ನರಸಿಂಹ್‌ ರಾವ್‌ ಕುರಿತು ಉಲ್ಲೇಖಿಸಿದ ಕಾಂಗ್ರೆಸ್‌

Posted In : ದೇಶ

ದೆಹಲಿ: ಮಾಜಿ ಪ್ರಧಾನ ಮಂತ್ರಿ ಪಿ ವಿ ನರಸಿಂಹ ರಾವ್‌ರನ್ನು  ಕಾಂಗ್ರೆಸ್‌ ತನ್ನ ಪ್ಲೀನರಿ ಸಭೆಯಲ್ಲಿ ಸ್ಮರಿಸಿದೆ.

ಮಾಜಿ ಪ್ರಧಾನಿಗಳ ನಿಧನವಾದ 14 ವರ್ಷಗಳ ಬಳಿಕ ಪಕ್ಷ ಮೊದಲ ಬಾರಿಗೆ ನರಸಿಂಹ ರಾವ್‌ರನ್ನು ಸ್ಮರಿಸಿ ಆರ್ಥಿಕ ಸುಧಾರಣೆಗಳಿಗೆ ಅವರ ಕೊಡುಗೆಯನ್ನು ಶ್ಲಾಘಿಸಿದೆ.

ಹಲವಾರು ವರ್ಷಗಳ ಕಾಲ ಕಾಂಗ್ರೆಸ್‌ನ ಯಾವುದೇ ಬ್ಯಾನರ್‌ ಅಥವಾ ಪೋಸ್ಟರ್‌ಗಳಲ್ಲಿ ಕಾಣಿಸದ ರಾವ್‌ರನ್ನು ಪಕ್ಷದ 84ನೇ ಪ್ಲೀನರಿ ಸಭೆ ವೇಳೆ ಸ್ಮರಿಸಲಾಯಿತು. ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ಲೀನರಿ ಸಭೆ ಆಯೋಜಿಸಲಾಗಿದೆ.

ಪ್ಲೀನರಿ ಸಭೆ ವೇಳೆ ಮಾಡಿಕೊಂಡ ರಾಜಕೀಯ ಸಂಕಲ್ಪದ ಘೋಷಣೆ ವೇಳೆ “ರಾಜೀವ್‌ ಗಾಂಧಿರ ಹತ್ಯೆಯಿಂದ ಕಾಂಗ್ರೆಸ್‌ಗೆ ಭಾರೀ ಹೊಡೆತ ಬಿದ್ದಿತ್ತು. ಈ ಸಂದರ್ಭ ಪಿ ವಿ ನರಸಿಂಹ ರಾವ್ ಮೇಲೆ ಜವಾಬ್ದಾರಿ ಬಿತ್ತು. ಪ್ರಧಾನ ಮಂತ್ರಿಯಾಗಿ ರಾವ್‌ ದೇಶವನ್ನು ಆರ್ಥಿಕ ಸಂಕಷ್ಟದಿಂದ ಹೊರತಂದರು. 1991ರ ಆರ್ಥಿಕ ಸುಧಾರಣೆ ನಿಜಕ್ಕೂ ಐತಿಹಾಸಿಕವಾಗಿದ್ದು ದೇಶದ ಆರ್ಥಿಕತೆಯಲ್ಲಿ ಕ್ರಾಂತಿಯನ್ನೇ ತಂದಿತು”ಎಂದು ತಿಳಿಸಲಾಗಿದೆ.

ಇದೇ ವೇಳೆ ನರಸಿಂಹ ರಾವರ ವಿದೇಶಾಂಗ ನೀತಿ ಕುರಿತಂತೆಯೂ ಮೆಚ್ಚುಗೆ ಸೂಚಿಸಲಾಯಿತು.

ಕಾಂಗ್ರೆಸ್‌ನ ಹಿಂದಿನ ಸಭೆಗಳಲ್ಲಿ ರಾವ್‌ ಹೆಸರಿನ ಉಲ್ಲೇಖ ಆಗುತ್ತಲೇ ಇರಲಿಲ್ಲ. 2010ರ ಪ್ಲೀನರಿ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಒಮ್ಮೆ ಮಾತ್ರ ರಾವ್‌ ಹೆಸರು ಉಲ್ಲೇಖಿಸಿದ್ದರು. ಪಕ್ಷದ ವರಿಷ್ಠ ಪ್ರಣಬ್‌ ಮುಖರ್ಜಿ ಬರೆದಿದ್ದ “ಕಾಂಗ್ರೆಸ್‌ ಅಂಡ್‌  ಮೇಕಿಂಗ್‌ ಆಫ್‌ ದಿ ಇಂಡಿಯನ್‌ ನೇಷನ್‌” ಎಂಬ ಪುಸ್ತಕದ ಐದು ಅವತರಣಿಕೆಗಳಲ್ಲಿ ಒಂದರಲ್ಲೂ ನರಸಿಂಹರಾವ್‌ ಚಿತ್ರವಿರಲಿಲ್ಲ.

ಪುಸ್ತಕದ ಮೊದಲ ಅವತರಣಿಕೆಯಲ್ಲಿ ದೇಶದ ಆರ್ಥಿಕ ಸುಧಾರಣೆಗೆ ರಾವ್‌ ನೀಡಿದ್ದ ಕೊಡುಗೆ ಕುರಿತಂತೆ ಉಲ್ಲೇಖವಿದೆ. ಕಳೆದ ಹಲವಾರು ವರ್ಷಗಳಿಂದ ಮನಮೋಹನ್ ಸಿಂಗ್‌ ಹೊರತು ಪಡಿಸಿ ಕಾಂಗ್ರೆಸ್‌ನ ಯಾವ ನಾಯಕರೂ ಸಂಸತ್ತಿನಲ್ಲಿರುವ ರಾವ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಮುಂದಾಗಿಲ್ಲ.

ಆದರೆ ಕಾಂಗ್ರೆಸ್ ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷವಾಗಿದೆ ಎಂಬ ಆಪಾದನೆ ತೊಡಗಿ ಹಾಕುವ ನಿಟ್ಟಿನಲ್ಲಿ ಈ ಬಾರಿ ರಾವ್‌ ಕೊಡುಗೆ ಸ್ಮರಿಸಲು ಉದ್ದೇಶಿಸಲಾಗಿತ್ತು ಎಂದು ತಿಳಿದುಬಂದಿತ್ತು.

Leave a Reply

Your email address will not be published. Required fields are marked *

15 + 17 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top