ರಾಷ್ಟ್ರಪ್ರಶಸ್ತಿ ವಿಜೇತ ಕುಂದನ್ ಶಾ ನಿಧನ

Posted In : ಸಿನಿಮಾ ಸಮಾಚಾರ

ದೆಹಲಿ: ಜಾನೆ ಭಿ ದೊ ಯಾರೋನ್ ಹಾಗು ಕಭಿ ಹಾ ಕಬೀ ನಾ ದಂತಹ ಪ್ರಸಿದ್ಧ ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ಕುಂದನ್ ಶಾ(69) ಹೃದಯಾಘಾತದಿಂದ ಶನಿವಾರ ಮುಂಬೈನಲ್ಲಿ ನಿಧನರಾದರು.

ಸಿನಿಮಾ ಮಾತ್ರವಲ್ಲದೇ, ಶಾ ಯೆ ಜೋ ಹೈ ಝಿಂದಗಿ, ವಗ್ಲೆ ಕಿ ದುನಿಯ’ ಸೇರಿ ದಂತೆ ಹಲವು ಟಿವಿ ಸೀರಿಸ್ ಗಳನ್ನು ನಿರ್ದೇಶಿಸಿದ್ದಾರೆ. 1983ರಲ್ಲಿ ಬಿಡುಗಡೆ ಯಾದ ಜಾನೆ ಭಿ ದೊ ಯಾರೋನ್(1983) ಅತ್ಯುತ್ತಮ ಚಿತ್ರ. ಬಾಲಿವುಡ್ ಅತ್ಯುತ್ತಮ ಚಿತ್ರಗಳಲ್ಲಿ ಜಾನೆ ಭಿ ದೊ ಯಾರೋನ್ ಗುರುತಿಸ ಲ್ಪಡುತ್ತದೆ. ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ನಾಸೀರುದ್ದೀನ್ ಶಾ, ರವಿ ಬಾಸ್ವಾನಿ, ಓಂ ಪುರಿ, ಸತೀಶ್ ಕೌಶಿಕ್, ಪಂಕಜ್ ಕಪೂರ್ ಮತ್ತು ಭಕ್ತಿ ಬಾರ್ವೆ ನಟಿಸಿದ್ರು. ಶಾ ಈ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ನುಕ್ಕಡ್ (1986) ವಾಗ್ಲೆ ಕೀ ದುನಿಯಾ (1988) ಮುಂತಾದ ಟಿವಿ ಧಾರಾವಾಹಿಗಳು, ಶಾರೂಕ್ ಖಾನ್ ನಟನೆಯ ಕಭೀ ಹಾನ್ ಕಭೀ ನಾ (1993), ಪ್ರೀತಿ ಝಿಂಟಾ ನಟನೆಯ ಕ್ಯಾ ಕೆಹನಾ (2000), ಪಿ ಸೆ ಪೆಂ ತಕ್ (2005) ಮುಂತಾದವು ಕಳೆದ ಬಾರಿ ನಿರ್ದೇಶಿಸಿದ ಚಿತ್ರಗಳು. ನವೆಂಬರ್ 2015ರಲ್ಲಿ ತಮ್ಮ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂತಿರುಗಿಸಿದ 23 ನಿರ್ದೇಶಕರುಗಳಲ್ಲಿ ಶಾ ಕೂಡ ಒಬ್ಬರು.

Leave a Reply

Your email address will not be published. Required fields are marked *

two × 3 =

 
Back To Top