದು ವಿಶ್ಲೇಷಿಸಿದರು.

ನಮ್ಮ ತಂದೆ ಕುಮಾರಸ್ವಾಮಿ ಅವರು ಭಾವನಾತ್ಮಕ ಜೀವಿ. ಸಮ್ಮಿಶ್ರ ಸರಕಾರ ಬಂದಾಗ ಬಹುಮತ ದೊರಕದ ಕಾರಣ ನೀಡಿ ಸಾಲಮನ್ನಾ ವಚನದಿಂದ ನುಣಿಚಿಕೊಳ್ಳಬಹುದಾಗಿತ್ತು. ಆದರೆ, ಈ ಬಗ್ಗೆ ಎಂದೂ ಮಾತನಾಡಿಲ್ಲ. ಸರಕಾರದ ಖಜಾನೆ ಬಗ್ಗೆಯೂ ಅವರಿಗೆ ಅರಿವಿದೆ. ಇವೆಲ್ಲದರ ನಡುವೆ ರೈತರ ಸಾಲಮನ್ನಾ ಮಾಡುತ್ತಿದ್ದಾರೆ. ಇದು ಅವರಿಗೆ ಸವಾಲಿನ ಕೆಲಸವೂ ಆಗಿದೆ ಎಂದು ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close