ವಿಶ್ವವಾಣಿ

ಯುಎಸ್ ಓಪನ್: ಸೆಮಿಫೈನಲ್ ಪ್ರವೇಶಿಸಿದ ರಾಫೆಲ್

ನ್ಯೂಯಾರ್ಕ್: ವಿಶ್ವದ ಅಗ್ರ ಶ್ರೇಯಾಂಕಿತ ಸ್ಪೇನ್‌ನ ಅನುಭವಿ ಟೆನಿಸ್ ತಾರೆ ರಾಫೆಲ್ ನಡಾಲ್ ಅವರು ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದರು.

ಇಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ನಡಾಲ್ ವಿಶ್ವದ ನಾಲ್ಕನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು 0-6, 6-4, 7-5, 6-7, 7-6 ಅಂತರಗಳಿಂದ ಪರಾಭವಗೊಳಿಸಿದರು.

 

ವಿಶ್ವಾಸದಿಂದಲೇ ಮೈದಾನಕ್ಕೆ ಆಗಮಿಸಿದ ನಡಾಲ್ ಮೊದಲ ಕಳಪೆ ಆಟವಾಡಿ ಒಂದು ಅಂಕ ಗಳಿಸದೆ ಆರು ಅಂಕಗಳ ಹಿನ್ನಡೆಯಾದರು. ನಂತರ ಎಚ್ಚೆತ್ತುಕೊಳ್ಳುವ ಮೂಲಕ ಎರಡನೇ ಸೆಟ್‌ನಲ್ಲಿ ಎರಡು , ಮೂರನೇ ಸೆಟ್‌ನಲ್ಲಿ ಎರಡು ಅಂಕಗಳ ಮುನ್ನಡೆ ಸಾಧಿಸಿದರು. ನಾಲ್ಕನೇ ಸೆಟ್‌ನಲ್ಲಿ ಒಂದು ಅಂಕದಿಂದ ಹಿನ್ನಡೆಯಾದರು. ಕೊನೆಯ ಸೆಟ್‌ನಲ್ಲಿ ಹೆಚ್ಚಿನ ಪ್ರತಿರೋಧ ನೀಡುವ ಮೂಲಕ ಒಂದು ಅಂಕ ಮುನ್ನಡೆಯಾಗಿ ಗೆಲುವಿನ ನಗೆ ಬೀರಿದರು. ಸೆಮಿಯಲ್ಲಿ ಅರ್ಜೆಂಟೀನಾದ ಜುಹಾನ್ ಡೆಲ್ ಪೊಟ್ರೊ ಅವರನ್ನು ಎದುರಿಸಲಿದ್ದಾರೆ.

‘ಕ್ವಾರ್ಟರ್‌ಫೈನಲ್‌ನಲ್ಲಿ ಜಯ ಸಾಧಿಸಿ ಉಪಾಂತ್ಯಕ್ಕೆ ಪ್ರವೇಶಿಸಿರುವುದಕ್ಕೆ ಸಂತಸವಾಗಿದೆ. ಮುಂದಿನ ಪಂದ್ಯದಲ್ಲಿ ಇನ್ನೂ ಹೆಚ್ಚಿನ ಆಟವಾಡಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವೆ’ ಎಂದು ನಡಾಲ್ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಆವೃತ್ತಿಯ ಯುಎಸ್ ಓಪನ್ ಫೈನಲ್‌ನಲ್ಲಿ ನಡಾಲ್, ಕೆವಿನ್ ಆ್ಯಂಡರ್‌ಸನ್ ಅವರನ್ನು ಪರಾಭವಗೊಳಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಆಟವಾಡಿ ಪ್ರಶಸ್ತಿ ಯೋಜನೆಯಲ್ಲಿದ್ದಾರೆ. 17 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ನಡಾಲ್ ಈ ಟೂರ್ನಿಯಲ್ಲಿ ಜಯ ಗಳಿಸಿ 18ನೇ ಪ್ರಶಸ್ತಿ ಗೆಲ್ಲುವ ನೀರಿಕ್ಷೆಯಲ್ಲಿದ್ದಾರೆ.