Breaking Newsದೇಶಪ್ರಚಲಿತ
ಅನಿವಾಸಿ ಭಾರತೀಯರು ದೇಶದ ಹಿರಿಮೆ ಹೆಚ್ಚಿಸುತ್ತಿರುವ ರಾಷ್ಟ್ರದೂತರು: ಪ್ರಧಾನಿ #ModiInRwanda
ಕಿಗಾಲಿ: ಜಗತ್ತಿನಾದ್ಯಂತ ಇರುವ ಭಾರತೀಯ ಮೂಲದ ಜನರ ಕೊಡುಗೆಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ. ದೇಶದ ರಾಯಭಾರಿಗಳಾದ ಅನಿವಾಸಿ ಭಾರತೀಯರು ಜಗತ್ತಿನೆಲ್ಲೆಡೆ ತಮ್ಮ ಛಾಪು ಸೃಷ್ಟಿಸುತ್ತಿದ್ದಾರೆ ರಾಷ್ಟ್ರದೂತರು ಎಂದಿದ್ದಾರೆ.
ಕಿಗಾಲಿಯಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ,”ದೇಶದಲ್ಲಿ ಭಾರತೀಯರ ಕೆಲಸದ ಕುರಿತು ಅಧ್ಯಕ್ಷ ಕಗಾಮೆ ನನ್ನ ಬಳಿ ತಿಳಿಸಿದ್ದಾರೆ. ರ್ವಾಂಡಾದ ಅಭಿವೃದ್ಧಿಯಲ್ಲಿ ಶ್ಲಾಘನೀಯ ಕೊಡುಗೆ ನೀಡುತ್ತಿರುವ ಭಾರತೀಯ ಸಮುದಾಯ ಸಾಕಷ್ಟು ಸೇವೆ ಮಾಡುತ್ತಿದೆ. ಇದನ್ನು ಕೇಳಿ ನನಗೆ ಸಂತಸವಾಯಿತು” ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, “ಜಗತ್ತಿನ ಎಲ್ಲೆಡೆ ತನ್ನದೇ ಕೊಡುಗೆಗಳ ಮೂಲಕ ಭಾರತೀಯ ಸಮುದಾಯ ತನ್ನದೇ ಛಾಪು ಮೂಡಿಸಿ ನಮ್ಮಲ್ಲಿ ಹೆಮ್ಮೆ ಮೂಡಿಸಿದೆ. ರ್ವಾಂಡಾದ ಭಾರತೀಯ ಸಮುದಾಯ ಭಾರತ-ರ್ವಾಂಡಾ ನಡುವಿನ ಸ್ನೇಹದ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ” ಎಂದು ಹೇಳಿದ್ದಾರೆ.
Wonderful interaction with the Indian diaspora in Rwanda.
In every part of the part of the world, the Indian diaspora is distinguishing itself and making us proud of their accomplishments.
Rwanda’s Indian community is a very positive influence on the India-Rwanda friendship. pic.twitter.com/6b2wd1eEQ0
— Narendra Modi (@narendramodi) July 23, 2018
ಅಲ್ಲದೇ ರ್ವಾಂಡಾದಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ತೆರೆಯುತ್ತಿರುವುದರಿಂದ ಪೂರ್ವ ಆಫ್ರಿಕಾದ ಅನಿವಾಸಿ ಭಾರತೀಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಆಫ್ರಿಕಾದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾದ ರ್ವಾಂಡಾಗೆ ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿ ಇದ್ದಾರೆ.