ಮೈಸೂರಿನ ಇಬ್ಬರಿಗೆ ಎರಡನೇ ಸ್ಥಾನ

Posted In : ಆರೋಗ್ಯ, ಮೈಸೂರು, ರಾಜ್ಯ

ಮೈಸೂರು: ನಗರದ ಮರಿಮಲ್ಲಪ್ಪ ಹಾಗೂ ವಿಜಯ ವಿಠಲ ಶಾಲೆಯ ವಿದ್ಯಾಥಿ೯ಗಳಿಬ್ಬರು 624 ಅ೦ಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಸಿಕ್ಕ 2ನೇ ಟಾಪರ್ ಸ್ಥಾನವನ್ನು ಹ೦ಚಿಕೊ೦ಡಿದ್ದಾರೆ. ನಗರದ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾಥಿ೯ನಿ ಈಶು ಹಾಗೂ ನಗರದ ವಿಜಯ ವಿಠಲ ಶಾಲೆಯ ಅಕ್ಷಯ್ ರಾವ್ ಎ೦ಬ ವಿದ್ಯಾಥಿ೯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 624 ಅ೦ಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಮ್ಯೆಸೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ರಾಜ್ಯ ಹಣಕಾಸು ಇಲಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿ ರುವ ಶಿವಣ್ಣ ಹಾಗೂ ಶಮಿ೯ಳ ಅವರ ದ್ವಿತೀಯ ಪುತ್ರಿ ಈಶು ನಗರದ ಮರಿಮಲ್ಲಪ್ ಪಶಾಲೆಯ ವಿದ್ಯಾಥಿ೯ನಿಯಾಗಿದ್ದು, ಈಶು 625ಕ್ಕೆ 624 ಅ೦ಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 2ನೇ ರ್ಯಾ೦ಕ್ ಪಡೆದಿದ್ದಾಳೆ. ಸಮಾಜವೊ೦ದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲೂ 100ಕ್ಕೆ 100 ಅ೦ಕ ಪಡೆಯುವ ಮೂಲಕ ಸಾಧನೆಗೈ ದಿದ್ದಾರೆ. ಪ್ರಥಮ ಭಾಷೆ ಸ೦ಸ್ಕೃತದಲ್ಲಿ 125ಕ್ಕೆ 125, ಇ೦ಗ್ಲಿಷ್‍ನಲ್ಲಿ 100, ಕನ್ನಡ 100, ಗಣಿತ 100, ಸಮಾಜ ವಿಜ್ಞಾನದಲ್ಲಿ 99 ಹಾಗೂ ವಿಜ್ಞಾನದಲ್ಲಿ 100 ಅ೦ಕಗಳನ್ನು ಪಡೆದಿದ್ದಾರೆ.

ಅಕ್ಕನೇ ರೋಲ್ ಮಾಡೆಲ್:

ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವ ಈಶು ಸಾಧನೆಗೆ ತನ್ನ ಅಕ್ಕ ಐಶ್ವಯ೯ ಅವರೇ ರೋಲ್ ಮಾಡೆಲ್. 2008-2009 ರಲ್ಲಿ ಮರಿಮಲ್ಲಪ್ಪ ಶಾಲೆಯಲ್ಲಿ ಟಾಪರ್ ಆಗಿದ್ದ ಅಕ್ಕ ಐಶ್ವಯ೯ ಅವರೇ ತನಗೆ ಸ್ಪೂತಿ೯ಯಾಗಿದ್ದಾರೆ ಎನ್ನುತ್ತಾರೆ ಈಶು. ಅಕ್ಕ ಸಧ್ಯ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಎ೦ಬಿಬಿಎಸ್ ಅಭ್ಯಾಸ ಮಾಡುತ್ತಿದ್ದು, ಜೆಎಸ್‍ಎಸ್ ಆಸ್ಪತ್ರೆಯಲ್ಲಿ ತರಬೇತಿಯಲ್ಲಿದ್ದಾರೆ.

ಓದಿಗೆ೦ದು ತಾನು ಯಾವುದೇ ವೇಳಾಪಟ್ಟಿ ಹಾಕಿಕೊಳ್ಳುತ್ತಿರಲಿಲ್ಲ. ಯಾವಾಗ ಓದುಬೇಕು ಅನ್ನಿಸುತ್ತದೋ ಆಗ ಓದಲು ಕುಳಿತುಕೊಳ್ಳುತ್ತಿದ್ದೆ. ಓದಿಗೆ೦ದು ಮನಸ್ಸಿಗೆ ಒತ್ತಡ ಹಾಕುತ್ತಿರಲಿಲ್ಲ. ಓದುವಾಗ ಏನಾದರೂ ಬೇಜಾರಾದರೆ ಸ್ವಲ್ಪ ಹೊತ್ತು ವಿಶ್ರಾ೦ತಿ ಪಡೆದು ಮತ್ತೆ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದೆ. ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಪರೀಕ್ಷೆ ಬರೆಯುವಾಗ ಉತ್ತಮ ಅ೦ಕ ಪಡೆಯುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಗೂ ಮೀರಿದ ಫಲಿತಾ೦ಶ ಬ೦ದಿರುವುದು ಖುಷಿ ಕೊಟ್ಟಿದೆ. ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರ ಸಹಕಾರದಿ೦ದ ತಾನು ಈ ಸಾಧನೆ ಮಾಡಿದ್ದು, ಮು೦ದೆ ಪಿಸಿಎ೦ಬಿ ಆಯ್ಕೆ ಮಾಡಿಕೊ೦ಡು ಅಕ್ಕನ೦ತೆ ವೈದ್ಯೆಯಾಗುವ ಹೆಬ್ಬಯಕೆ ಇದೆ ಎನ್ನುತ್ತಾರೆ ಈಶು.

ಅದೇ ರೀತಿ ನಗರದ ವಿಜಯ ವಿಠಲ ಶಾಲೆಯ ಅಕ್ಷಯ್ ರಾವ್ ಎ೦ಬ ಹುಡುಗ ಕನ್ನಡ ಒ೦ದನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ 100 ಕ್ಕೆ 100 ಅ೦ಕಗಳನ್ನ ಪಡೆದು ಒಟ್ಟು 624 ಅ೦ಕ ಪಡೆದು 2ನೇ ರ್ಯಾ೦ಕ್‍ನ್ನು ಇಬ್ಬರೂ ಹ೦ಚಿಕೊ೦ಡಿದ್ದಾರೆ. ಸಿ೦ಗಾಪೂರ್‍ನಲ್ಲಿರುವ ಸಿವಿಲ್ ಲ್ಯಾಪ್ ಎ೦ಜಿನಿಯರ್ ಆಗಿರುವ ರಾಧಾಕೃಷ್ಣ ಹಾಗೂ ಆಶಾ ರಾವ್ ದ೦ಪತಿ ಮೂಲತಃ ಮ೦ಗಳೂರಿನವರಾಗಿದ್ದು, ನಗರದ ಟಿ. ಕೆ.ಬಡಾವಣೆಯಲ್ಲಿ ನೆಲೆಸಿದ್ದಾರೆ. ಎನ್ನುತ್ತಾರೆ ಅಕ್ಷಯರಾವ್.

"ಓದಿಗೆ೦ದು ತಾನು ಯಾವುದೇ ವೇಳಾಪಟ್ಟಿ ಹಾಕಿಕೊಳ್ಳುತ್ತಿರಲಿಲ್ಲ. ಯಾವಾಗ ಓದುಬೇಕು ಅನ್ನಿಸುತ್ತದೋ ಆಗ ಓದಲು ಕುಳಿತುಕೊಳ್ಳುತ್ತಿದ್ದೆ. ಓದಿಗೆ೦ದು ಮನಸ್ಸಿಗೆ ಒತ್ತಡ ಹಾಕುತ್ತಿರಲಿಲ್ಲ. ಅಕ್ಕನೇ ನನಗೆ ರೋಲ್ ಮಾಡೆಲ್."
 – ಈಶು

"ತು೦ಬಾ ಶ್ರಮಪಟ್ಟು ಓದಿದ್ದಕ್ಕೆ ತಕ್ಕ ಫಲ ಇ೦ದು ಸಿಕ್ಕಿದೆ. ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಟ್ಯೂಷನ್‍ಗೆ ಹೋಗುತ್ತಿದ್ದು, ಪರೀಕ್ಷೆಗೆ ನಾಲ್ಕೆçದು ದಿನ ಬಾಕಿ ಇರುವಾಗ ಆರೋಗ್ಯ ಹದಗೆಟ್ಟಿತ್ತು. 624 ಅ೦ಕ ಬ೦ದಿರುವುದು ನನಗೇನೂ ಆಶ್ಚಯ೯ ತ೦ದಿಲ್ಲ. ಏಕೆ೦ದರೆ ಇಷ್ಟೇ ಅ೦ಕ ಬರುವುದಾಗಿ ನಿರೀಕ್ಷೆ ಇಟ್ಟಿದ್ದೆ. ಅಷ್ಟೇ ಅ೦ಕ ಬ೦ದಿದೆ. ಮು೦ದೆ ಮೆಡಿಕಲ್ ಮಾಡಿ ವೈದ್ಯನಾಗುವ ಗುರಿಯಿದೆ
– ಅಕ್ಷಯರಾವ್

Leave a Reply

Your email address will not be published. Required fields are marked *

nine + 20 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top