lakshmi-electricals

ವಿದ್ಯಾರ್ಥಿಗಳ ಮೇಲೆ ಹಾಯ್ದ ಮ್ಯಾಕ್ಸಿಕ್ಯಾಬ್: ಇಬ್ಬರು ಮೃತ

Posted In : ರಾಜ್ಯ, ರಾಯಚೂರು

ರಾಯಚೂರು: ಶಾಲೆ ಮುಗಿಸಿಕೊಂಡು ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಮ್ಯಾಕ್ಸಿಕ್ಯಾಬ್ ಹಾಯ್ದು ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತನಾದ ಘಟನೆ ಬುಧುವಾರ ನಡೆದಿದೆ.

ನಗರದ ಮರಾನ್ಪುರ್ ಬಳಿ ಈ ಘಟನೆ ನಡೆದಿದೆ. ಮಾನ್ವಿ ತಾಲೂಕಿನ ಬೊಮ್ಮನಾಳ ಗ್ರಾಮದ ಬೆನ್ಸನ್ ಮತ್ತು ಪ್ರಾಣೇಶ್ ಮೃತ ಬಾಲಕರು. ಶಾಲೆ ಮುಗಿಸಿಕೊಂಡು ಮನೆಗೆ ಹೋಗಲು ಬಸ್ ಕಾಯುತ್ತಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ಮೇಲೆ ಏಕಾಏಕಿ ಬಂದ ಮ್ಯಾಕ್ಸಿಕ್ಯಾಬ್ ಹಾಯ್ದು ಇಬ್ಬರು ಬಾಲಕರು ಮೃತರಾಗಿದ್ದು, ಶಿಕ್ಷಕಿಯೊಬ್ಬರಿಗೆ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

19 + six =

 
Back To Top