About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

“ನಮಗೆ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ, ಅವರ ಪ್ರಧಾನಿ ಅಭ್ಯರ್ಥಿ ಯಾರು?”: ಬಿಜೆಪಿ

ಕೋಲ್ಕತ್ತಾ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ವಿಪಕ್ಷಗಳು ಮೊದಲು ತಮ್ಮ ನಾಯಕ ಯಾರೆಂದು ತಿಳಿಸಲಿ ಎಂದು ಬಿಜೆಪಿ ಅಣಕ ಮಾಡಿದೆ.

ಬಿಜೆಪಿಗೆ ಸವಾಲು ಎದುರಿಸಲು ಪ್ರತ್ಯೇಕ ರಾಜಕೀಯ ಬಣ ಮಾಡಿಕೊಳ್ಳುವ ವಿವಾರವಾಗಿ ಇಂದು ವಿಪಕ್ಷಗಳ ನಾಯಕರು ಸಭೆ ಸೇರಲಿದ್ದಾರೆ. ಈ ಕುರಿತು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಕೈಲಾಶ್‌ ವಿಜಯ್‌ವರ್ಗಿಯಾ, “ನಮ್ಮ ವಿರುದ್ಧ ಹೋರಾಡಲು ವಿರೋಧ ಪಕ್ಷಗಳೆಲ್ಲಾ ಒಂದಾಗಿರುವುದನ್ನು ನೋಡಲು ಖುಷಿಯಾಗುತ್ತದೆ. ಮೊದಲು ಅವರು ತಮ್ಮ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಲಿ, ನಂತರ ನಮ್ಮ ವಿರುದ್ಧ ಹೋರಾಡಿ ಸೋಲಿಸುವ ಕನಸು ಕಾಣಲಿ” ಎಂದು ಹೇಳಿದ್ದಾರೆ.

“ನಮಗೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿ, ಅವರ ಪ್ರಧಾನಿ ಅಭ್ಯರ್ಥಿ ಯಾರು?” ಎಂದು ವಿಜಯ್‌ವರ್ಗಿಯಾ ಹೇಳಿದ್ದಾರೆ.

ವಿಪಕ್ಷಗಳ ಬಣದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗುವ ಕನಸು ಕಾಣುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೊಡ್ಡ ಸಭೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸುತ್ತಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಮುಕುಲ್‌ ರಾಯ್‌, “1998ರಲ್ಲಿ ಟಿಎಂಸಿ ಪಕ್ಷ ಸ್ಥಾಪನೆಯಾದ ಸಂದರ್ಭ ಕಾಂಗ್ರೆಸ್‌ ಹಾಗು ಸಿಪಿಐ(ಎಂ) ಪಕ್ಷಗಳು ತಮ್ಮ ಪ್ರಮುಖ ಎದುರಾಳಿಗಳು ಎಂದು ಮಮತಾ ಬ್ಯಾನರ್ಜಿ ಹೇಳುತ್ತಿದ್ದರು. 20 ವರ್ಷಗಳ ತನ್ನ ಇತಿಹಾಸದುದ್ದಕ್ಕೂ ಸಿಪಿಐ(ಎಂ) ತನ್ನ ಪ್ರಮುಖ ರಾಜಕೀಯ ಎದುರಾಳಿ ಎಂದು ಹೇಲಿಕೊಂಡು ಬರುತ್ತಿದೆ. ಆದರೆ ಈಗ ಇಬ್ಬರೂ ಸ್ನೇಹಿತರಾಗಿಬಿಟ್ಟಿರುವರೇ?” ಎಂದು ಪ್ರಶ್ನಸಿದ್ದಾರೆ.

ಪಂಚ ರಾಜ್ಯಗಳ ಚುನಾವಣೆಯ ಮತಎಣಿಕೆ ಕಾರ್ಯ ಆರಂಭವಾಗುವ ಮುನ್ನ ಎನ್‌ಡಿಎ ತನ್ನ ಮಿತ್ರ ಪಕ್ಷಗಳ ಸಭೆ ಸೇರಿದೆ.

Tags

Related Articles

Leave a Reply

Your email address will not be published. Required fields are marked *

Language
Close