ನಾಟ್ ಇನ್ ಮೈ ನೇಮ್ ಎನ್ನುವವರು ಮಗುಮ್ಮಾಗಿರುವುದೇಕೆ?

Posted In : ಸಂಗಮ, ಸಂಪುಟ

ಸಿಖ್ (ಪಂಜಾಬಿ ಹುಡುಗಿ)- ₹ 7 ಲಕ್ಷ
ಪಂಜಾಬಿ ಹಿಂದೂ ಹುಡುಗಿ- ₹ 6 ಲಕ್ಷ
ಗುಜರಾತಿ (ಬ್ರಾಹ್ಮಣರ ಹುಡುಗಿ)- ₹ 6 ಲಕ್ಷ
ಹಿಂದೂ (ಬ್ರಾಹ್ಮಣರ ಹುಡುಗಿ)- ₹ 5 ಲಕ್ಷ
ಹಿಂದೂ (ಕ್ಷತ್ರೀಯರ ಹುಡುಗಿ)- ₹ 4.5 ಲಕ್ಷ
ಕ್ರಿಶ್ಚಿಯನ್ ಹುಡುಗಿ- ₹ 4 ಲಕ್ಷ
ಜೈನರ ಹುಡುಗಿ- ₹ 3 ಲಕ್ಷ
ಹಿಂದೂ (ಎಸ್‌ಸಿ, ಎಸ್‌ಟಿ, ಒಬಿಸಿ ಹುಡುಗಿ) – ₹ 2 ಲಕ್ಷ
ಬೌದ್ಧ ಧರ್ಮದ ಹುಡುಗಿ- ₹ 1.5 ಲಕ್ಷ

ಹೇ, ಇದಾವ ಕಾಮ (ಕಾಳ) ಸಂತೆಯ ದರಪಟ್ಟಿ ಎಂದು ಕೋಪಗೊಳ್ಳಬಹುದು. ಇದೆಲ್ಲ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಬಹುದು. ಯಾವನು ಈ ಪಟ್ಟಿ ತಯಾರಿಸಿದ್ದು ಎಂದು ರೊಚ್ಚಿಗೇಳಬಹುದು. ನಮ್ಮ ಧರ್ಮದ ಹುಡುಗಿಯರೇನು ಬಿಟ್ಟಿಗೆ ಬಿದ್ದಿದ್ದಾರಾ ಎಂದು ಹೊಡೆಯಲು ಸಹ ಬರಬಹುದು. ಅಷ್ಟೇ ಏಕೆ, ನಾರಿಯರನ್ನು ಪೂಜಿಸುವ ಭಾರತದಲ್ಲಿ ಹೀಗೆ ಮಾಡುತ್ತೀರಲ್ಲ ಹೊಟ್ಟೆಗೇನು ತಿನ್ನುತ್ತೀರಿ ಎಂದು ನೈತಿಕ ಪ್ರಶ್ನೆ ಕೇಳಬಹುದು.

ಆದರೆ, ಯಾವನು ಏನೇ ಹೇಳಲಿ, ಎಷ್ಟೇ ಬೊಬ್ಬೆ ಹಾಕಲಿ, ನಾವು ಮಾತ್ರ ಧರ್ಮದ ಹೆಸರಲ್ಲಿ, ಅಲ್ಲಾನ ಉಸಿರಲ್ಲಿ, ಲವ್ ಜಿಹಾದ್ ಗುನುಗುವಿಕೆಯಲ್ಲಿ ನಾವು ಹೀಗೆ ಹಲವು ಧರ್ಮದ ಹುಡುಗಿಯರನ್ನು ‘ಗಾಳ’ಕ್ಕೆ ಬೀಳಿಸುವುದು ನಿಲ್ಲಿಸಲ್ಲ ಎನುತ್ತಾರೆ ಇಸ್ಲಾಂನ ಧರ್ಮಾಂಧರು!

ನಾವು ಹೀಗೆ ನೈತಿಕಗಿರಿ ಪ್ರಶ್ನೆ ಕೇಳುತ್ತಿದ್ದರೆ, ಹಿಂದೂ ಹುಡುಗಿಯರನ್ನು ಕಾಪಾಡುವವರು ಯಾರು ಎಂದು ಘೀಳಿಡುವಷ್ಟರಲ್ಲೇ, ಕೇರಳದಲ್ಲಿ ಮತಾಂತರಕ್ಕಾಗಿ ‘ದರಪಟ್ಟಿ’ಯೊಂದು, ಲವ್ ಇಸ್ ನಾಟ್ ಎ ಕ್ರೈಂ, ಜಿಹಾದ್ ಈಸ್ ಅಲ್ಲಾಸ್ ವರ್ಕ್ ಎಂಬ ಘೋಷಣೆಯುಳ್ಳ ಪತ್ರವೊಂದು ವಾಟ್ಸ್‌‌ಆ್ಯಪ್, ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಸುಮ್ಮನೆ ಪುಸ್ತಕದಲ್ಲಿ ಕಣ್ಣು ನೆಟ್ಟ ಮುಸ್ಲಿಂ ವಿದ್ಯಾರ್ಥಿಯೋ, ಗ್ಯಾರೇಜ್‌ನಲ್ಲಿ ಸ್ಪ್ಯಾನರ್ ಹಿಡಿದು ಕೆಲಸ ಮಾಡುತ್ತಿರುವ ಮೆಹಬೂಬನೋ, ಈ ಸಂದೇಶ ನೋಡಿ, ಹುಡುಗಿ ಜತೆ ದುಡ್ಡು ಸಿಗುತ್ತದೆ ಎಂದರೆ ಪುಸ್ತಕ, ಸ್ಪ್ಯಾನರ್ ಬಿಟ್ಟು ಕೂದಲು ಸ್ಪೈಕ್ ಮಾಡಿಸಿಕೊಳ್ಳಲು ಸೆಲೂನ್‌ಗೆ ಹೋಗುತ್ತಾನೆ. ಅಲ್ಲಿಗೆ ನಮ್ಮ ಬೊಬ್ಬೆ ಬೆಟ್ಟಕ್ಕೆ ನಾಯಿ ಬೊಗಳಿ ಸತ್ತಂತಾಗುತ್ತದೆ ಎಂಬ ಮಾತಿಗೆ ನಿದರ್ಶನವಾಗುತ್ತದೆ.

ಇದು ಕೇರಳದ ಕತೆಯಾದರೆ, ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯನ್ನು ಕರ್ನಾಟಕದಲ್ಲಿ ದಲಿತರು ಅನುಭವಿಸುತ್ತಿದ್ದಾರೆ…ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ದಲಿತ ಯುವಕ-ಮುಸ್ಲಿಂ ಯುವತಿ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಯಕಃಶ್ಚಿತ್ ಮದುವೆಗೆ ವಿರೋಧ ವ್ಯಕ್ತವಾಗುತ್ತದೆ ಎಂದು ಇಬ್ಬರೂ ಮನೆ ಬಿಟ್ಟು ಓಡಿಹೋಗಿದ್ದಾರೆ. ಆದರೆ ಹುಡುಗಿಯರ ಕಡೆಯವರು ಮಾತ್ರ ಹುಡುಗನ ತಂದೆ ಮರೆಪ್ಪ ಹರಿಜನ ಹಾಗೂ 18 ವರ್ಷದ ಆತನ ಮಗನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ.

ಇದೇ ವಿಜಯಪುರ ಜಿಲ್ಲೆಯ ಗುಂಡಕನಾಳ ಗ್ರಾಮದಲ್ಲಿ ಸಾಯಬಣ್ಣ ಎಂಬ ದಲಿತ ಹಾಗೂ ಭಾನುಬೇಗಂ ಎಂಬ ಮುಸ್ಲಿಂ ಯುವತಿಯ ನಡುವೆ ಪ್ರೇಮಾಂಕುರವಾಗಿತ್ತು. ಕುಟುಂಬದವರನ್ನು ಎದುರು ಹಾಕಿಕೊಂಡು ಮದುವೆಯಾಗಿದ್ದರು. ಇಬ್ಬರ ದಾಂಪತ್ಯದ ಫಲವಾಗಿ ಭಾನುಬೇಗಂ ಗರ್ಭಿಣಿಯಾಗಿದ್ದರು. ದಲಿತನ ಕುಟುಂಬದವರು ಮಗನನ್ನು ಕ್ಷಮಿಸಿ ಮನೆಯಲ್ಲಿ ಇಟ್ಟುಕೊಂಡಿದ್ದರು. ಆದರೆ ಜೂನ್ 3ರಂದು ಯುವತಿಯರು ಕಡೆಯವರು, ಇವಳು ದಲಿತನನ್ನು ಮದುವೆಯಾದಳು ಎಂದು ಆಕೆ ಗರ್ಭಿಣಿ ಎಂದು ಗೊತ್ತಿದ್ದರೂ ಸಹೋದರ ಅಕ್ಬರ್, ತಾಯಿ ರಂಜಾನಬಿ, ಸಹೋದರಿ ದಾವಲಬಿ ಹಾಗೂ ಸಹೋದರಿ ಗಂಡ ಜಿಲಾನಿ ಅವಳ ಮೇಲೆ ಹಲ್ಲೆ ಮಾಡಿದ್ದಾರೆ. ಅವಳು ಮೃತಪಟ್ಟ ಬಳಿಕ ಸುಟ್ಟು ದೇಹವನ್ನು ಕಾಲುವೆ ಪಕ್ಕದಲ್ಲಿ ಬಿಸಾಡಿ ಹೋಗಿದ್ದರು. ಅಲ್ಲಿ ಅವರಿಗೆ ಮಗಳ ಜೀವಕ್ಕಿಂತ, ಧರ್ಮಕ್ಕಾದ ಚ್ಯುತಿ(?)ಯೇ ಮೇಲು ಎಂದು ಬಗೆದಿದ್ದರು, ಹುಡುಗ ದಲಿತ ಎಂಬ ಕಾರಣಕ್ಕೆ ಕಟುಕರ ಹಾಗೆ ವರ್ತಿಸಿದ್ದರು.

ಅಷ್ಟೇ ಅಲ್ಲ, 2010ರಲ್ಲಿ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಯುವತಿ ಹಿಂದೂ ಹುಡುಗನನ್ನು ಪ್ರೀತಿಸಿದ್ದಕ್ಕೆ ಆಕೆಯ ಕುಟುಂಬಸ್ಥರು ರೇಹಾನ್ ಫರ್ವೀನ್‌ಗೆ ನೇಣು ಬಿಗಿದಿದ್ದರು. ಇವಿಷ್ಟು ಕೇವಲ ಉದಾಹರಣೆಗಳಷ್ಟೇ, ಇಂಥಾ ನಿತ್ಯನೂತನ ಪ್ರಕರಣಗಳು ದಿನೇದಿನೆ ಸುದ್ದಿಯಾಗುತ್ತಲೇ ಇರುತ್ತವೆ, ಸುದ್ದಿಯಾಗದ ಬಹುತೇಕ ಪ್ರಕರಣಗಳು ಅಲ್ಲೇ ಉಳಿಯುತ್ತವೇ. ಈ ಪ್ರಕರಣಗಳ ಮೇಲೆ ಮತಾಂತರದ ಸೌಧ ನಿರ್ಮಾಣವಾಗಿರುತ್ತದೆ. ಇದೇ ಕಾರಣಕ್ಕೆ, ಈ ಲವ್ ಜಿಹಾದ್‌ನ ಪ್ರಭಾವದಿಂದಲೇ ಕೇರಳದಲ್ಲಿ ಸರಕಾರ ಮಗುಮ್ಮಾಗಿ ಕುಳಿತಿದ್ದರೂ, ಜಿಹಾದ್‌ಗೆ ಪ್ರೋತ್ಸಾಹ ನೀಡುತ್ತಿದ್ದರೂ ಹೈಕೋರ್ಟೆ ಲವ್ ಜಿಹಾದ್ ಪ್ರಕರಣಗಳ ತನಿಖೆ ಮಾಡಬೇಕು ಎಂದು ಸೂಚಿಸಿದೆ. ಹೀಗೆ ಮಾಡುವುದಕ್ಕೂ ಕಾರಣವಿದೆ, 2016ರ ಡಿಸೆಂಬರ್‌ನಲ್ಲಿ ಯುವತಿಯೊಬ್ಬಳು ಇಸ್ಲಾಂಗೆ ಮತಾಂತರವಾಗಿ, ಮುಸ್ಲಿಂ ಯುವಕನೊಬ್ಬನನ್ನು ಮದುವೆಯಾದಳು. ಈಗ ಈ ದಂಪತಿಯೇ ಹೀಗೆ ಲವ್ ಜಿಹಾದ್ ಮೂಲಕ ಅನ್ಯ ಧರ್ಮೀಯರನ್ನು ಮತಾಂತರಗೊಳಿಸಿದರೆ ಲಕ್ಷಾಂತರ ರು. ನೀಡುವುದಾಗಿ ಘೋಷಿಸಿದ್ದಾರೆ.

ಇಷ್ಟೆಲ್ಲ ಆದರೂ, ದಲಿತನೊಬ್ಬ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ, ಆ ಧರ್ಮದ ಯುವತಿಯನ್ನು ಮದುವೆಯಾದ ಎಂಬ ಕಾರಣಕ್ಕೆ ಕುಟುಂಬಸ್ಥರನ್ನೇ ಮರಕ್ಕೆ ಕಟ್ಟಿ ಹೊಡೆದರೂ ಯಾರೂ ಸೊಲ್ಲೆತ್ತುತ್ತಿಲ್ಲ. ಅದೇ ಹಿಂದೂ ಹುಡುಗಿ ಆಶಿತಾ ಹಾಗೂ ಮುಸ್ಲಿಂ ಹುಡುಗ ಶಕೀಲ್, 2016ರ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ ಮದುವೆಯಾದರೆ ಅದೊಂದು ಜಾತ್ಯತೀತ ಮದುವೆ ಎನ್ನುತ್ತಾರೆ. ಆದರೆ ಅದೇ ದಲಿತನೊಬ್ಬ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಆತನ ಅಥವಾ ಅವನ ಕುಟುಂಬದ ಮೇಲೆ ಹಲ್ಲೆಯಾದರೆ ರಮೇಶ್ ‘ರಮೇಶ್ ಜಿಗಜಿಣಗಿಯಂಥಾ ದಲಿತ ರಾಜಕಾರಣಿಗಳೇ, ಎಲ್ಲ ತಪ್ಪು ನಮ್ಮ ದಲಿತರದ್ದೇ’ ಎಂದು ಜಾತ್ಯತೀತತೆ, ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತಾರೆ.

ಅಷ್ಟೇ ಏಕೆ, ಜಾರ್ಖಂಡ್ ಹಾಗೂ ಹರಿಯಾಣದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ಮಾಡಿದ್ದಕ್ಕೆ ಕರ್ನಾಟಕದಲ್ಲಿ ‘ನಾಟ್ ಇನ್ ಮೈ ನೇಮ್’ ಅಭಿಯಾನಕ್ಕೆ ಕೈ ಜೋಡಿಸಿ ಟೌನ್‌ಹಾಲ್ ಮುಂದೆ ಹೋರಾಟ ಮಾಡುವವರು, ಅಂಬೇಡ್ಕರ್ ಬಗ್ಗೆ ಒಂದೇ ಒಂದು ಆಕ್ಷೇಪ ಎತ್ತಿದರೂ, ದಲಿತ ಚಿಂತಕ, ದಲಿತ ಹೋರಾಟಗಾರರು, ಜ್ಞಾನಪೀಠಿ ಕಾರ್ನಾಡ್, ಬೆಂಗಳೂರಿನಲ್ಲಿ ನಿರ್ಮಾಣವಾಗುವ ಬ್ರಾಹ್ಮಣರ ಟೌನ್ ಹಾಲ್ ಹಾಗೂ ಮುಂಬೈನಲ್ಲಿನ ಮುಖೇಶ್ ಅಂಬಾನಿ ನಿವಾಸವೇ ದೇಶದ ದೊಡ್ಡ ಸಮಸ್ಯೆ ಎಂದು ಬೊಗಳೆ ಬಿಡುವ ದೇವನೂರು ಮಹಾದೇವ, ಜಾತಿ ನೋಡಿ ಸರಕಾರದ ಯೋಜನೆ ಜಾರಿಗೆ ತರುವ ಮುಖ್ಯಮಂತ್ರಿ, ಅಹಿಂದದ ಕಣ್ಮಣಿ ಸಿದ್ದರಾಮಯ್ಯ… ಹೂಂ ಹೂಂ ಯಾರೆಂದರೆ ಯಾರೂ ಈ ಕುರಿತು ಚಕಾರ ಎತ್ತುತ್ತಿಲ್ಲ. ಅತ್ತ ಹಿಂದೂ ಹುಡುಗಿ, ಮುಸ್ಲಿಂ ಹುಡುಗನ ಮದುವೆ ಎಂದ ತಕ್ಷಣ ಪೌರೋಹಿತ್ಯ ವಹಿಸಿಕೊಳ್ಳುವ ಜಾತ್ಯತೀತರೂ ಸುಮ್ಮನಿದ್ದಾರೆ.

ಅಷ್ಟಕ್ಕೂ ಈ ಬಗ್ಗೆ ಧ್ವನಿ ಎತ್ತಿದರೆ, ಮುಸ್ಲಿಂ ವಿರೋಧಿ, ಅಲ್ಪಸಂಖ್ಯಾತರ ದ್ವೇಷಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಹೆದರಿಕೆಯೇ ಅಥವಾ ದಲಿತರು ತಾನೆ, ಸತ್ತರೆ ಸಾಯಲಿ ಬಿಡಿ ಎಂಬ ಉಡಾಫೆಯೇ? ಖಂಡಿತವಾಗಿಯೂ, ಹರಿಯಾಣ ಹಾಗೂ ಜಾರ್ಖಂಡ್‌ನಲ್ಲಿ ಮುಸ್ಲಿಮರ ಮೇಲೆ ದಾಳಿ ಮಾಡಿದ್ದಕ್ಕೆ, ಹಲ್ಲೆ ಮಾಡಿದ್ದಕ್ಕೆ ಹೋರಾಡುವ ಎಲ್ಲ ನೈತಿಕತೆ, ಹಕ್ಕು ಇವರಿಗಿದೆ. ಹೋರಾಟ ಸರಿಯಾಗಿಯೇ ಇದೆ. ಆದರೆ ದೀಪದ ಬುಡವೇ ಕತ್ತಲು ಎಂಬಂತೆ, ಕರ್ನಾಟಕದಲ್ಲೇ, ಧರ್ಮದ ಹೆಸರಿಗಾಗಿ ದಲಿತರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಕಂಡು ಕಾಣದಂತಿದ್ದರೆ ಅದನ್ನು ಇಬ್ಬಂದಿತನ ಎನ್ನದೇ ಬೇರೆ ವಿಧಿಯಿಲ್ಲ.

ಹೌದು, ಯಾವುದೇ ಒಂದು ಕುಟುಂಬದ ಹೆಣ್ಣುಮಗಳೊಬ್ಬಳು ಇನ್ನೊಬ್ಬನ ಜತೆ ಓಡಿ ಹೋದರೆ, ಅನ್ಯ ಜಾತಿಯವನನ್ನು ಮದುವೆಯಾದರು ಪೋಷಕರಿಗೆ ನೋವಾಗುವುದು, ಸಮಾಜದಿಂದ ಅವಮಾನ ಎದುರಿಸುವುದು ಸಾಮಾನ್ಯ. ಅದು ಆಕ್ರೋಶವಾಗಿ ವ್ಯಕ್ತವಾಗುವುದೂ ದಿಟ. ಆದರೆ, ಹೀಗೆ ಮರಕ್ಕೆ ಹೊಡೆಯುವುದು, ಹಲ್ಲೆ ಮಾಡುವುದು ಎಷ್ಟು ಸರಿ? ಇದೇ ರೀತಿ ಮುಸ್ಲಿಂ ಯುವಕನಿಗೋ ಆತನ ಕುಟುಂಬಸ್ಥರಿಗೋ ಹೀಗೆ ಹಲ್ಲೆ ಮಾಡಿದರೆ ಈ ಹೋರಾಟಗಾರರು ಸುಮ್ಮನಿರುತ್ತಿದ್ದರೇ?

ಅಷ್ಟಕ್ಕೂ ತಮ್ಮ ಮಗಳನ್ನು ದಲಿತನೋ, ಮತ್ತೊಬ್ಬನೋ ಪ್ರೀತಿಸಿದಾಗ ಕೆರಳುವ ಮುಸ್ಲಿಂ ಪೋಷಕರು, ತಮ್ಮ ಮಗ ಹಿಂದೂ ಯುವತಿಯನ್ನು ಮದುವೆಯಾಗಿ, ಪೋಷಕರಿಂದ ದೂರ ಮಾಡಿದಾಗ ಕಿವಿ ಹಿಂಡಬೇಕಲ್ಲವೇ? ತಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದಾಳೆ ಎಂಬುದನ್ನು ಮರೆತು ಗಂಡು ಮಕ್ಕಳಿಗೆ ಲವ್‌ಜಿಹಾದ್‌ನಲ್ಲಿ ತೊಡಗಿದ್ದರೂ ಸುಮ್ಮನಿರುವುದು ಎಷ್ಟು ಸರಿ? ಇದೇ ಕಾರಣಕ್ಕೆ ಅಲ್ಲವೇ ಉತ್ತರ ಪ್ರದೇಶ ಹಾಗೂ ಕೇರಳ ರಾಜ್ಯಗಳು ಲವ್ ಜಿಹಾದ್‌ನ ತವರುಮನೆಗಳಂತಾಗಿರುವುದು? ಇದರಲ್ಲಿ ಹಿಂದೂ ಹುಡುಗಿಯರೂ ಎಚ್ಚರದಿಂದಿರುವ ಅಗತ್ಯವಿದೆ.

-ಬಿ ಸೋಮಶೇಖರ್

Leave a Reply

Your email address will not be published. Required fields are marked *

two × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top