About Us Advertise with us Be a Reporter E-Paper

Breaking Newsರಾಜ್ಯ

(ವಿಡಿಯೊ) ಉ-ಕ ಶಕ್ತಿಸೌಧದ ಎದುರು ಪ್ರತೇಕ ರಾಜ್ಯದ ಧ್ವಜ ಹಾರಿಸುತ್ತೇವೆ!

ಬೆಳಗಾವಿ: ಉತ್ತರ ಕರ್ನಾಟದ ಮಲತಾಯಿ ದೋರಣೆ ಖಂಡಿಸಿ ಜು 31 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು, ಈ‌‌ ಭಾಗದ ಮಠಾಧೀಶರು ನಡೆಸುವ ಸಾಂಕೇತಿಕ ಧರಣಿಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಶಕ್ತಿಸೌಧದ ಎದುರು ಪ್ರತ್ಯೇಕ ಧ್ವಜ ಹಾರಿಸಲಾಗುವುದು  ಎಂದು ನಾಗೇಶ ಗೋಲಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಯಿಂದ ವಂಚಿತವಾಗಿದೆ. ಎಲ್ಲ ಸರಕಾರಗಳು ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡದೆ ತಾರತಮ್ಯ ಮಾಡಿದೆ. ಈ ಕುರಿತು ಉ-ಕದ 13 ಜಿಲ್ಲೆಗಳಿಂದ ಪಕ್ಷಾತೀತವಾಗಿ ಭಾರಿ ಬೆಂಬವಾಗುತ್ತಿದೆ‌. ಕಳೆದ ಭಾರಿ ಉತ್ತರ ಕರ್ನಾಟಕದ ಪ್ರತ್ಯೇಕ ಧ್ವಜವನ್ನು ಮುಧೋಳದಲ್ಲಿ ಹಾರಿಸಲಾಗಿದೆ. ಸರಕಾರಕ್ಕೆ ಬಿಸಿ ಮುಟ್ಟಿಸಲು ಈ ಭಾಗದ ಶಕ್ತಿ ಸೌಧದ ಎದುರು ಪ್ರತ್ಯೇಕ ಧ್ವ ಹಾರಿಸಲಾಗುವುದು ಎಂದರು.

ಶಾಸಕ ಶ್ರೀರಾಮುಲು ಅವರಿಗೆ ಉತ್ತರ ಕರ್ನಾಟಕದ‌ ಪ್ರತೇಕದ ರೂವಾರಿಯಾಗಲು‌ ಹೊರಟಿದ್ದಾರೆ. ಅವರ ನೇತೃತ್ವ ನಮಗೆ ಬೇಡ. ನಮಗೆ ಬಂಬಲ‌ ಸೂಚಿಸಿ‌ ಹೋರಾಟ ಮಾಡುವುದು ಹೇಗೆ ಎಂದು ನಮಗೆ ಗೋತ್ತು ಎಂದು ಶ್ರೀರಾಮುಲು ವಿರುದ್ಧ ಹರಿಹಾಯ್ದರು. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಹಿತದೃಷ್ಟಿಯಿಂದ ನಮ್ಮನ್ನು ಆಳಿದ ರಾಜಕೀಯ ಪಕ್ಷಗಳು ಈ ಭಾಗದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close