About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಅರ್ಚಕರು, ಸಿಬ್ಬಂದಿಯಿಂದ ಪ್ರೊಟೆಸ್ಟ್

ಮೈಸೂರು: ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿಯ ಪ್ರತಿಭಟನೆ ಆಯ್ತು ಇದೀಗ ನಂಜನಗೂಡು ಶ್ರೀಕಂಠೇಶ್ವರನ ಅರ್ಚಕರು ಹಾಗೂ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ವೇತನ ಹೆಚ್ಚಳ, ಗುತ್ತಿಗೆ ನೌಕರರ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪುರೋಹಿತರು ಹಾಗೂ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದಾರೆ. ಬೆಳಗ್ಗೆ ಪ್ರಾತಃಕಾಲದ ಪೂಜೆಯ ನಂತರ ಪ್ರತಿಭಟನೆ ನಡೆಸಲಿದ್ದು, ದೇವಾಲಯಲಕ್ಕೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಆರನೇ ವೇತನ ಆಯೋಗ ಜಾರಿ, ಗುತ್ತಿಗೆ ನೌಕರರ ಖಾಯಂ ಮಾಡವುದು, ಸೇವಾ ನಿರತರಾಗಿದ್ದಾಗ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ನೀಡುವಂತೆ, ಕರ್ತವ್ಯ ವೇಳೆ ಮೃತಪಟ್ಟರೆ ಕುಟುಂಬಸ್ಥರಿಗೆ ಉದ್ಯೋಗ, ಬೋನಸ್​ ಹಾಗೂ ಇತರೆ ಸೌಲಭ್ಯಕ್ಕೆ ಆಗ್ರಹಿಸಿ ಸಿಬ್ಬಂದಿ ವರ್ಗ ಪ್ರತಿಭಟನೆ ನಡೆಸಲಿದೆ.

Tags

Related Articles

Leave a Reply

Your email address will not be published. Required fields are marked *

Language
Close