ಕೆನಡಾ ಪ್ರಧಾನಿ ಟ್ರುಡುರನ್ನು ಬರಮಾಡಿಕೊಂಡು ಶುಭ ಕೋರಿದ ಪ್ರಧಾನಿ ಮೋದಿ

Posted In : ದೇಶ

ದೆಹಲಿ: ವಾರದ ಮಟ್ಟಿಗೆ ಭಾರತ ಪ್ರವಾಸಕ್ಕೆ ಆಗಮಿಸಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡುರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರಮಾಡಿಕೊಂಡಿದ್ದಾರೆ. 

ಖಾಲಿಸ್ತಾನೀ ಭಯೋತ್ಪಾದಕ ಜಸ್ಪಾಲ್‌ ಅತ್ವಾಲ್‌ನೊಂದಿಗೆ ಟ್ರುಡು ಪತ್ನಿ ಸೋಫಿ ಟ್ರುಡು ಮುಂಬಯಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಛಾಯಾಚಿತ್ರವೊಂದಕ್ಕೆ ಪೋಸ್‌ ನೀಡಿ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲೇ ಈ ಭೇಟಿ ನಡೆಯುತ್ತಿದೆ.

*ಫೆಬ್ರವರಿ 17ರಂದು ಭಾರತಕ್ಕೆ ಆಗಮಿಸಿರುವ ಟ್ರುಡು ವಾರದ ಮಟ್ಟಿಗೆ ದೇಶದ ಪ್ರವಾಸದಲ್ಲಿದ್ದಾರೆ. ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿ, ರಕ್ಷಣಾ ಒಪ್ಪಂದಗಳು ಹಾಗು ಸಮಗ್ರ ಸ್ಥರದಲ್ಲಿ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಆಶಯವಿರುವುದಾಗಿ ಭಾರತಕ್ಕೆ ಆಗಮಿಸುವ ಮುನ್ನ ಟ್ರುಡು ಟ್ವಿಟ್‌ ಮಾಡಿದ್ದರು.

*ಆಗ್ರಾದಲ್ಲಿರುವ 17ನೇ ಶತಮಾನದ  ಮುಘಲ್‌ ಸ್ಮಾರಕ ತಾಜ್‌ ಮಹಲ್‌ಗೆ ಭೇಟಿ ನೀಡುವ ಮೂಲಕ ಟ್ರುಡು ತಮ್ಮ ಭಾರತ ಪ್ರವಾಸ ಆರಂಭಿಸಿದ್ದರು.

*ಅಮೃತಸರದ ಸ್ವಣಾ ಮಂದಿರದಲ್ಲಿ ಟ್ರುಡುಗೆ ಅದ್ಧೂರಿ ಸ್ವಾಗತ ಕೋರುವುದಾಗಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಫೆಬ್ರವರಿ 18ರಂದು ಘೋಷಿಸಿತ್ತು.

*ಬಳಿಕ ಮಥುರಾ ಬಳಿ ಇರುವ ಚುರ್ಮುರಾ ವನ್ಯಜೀವಿ ಧಾಮಕ್ಕೆ ಟ್ರುಡು ಭೇಟಿಯಿತ್ತರು.

*ಸೋಮವಾರದಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಪತ್ನಿ ಮಕ್ಕಳ ಸಮೇತ ಭೇಟಿಯಿತ್ತ ಟ್ರುಡು. ಸಬರಮತಿ ಆಶ್ರಮ  ಸ್ವತಂತ್ರ ಚಳವಳಿ ಸಂದರ್ಭ ಮೋಹನದಾಸ ಗಾಂಧಿಯ ಮನೆಯಾಗಿತ್ತು. ಬಳಿಕ ಗಾಂಧಿನಗರದ ಅಕ್ಷರ ಧಾಮಕ್ಕೆ ಭೇಟಿಯಿತ್ತ ಟ್ರುಡು. ಬಳಿಕ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿಯೊಂದಿಗೆ ಗುಜರಾತ್‌-ಕೆನಡಾ ಸಂಬಂಧದ ಕುರಿತ ಚರ್ಚೆ.

*ಟ್ರುಡುರನ್ನ ಭೇಟಿಯಾಗುವುದಾಗಿ ಪಂಜಾಬ್‌ ಮುಖ್ಯಮಂತ್ರಿ ಕ್ಯಾ.ಅಮರೀಂದರ್‌ ಸಿಂಗ್‌ ಟ್ವೀಟ್‌.

*ಕೆನಡಾ ಪ್ರಧಾನಿಯ ಭೇಟಿಯನ್ನು ತಾತ್ಸಾರದಿಂದ ಕಾಣಲಾಗುತ್ತಿದೆ ಎಂಬ ಆರೋಪ ಅಲ್ಲಗಳೆದ ಭಾರತ ಸರಕಾರ ಸಕಲ ರಾಜತಾಂತ್ರಿಕ ಗೌರವಗಳೊಂದಿಗೆ ಟ್ರುಡುರನ್ನು ಕಾಣಲಾಗುತ್ತಿದೆ ಎಂದಿದೆ. ಸಾಮಾನ್ಯವಾಗಿ ಪ್ರವಾಸದ ಆರಂಭದಲ್ಲಿ ಇರಬೇಕಿದ್ದ ದ್ವಿಪಕ್ಷೀಯ ಸಭೆ ಹಾಗು ಮಾತುಕತೆಗಳು ಪ್ರವಾಸದ ಅಂತ್ಯಕ್ಕೆ ನಿಗದಿ ಪಡಿಸಿರುವ ಕುರಿತು ಅಚ್ಚರಿ ವ್ಯಕ್ತಪಡಿಸಿದ ಭಾರತ ಸರಕಾರ.

*ಮುಂಬಯಿಯಲ್ಲಿ ಉದ್ಯಮಿಗಳನ್ನು ಭೇಟಿಯಾದ ಟ್ರುಡು. ಕೆನಡಾದಲ್ಲಿ ಭಾರತದ ಕಾರ್ಪೋರೇಟ್‌ ವಲಯ ಒಂದು ಶತಕೋಟಿ ಡಾಲರ್‌ನಷ್ಟು ಹೂಡಿಕೆ ಮಾಡಿದ್ದು 5000 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ ಟ್ರುಡು. ಬಳಿಕ ಬಾಲಿವುಡ್‌ ನಟರಾದ ಶಾಹ್‌ರುಖ್‌ ಖಾ‌ನ್‌, ಆಮೀರ್‌ ಖಾನ್‌ರನ್ನು ಭೇಟಿಯಾದ ಟ್ರುಡು.

*ಬುಧವಾರದಂದು ಸ್ವರ್ಣ ಮಂದಿರಕ್ಕೆ ಭೇಟಿಯಿತ್ತ ಟ್ರುಡು. ಮಂದಿರದಲ್ಲಿ ಟ್ರುಡುಗೆ ಸನ್ಮಾನ.

*ಖಾಲಿಸ್ತಾನಿ ಭಯೋತ್ಪಾದಕ ಜಸ್ಪಾಲ್‌ ಅತ್ವಾಲ್‌ನನ್ನು ದೆಹಲಿಯ ಕೆನಡಾ ಹೌಸ್‌ನ ಔತಣಕುಟವೊಂದಕ್ಕು ಆಹ್ವಾನವಿತ್ತ ಕಾರಣ ಭುಗಿಲೆದ್ದ ವಿವಾದ.ಬಳಿಕ ಆಹ್ವಾನ ರದ್ದು. ಈ ಕುರಿತು ಪ್ರತಿಕ್ರಿಯಿಸಿದ ಟ್ರುಡು “ಪ್ರಶ್ನೆಯಲ್ಲಿರುವ ವ್ಯಕ್ತಿಗೆ ಆಹ್ವಾನ ನೀಡಬಾರದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಕೂಡಲೇ ಆಹ್ವಾನವನ್ನು ರದ್ದುಪಡಿಸಿದ್ದೇವೆ” ಎಂದು ಟ್ರುಡು ಬಳಿಕ ತಿಳಿಸಿದ್ದಾರೆ.

*ಗುರುವಾರದಂದು ದೆಹಲಿಯ ಜಮಾ ಮಸೀದಿಗೆ ಭೇಟಿಯಿತ್ತ ಟ್ರುಡು ಕುಟುಂಬ. ಬಳಿಕ ಕ್ರಿಕೆಟರ್‌ಗಳಾದ ಮೊಹಮ್ಮದ್‌ ಅಝರುದ್ದೀನ್‌ ಹಾಗು ಕಪಿಲ್‌ ದೇವ್‌ರೊಂದಿಗೆ ಕೆಲ ಕಾಲ ಕ್ರಿಕೆಟ್‌ ಮೋಜು.

*ಜಸ್ಟಿನ್‌ ಟ್ರುಡು ಭೇಟಿಯನ್ನು ಕಾತರದಿಂದ ಕಾಯುತ್ತಿರುವುದಾಗಿ ಗುರುವಾರ ಟ್ವೀಟ್‌ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ.

 

Leave a Reply

Your email address will not be published. Required fields are marked *

fourteen − seven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top