About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಕೊರಿಯಾ ಅಪಾಯಕಾರಿ ಅಣ್ವಸ್ತ್ರ ತಯಾರಿಕೆ ಇನ್ನೂ ನಿಲ್ಲಿಸಿಲ್ಲ!

ವಿಶ್ವಸಂಸ್ಥೆ ವರದಿಯಿಂದ ಮಾಹಿತಿ ಬಹಿರಂಗ

ಉತ್ತರ ಕೊರಿಯಾ: ಅಣ್ವಸ್ತ್ರ ಮುಕ್ತ ವಾತಾವರಣ ಹಾಗೂ ಅಲ್ಲಿನ ಜನತೆಗೆ ಶಾಂತಿ ನೀಡಲು ಜೂನ್ ನಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕೊರಿಯಾದ ನಾಯಕ ಕಿಮ್ ಜಾಂಗ್ ಮಾತುಕತೆ ನಡೆಸಿದ್ದರು. ಆದರೂ ಉತ್ತರ ಅಪಾಯಕಾರಿ ಅಣ್ವಸ್ತ್ರ ತಯಾರಿಕೆಯನ್ನು ಇನ್ನೂ ನಿಲ್ಲಿಸಿಲ್ಲ ಎಂದು ವಿಶ್ವಸಂಸ್ಥೆಯು ಗೌಪ್ಯವಾದ ವರದಿಯೊಂದನ್ನು ತಯಾರಿಸಿದೆ.

ವಿಶ್ವಸಂಸ್ಥೆಯ ಪರಿಣಿತರು ಸತತವಾಗಿ ಆರು ತಿಂಗಳ ಕಾಲ ಅಧ್ಯಯನ ಮಾಡಿ, ಈ ವರದಿಯನ್ನು ತಯಾರಿಸಿದ್ದಾರೆ. ಕೊರಿಯಾದ ರಕ್ಷಣಾ ಮಂಡಳಿಗೆ ವರದಿ ನೀಡಿ, ಇದನ್ನು ಮುಂದುವರಿಸದಂತೆ ಎಚ್ಚರಿಕೆಯ ಸಂದೇಶ ನೀಡಿದೆ.

‘ಪ್ರಸ್ತುತ ಉತ್ತರ ಕೊರಿಯಾ ಅಣ್ವಸ್ತ್ರ ನಿರ್ಮಾಣ ಕಾರ್ಯ ಮುಂದುವರಿಸಲು ಪೆಟ್ರೊಲಿಯಂ ಹಾಗೂ ಕಲ್ಲಿದ್ದಲು ಉತ್ಪಾದಕಗಳನ್ನು ಹಂತ ಹಂತವಾಗಿ ಕೊರಿಯಾದ ರಕ್ಷಣಾ ವಿಭಾಗದ ಸಹಾಯದಿಂದ ಕಳುಹಿಸಲಾಗುತ್ತಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಕೊರಿಯಾ, ಸಿರಿಯಾ ದೇಶದ ಸಹಯೋಗದೊಂದಿಗೆ ಯೆಮೆನ್‌ಗೆ ಅಪಾಯಕಾರಿ ಆಯುಧಗಳನ್ನು ರಫ್ತು ಮಾಡುತ್ತಿದೆ ಎಂಬ ಆಘಾತಕಾರಿ ವಿಷಯ ಕೂಡಾ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆ ವಿಶ್ವಸಂಸ್ಥೆ ಕೊರಿಯಾಗೆ ಅಪಾಯಕಾರಿ ಉತ್ಪಾದಕಗಳನ್ನು ರಫ್ತು ಮಾಡುವುದನ್ನು ನಿರ್ಬಂಧ ಹೇರಿತ್ತು.

ಅಣ್ವಸ್ತ್ರ ಮುಕ್ತ ವಾತಾವರಣ ಹಾಗೂ ಅಲ್ಲಿನ ಜನತೆಗೆ ಶಾಂತಿ ನೀಡಲು ಜೂನ್ ನಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕೊರಿಯಾದ ನಾಯಕ ಕಿಮ್ ಜಾಂಗ್ ಮಾತುಕತೆ ನಡೆಸಿದ್ದರು. ಇದೀಗ ವಿಶ್ವ ಸಮುದಾಯದ ನಿರೀಕ್ಷೆ ತಲೆ ಕೆಳಗಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close