ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶ

ಗ್ರಾಹಕರನ್ನು ಆಕರ್ಷಿಸಲು ಡಾರ್ಕ್ ಪ್ಯಾಟರ್ನ್ ಪ್ರದರ್ಶನ; ಸ್ಪೈಸ್ ಜೆಟ್ ಏರ್‌ಲೈನ್ಸ್‌ಗೆ 1 ಲಕ್ಷ ರು. ದಂಡ

ಡಾರ್ಕ್ ಪ್ಯಾಟರ್ನ್; ಸ್ಪೈಸ್ ಜೆಟ್ ಏರ್‌ಲೈನ್ಸ್‌ಗೆ 1 ಲಕ್ಷ ದಂಡ

ವಿಮಾನಯಾನ ಟಿಕೆಟ್ ಬುಕಿಂಗ್ ವೇಳೆ ಗ್ರಾಹಕರನ್ನು ವಂಚಿಸುವ ರೀತಿಯಲ್ಲಿ 'ಡಾರ್ಕ್ ಪ್ಯಾಟರ್ನ್ ' ಪ್ರದರ್ಶಿಸಿದ್ದ ಸ್ಪೈಸ್ ಜೆಟ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 1 ಲಕ್ಷ ರುಪಾಯಿ ದಂಡ ವಿಧಿಸುವ ಮೂಲಕ ಎಚ್ಚರಿಸಿದೆ.

"ಸತ್ತರೂ ಭೂತವಾಗಿ ಬಂದು ಕಾಡುತ್ತೇನೆ"; ಜುಲೈ 20ಕ್ಕೆ ಸಂಸತ್ ಚಲೋಗೆ ಸೋನಂ ವಾಂಗ್ಚುಕ್ ಕರೆ

20ನೇ ದಿನಕ್ಕೂ ಮುಂದುವರಿದ ಸೋನಂ ವಾಂಗ್ಚುಕ್ ಉಪವಾಸ

ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಜುಲೈ 20ರವರೆಗೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಅದೇ ದಿನ ನಡೆಯಲಿರುವ 'ಸಂಸತ್ ಚಲೋ' ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಜನತೆಗೆ ಕರೆ ನೀಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಅವರು ಹೋರಾಟ ನಡೆಸುತ್ತಿದ್ದು, ಆರೋಗ್ಯ ಹದಗೆಟ್ಟಿದ್ದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಪಿಎಫ್ ವಿವಾದಗಳ ಇತ್ಯರ್ಥಕ್ಕೆ 'ವಿಶ್ವಾಸ್-2026' ಯೋಜನೆ ಜಾರಿ; ಉದ್ಯೋಗಸ್ಥರಿಗೆ ಏನೆಲ್ಲಾ ಲಾಭ?

ಪಿಎಫ್ ವಿವಾದಗಳ ಇತ್ಯರ್ಥಕ್ಕೆ 'ವಿಶ್ವಾಸ್-2026' ಯೋಜನೆ ಜಾರಿ

EPFO: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952 ರ ಸೆಕ್ಷನ್ 14ಬಿ ಮತ್ತು ಸಾಮಾಜಿಕ ಭದ್ರತೆ, 2020ರ ಸಂಹಿತೆಯ ಸೆಕ್ಷನ್ 128ರ ಅಡಿಯಲ್ಲಿ ಹದಂಡ ವಿಧಿಸುವುದಕ್ಕೆ ಸಂಬಂಧಿಸಿದ ವಿವಾದಗಳ ಪರಸ್ಪರ ಸೌಹಾರ್ದಯುತ ಇತ್ಯರ್ಥಕ್ಕೆ ಅನುಕೂಲವಾಗುವಂತೆ ಪರಿಹಾರ ಉಪಕ್ರಮವಾದ "ವಿಶ್ವಾಸ್, 2026" ಅನ್ನು ಪ್ರಾರಂಭಿಸಿದೆ.

ಜೋರ್ಡನ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ದಾಳಿ? F-35 ಸೇರಿ ಹಲವು ಯುದ್ಧವಿಮಾನಗಳು ಧ್ವಂಸ!

ಜೋರ್ಡನ್‌ನಲ್ಲಿ ಅಮೆರಿಕ ನೆಲೆ ಮೇಲೆ ಇರಾನ್ ದಾಳಿ?

ಜೋರ್ಡನ್‌ನ ಅಲ್-ಅಜ್ರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಸೇನಾ ವಿಭಾಗದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಈ ದಾಳಿಯಲ್ಲಿ F-35, F-16 ಸೇರಿದಂತೆ ಹಲವು ಯುದ್ಧವಿಮಾನಗಳು ಮತ್ತು ಸೇನಾ ಉಪಕರಣಗಳು ನಾಶವಾಗಿದ್ದು, ಅಮೆರಿಕದ ಸೈನಿಕರಿಗೆ ಸಾವುನೋವು ಸಂಭವಿಸಿದೆ ಎಂದು ಇರಾನ್ ಹೇಳಿಕೊಂಡಿದೆ.

ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ; ಏನು ಇದರ ವಿಶೇಷತೆ?

ಹೈಡ್ರೋಜನ್ ಹೈಡ್ರೋಜನ್ ಪ್ರಧಾನಿ ಮೋದಿ ರೈಲಿಗೆ ಚಾಲನೆ

ಹೈಡ್ರೋಜನ್ ಚಾಲಿತ ರೈಲುಗಳನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ಆಯ್ದ ದೇಶಗಳಲ್ಲಿ ಈಗ ಭಾರತವು ಸೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸುವ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಜಿಂದ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.

"ನಿಮ್ಮ ಹೆಸರಿನಿಂದ ಡಾಕ್ಟರ್‌ ತೆಗೆದು ಹಾಕಿ"; 4 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಆಸ್ಪತ್ರೆಗಳಿಗೆ ಛೀಮಾರಿ ಹಾಕಿದ ಸುಪ್ರೀಂ

ಬಾಲಕಿ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಆಸ್ಪತ್ರೆಗೆ ಛೀಮಾರಿ ಹಾಕಿದ ಸುಪ್ರೀಂ

Supreme Court: 4 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಸಕಾಲಿಕ ಚಿಕಿತ್ಸೆ ನೀಡಲು ವಿಫಲವಾಗಿ ಆಕೆಯ ಸಾವಿಗೆ ಕಾರಣವಾದ ಆರೋಪದ ಮೇಲೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅವುಗಳ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಯಾವೆಲ್ಲ ಬಿಲ್‌ಗಳಿಗೆ ಸಿಗಲಿದೆ ಗ್ರೀನ್‌ ಸಿಗ್ನಲ್‌?

7 ಮಸೂದೆಗಳಿಗೆ ಕೇಂದ್ರದ ಗ್ರೀನ್ ಸಿಗ್ನಲ್

ಮುಂಬರುವ ಸಂಸತ್ ಅಧಿವೇಶನಕ್ಕಾಗಿ ಕೇಂದ್ರ ಸರ್ಕಾರ ಏಳು ಪ್ರಮುಖ ಮಸೂದೆಗಳನ್ನು ಪಟ್ಟಿ ಮಾಡಿದೆ. ಆದರೆ ಮಹಿಳಾ ಮೀಸಲು, ಪರಿಸೀಮನೆ ಹಾಗೂ 130ನೇ ಸಂವಿಧಾನ ತಿದ್ದುಪಡಿ ಮಸೂದೆಗಳು ತಾತ್ಕಾಲಿಕ ಕಾರ್ಯಸೂಚಿಯಲ್ಲಿ ಸ್ಥಾನ ಪಡೆದಿಲ್ಲ. FCRA, ಉನ್ನತ ಶಿಕ್ಷಣ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ, MSME ಸೇರಿದಂತೆ ಹಲವು ಮಹತ್ವದ ಮಸೂದೆಗಳನ್ನು ಈ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ಸಾವು

ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ

ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ. ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಮುರ್ಷಿದಾಬಾದ್‌ನ ಬೆರ್ಹಾಂಪೋರ್ ಪ್ರದೇಶದಲ್ಲಿ ಕರ್ಣಸುಬರ್ಣ ರೈಲ್ವೆ ಕ್ರಾಸಿಂಗ್‌ನಲ್ಲಿ ಶುಕ್ರವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ.

NEET UG Result 2026: ನೀಟ್‌ ಮರುಪರೀಕ್ಷೆ ಫಲಿತಾಂಶ ಪ್ರಕಟ; ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಅರ್ಹತೆ ಪಡೆದ 11.21 ಲಕ್ಷ ಅಭ್ಯರ್ಥಿಗಳು

ನೀಟ್‌ ಫಲಿತಾಂಶ ಪ್ರಕಟ; ಅರ್ಹತೆ ಪಡೆದ 11.21 ಲಕ್ಷ ಅಭ್ಯರ್ಥಿಗಳು

21 ಜೂನ್ ರಂದು ಭಾರತದ 551 ನಗರಗಳು ಮತ್ತು ವಿದೇಶದ 14 ನಗರಗಳಲ್ಲಿ ಒಟ್ಟು 5,440 ಕೇಂದ್ರಗಳಲ್ಲಿ ನೀಟ್ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 11.21 ಲಕ್ಷ ಅಭ್ಯರ್ಥಿಗಳು ವೈದ್ಯಕೀಯ, ದಂತವೈದ್ಯಕೀಯ, ಆಯುಷ್ (AYUSH) ಮತ್ತು ಇತರೆ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಹತೆ ಪಡೆದಿದ್ದಾರೆ.

150 ಕೋಟಿ ರುಪಾಯಿ ಆಸ್ತಿಗಾಗಿ ಹರಿಯಿತು ನೆತ್ತರು: ಕುಡಿದ ಮತ್ತಿನಲ್ಲಿ ತಂದೆಯನ್ನೇ ಗುಂಡಿಕ್ಕಿ ಕೊಂದ ಪಾಪಿ ಪುತ್ರ

150 ಕೋಟಿ ರುಪಾಯಿ ಆಸ್ತಿಗಾಗಿ ತಂದೆಯನ್ನೇ ಕೊಂದ ಪುತ್ರ

Crime News: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮೋದಿನಗರದಲ್ಲಿ ₹150 ಕೋಟಿ ಮೌಲ್ಯದ ಆಸ್ತಿ ವಿವಾದ ದುರಂತ ಅಂತ್ಯ ಕಂಡಿದೆ. ಮದ್ಯದ ಅಮಲಿನಲ್ಲಿದ್ದ 32 ವರ್ಷದ ಪುತ್ರ ನಿಖಿಲ್ ತನ್ನ ತಂದೆ ಹರಿಯೋಂ ಚೌಧರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಈಗಾಗಲೇ 25 ಬಿಘಾ ಜಮೀನು ಮತ್ತು ಅಂಗಡಿಗಳನ್ನು ಪಡೆದಿದ್ದರೂ ಉಳಿದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಹಿರಿಯ ನಾಯಕರು ಪಕ್ಷ ತೊರೆದರೂ ಸೋದರಳಿಯ ಅಭಿಷೇಕ್‌ನನ್ನು ಬಿಟ್ಟು ಕೊಡುತ್ತಿಲ್ಲ ಮಮತಾ ಬ್ಯಾನರ್ಜಿ; ದೀದಿಗೆ ಬೆರಳೆಣಿಕೆಯ ನಿಷ್ಠಾವಂತರೇ ಈಗ ಶಕ್ತಿ

ಹೊಡೆತ ಬಿದ್ದರೂ ಅಭಿಷೇಕ್‌ನನ್ನು ಬಿಟ್ಟು ಕೊಡುತ್ತಿಲ್ಲ ಮಮತಾ ಬ್ಯಾನರ್ಜಿ

Mamata Banerjee: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ರಾಜಕೀಯ ಹಿನ್ನಡೆಯಾಗಿದ್ದು, ಮೂರು ದಶಕಗಳ ಕಾಲ ಅವರ ಆಪ್ತರಾಗಿದ್ದ ಟಿಎಂಸಿ ಹಿರಿಯ ನಾಯಕ ಹಾಗೂ ಶಾಸಕ ಮದನ್ ಮಿತ್ರ ಬಂಡಾಯ ಬಣಕ್ಕೆ ಸೇರುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆ ಟಿಎಂಸಿಯಲ್ಲಿ ಭಿನ್ನಮತ ಮತ್ತಷ್ಟು ಹೆಚ್ಚಿಸಿರುವುದರ ಜತೆಗೆ, ಮುಂಗಾರು ಅಧಿವೇಶನಕ್ಕೂ ಮುನ್ನ ಪಕ್ಷದ ಹಲವು ನಾಯಕರು ಮತ್ತು ಸಂಸದರು ದೂರವಾಗುತ್ತಿರುವ ಬೆಳವಣಿಗೆ ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೋದರಳಿಯ ಅಭಿಷೇಕ್‌ ಬ್ಯಾನರ್ಜಿಯ ಕಾರಣ ನೀಡಿ ಹಲವು ನಾಯಕರು ಪಕ್ಷ ತೊರೆಯುತ್ತಿದ್ದರೂ ಮಮತಾ ಈ ಬಗ್ಗೆ ಕ್ಯಾರೇ ಎಂದಿಲ್ಲ.

34 ಕೋಟಿ ಇಪಿಎಫ್ ಖಾತೆಗಳಿಗೆ ಬಡ್ಡಿ ಜಮೆ; ನಿಮ್ಮ ಅಕೌಂಟ್‌ಗೂ ಬಂತಾ? ಹೀಗೆ ಚೆಕ್‌ ಮಾಡಿ

ಇಪಿಎಫ್ ಖಾತೆಗೆ ಬಡ್ಡಿ ಜಮೆ; ಹೀಗೆ ಚೆಕ್‌ ಮಾಡಿ

Employees Provident Fund: ದೇಶಾದ್ಯಂತ ಇರುವ ಸುಮಾರು 34 ಕೋಟಿ ಜನರ ಭವಿಷ್ಯ ನಿಧಿ ಖಾತೆಗೆ ಬಡ್ಡಿ ಮೊತ್ತವನ್ನು ಜುಲೈ 15ರಂದು ಜಮೆ ಮಾಡಲಾಗಿದೆ. ಭವಿಷ್ಯ ನಿಧಿ ಖಾತೆ ಹೊಂದಿರುವ ಉದ್ಯೋಗಿಗಳು ಬಡ್ಡಿ ಮೊತ್ತ ತಮ್ಮ ಖಾತೆಗೆ ಜಮೆ ಆಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ಪರಿಶೀಲಿಸಬೇಕು ಎನ್ನುವ ವಿವರ ಇಲ್ಲಿದೆ.

Jagannath Rath Yatra: ಭುವನೇಶ್ವರದ ಕಳಿಂಗ ಶ್ರೀವಾಣಿ ಕ್ಷೇತ್ರದಲ್ಲಿ ಅದ್ಧೂರಿಯಾಗಿ ನೆರವೇರಿದ ಜಗನ್ನಾಥ ರಥಯಾತ್ರೆ; ಸಾವಿರಾರು ಭಕ್ತರು ಭಾಗಿ

ಕಳಿಂಗ ಶ್ರೀವಾಣಿ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಜಗನ್ನಾಥ ರಥಯಾತ್ರೆ

ಒಡಿಶಾದ ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸಸ್‌ ಸಂಸ್ಥೆ ಕ್ಯಾಂಪಸ್‌ನಲ್ಲಿ ಪುರಿ ಜಗನ್ನಾಥ ದೇವಾಲಯದಂತೆಯೇ ಮಂದಿರವಿದೆ. ಅಲ್ಲಿನ ಮಾದರಿಯಂತೆ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ, ಜಗನ್ನಾಥ ರಥಯಾತ್ರೆ ನಡೆಸಲಾಗುತ್ತದೆ. ರಥಯಾತ್ರೆಯಲ್ಲಿ ವಿವಿಧೆಡೆಯಿಂಧ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; ಓರ್ವ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; ಓರ್ವ ಸಾವು

Jagannath Rath Yatra: ಒಡಿಶಾದ ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟು ಸುಮಾರು 100 ಮಂದಿ ಗಾಯಗೊಂಡಿದ್ದಾರೆ. ಬಡಾ ದಂಡಾ (ಗ್ರಾಂಡ್ ರೋಡ್) ಎಂಬಲ್ಲಿ ಈ ಘಟನೆ ನಡೆದಿದೆ.

ಬುಲ್ಡೋಜರ್ ಕಾರ್ಯಾಚರಣೆಗೆ ಸಂಪೂರ್ಣ ನಿಷೇಧವಿಲ್ಲ, ಆದರೆ...: ಸುಪ್ರೀಂ ಕೋರ್ಟ್‌ನ ಮಹತ್ವ ತೀರ್ಪಿನಲ್ಲಿ ಏನಿದೆ?

ಬುಲ್ಡೋಜರ್ ಕಾರ್ಯಾಚರಣೆಗೆ ಸಂಪೂರ್ಣ ನಿಷೇಧವಿಲ್ಲ: ಸುಪ್ರೀಂ ಕೋರ್ಟ್

Bulldozer Action: ಬುಲ್ಡೋಜರ್ ಬಳಸಿ ಕಟ್ಟಡಗಳನ್ನು ಧ್ವಂಸಗೊಳಿಸುವ ಪ್ರಕರಣಗಳ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 2024ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ಮಾರ್ಗಸೂಚಿಗಳನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.

ಇಸ್ರೋ ತೊರೆದ 100ಕ್ಕೂ ಹೆಚ್ಚು ವಿಜ್ಞಾನಿಗಳು:‌ ಕೇಂದ್ರ ಸರ್ಕಾರಕ್ಕೆ ತಲೆನೋವಾದ ಸಾಮೂಹಿಕ ರಾಜೀನಾಮೆ

ಇಸ್ರೋ ತೊರೆದ 100ಕ್ಕೂ ಹೆಚ್ಚು ವಿಜ್ಞಾನಿಗಳು; ಕಾರಣವೇನು?

Over 100 scientists leave ISRO: 100ಕ್ಕೂ ಹೆಚ್ಚು ವಿಜ್ಞಾನಿಗಳು ಇಸ್ರೋದಿಂದ ಹೊರ ನಡೆದಿದ್ದಾರೆ. ಬಾಹ್ಯಾಕಾಶ ಇಲಾಖೆ ಅಧಿಕೃತವಾಗಿ ನಿರ್ಗಮನಗಳ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಇತ್ತೀಚಿನ ತಿಂಗಳಲ್ಲಿ 100ರಿಂದ 120 ವಿಜ್ಞಾನಿಗಳು ರಾಜೀನಾಮೆ ನೀಡಿರಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಟೆಹರಾನ್‌ನಲ್ಲಿ ಡೊನಾಲ್ಡ್‌ ಟ್ರಂಪ್ ಶವಪೆಟ್ಟಿಗೆಯ ಬೃಹತ್ ಹೋರ್ಡಿಂಗ್‌: ಅಮೆರಿಕಕ್ಕೆ ಬಹಿರಂಗ ಸವಾಲು ಹಾಕಿದ ಇರಾನ್‌; ಮತ್ತೊಂದು ಹಂತಕ್ಕೆ ಹೋಗುತ್ತ ಸಂಘರ್ಷ?

ಟ್ರಂಪ್ ಶವಪೆಟ್ಟಿಗೆಯ ಚಿತ್ರ ಪ್ರದರ್ಶಿಸಿದ ಇರಾನ್

Donald Trump: ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶವಪೆಟ್ಟಿಗೆಯಲ್ಲಿ ಚಿತ್ರಿಸಿರುವ ಬೃಹತ್ ಹೋರ್ಡಿಂಗ್ ಅಳವಡಿಸಲಾಗಿದೆ. ʼWe Will Kill Trumpʼ ಎಂಬ ಸಂದೇಶವಿರುವ ಈ ಹೋರ್ಡಿಂಗ್ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

24 ಗಂಟೆಗಳಲ್ಲಿ 97 ಕೋಟಿ ರುಪಾಯಿ ಸಂಗ್ರಹ: ತಿರುಮಲ ದೇವಸ್ಥಾನಕ್ಕೆ ಹರಿದುಬಂತು ದಾಖಲೆಯ ದೇಣಿಗೆ; ಇದಕ್ಕೆ ಕಾರಣವಾಗಿದ್ದು ಆ ಒಂದು ನಿಯಮ

ತಿರುಮಲ ದೇವಸ್ಥಾನಕ್ಕೆ ಒಂದೇ ದಿನ ಹರಿದುಬಂತು 97 ಕೋಟಿ ರು. ದೇಣಿಗೆ

Record donations pour into Tirumala temple: ತಿರುಪತಿ ತಿರುಮಲದ ಬಾಲಾಜಿ ದೇವಸ್ಥಾನದಲ್ಲಿ ಮಂಗಳವಾರ (ಜು. 15) ಭಕ್ತರು ದೇಣಿಗೆ ಕೊಡಲು ಅಕ್ಷರಶಃ ಮುಗಿಬಿದ್ದಿದ್ದರು. ದೇವಸ್ಥಾನ ಮಂಡಳಿಯು 24 ಗಂಟೆಗಳಲ್ಲಿ ದಾಖಲೆಯ 96.98 ಕೋಟಿ ರುಪಾಯಿ ಸಂಗ್ರಹಿಸಿದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆ ಹೊಡೆಯುವ ಮುನ್ನವೇ ದಾಖಲೆಯ ಪ್ರಮಾಣದಲ್ಲಿ ದೇಣಿಗೆ ಹರಿದು ಬಂತು ಎಂದು ಮೂಲಗಳು ತಿಳಿಸಿವೆ.

ಉಕ್ರೇನ್ ದಾಳಿಯಿಂದ ರಷ್ಯಾಗೆ ಇಂಧನ ಬಿಕ್ಕಟ್ಟು: ಪೆಟ್ರೋಲ್ ಪೂರೈಸುವಂತೆ ಭಾರತಕ್ಕೆ ಮನವಿ; ಏನಿದು ಹೊಸ ಬೆಳವಣಿಗೆ?

ಭಾರತದಿಂದ ಪೆಟ್ರೋಲ್ ಕೇಳಿದ ರಷ್ಯಾ; ಏನಿದು ರಿವರ್ಸ್‌ ಎಕಾನಮಿ?

Russia-Ukraine War: ಉಕ್ರೇನ್ ದಾಳಿಯಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಭಾರಿ ಹಾನಿಯಾಗಿದ್ದು, ದೇಶದಲ್ಲಿ ಪೆಟ್ರೋಲ್ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುವಂತೆ ಮನವಿ ಮಾಡಿವೆ ಎಂದು ವರದಿಯಾಗಿದೆ.

ʼʼಉಪಾವಾಸ ಅಂತ್ಯಗೊಳಿಸಲು ಮನವಿ ಮಾಡಬೇಡಿ; ಜುಲೈ 20ರಂದು ಸಂಸತ್‌ ಮುತ್ತಿಗೆ ಹಾಕಲು ಬನ್ನಿʼʼ: ಬೆಂಬಲಿಗರಿಗೆ ಸೋನಮ್ ವಾಂಗ್ಚುವ್‌ ಕರೆ

"ಉಪಾವಾಸ ಅಂತ್ಯಗೊಳಿಸಲು ಮನವಿ ಮಾಡಬೇಡಿ": ಸೋನಮ್ ವಾಂಗ್ಚುವ್‌

Sonam Wangchuk: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ತಮ್ಮ ಅನಿರ್ದಿಷ್ಠಾವಧಿ ಉಪಾವಾಸ ಸತ್ಯಾಗ್ರಹವನ್ನು ಆರಂಭಿಸಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುವ್‌ ಇದನ್ನು ಹಿಂಪಡೆಯಲು ನಿರಾಕರಿಸಿದರು. ಸರ್ಕಾರದಿಂದ ಯಾವುದೇ ಭರವಸೆ ಇಲ್ಲದೆ ಉಪಾವಾಸ ಸತ್ಯಾಗ್ರಹವನ್ನು ರದ್ದುಗೊಳಿಸುವುದು ತಪ್ಪು ಸಂದೇಶ ರವಾನಿನಿಸಿದಂತಾಗುತ್ತದೆ ಎಂದು ಅವರು ಹೇಳಿದರು.

“ಶ್ರೀಕೃಷ್ಣ ಮುಸ್ಲಿಂ; ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ”: ನಾಲಗೆ ಹರಿಯಬಿಟ್ಟು ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಧರ್ಮಗುರು

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದ ಎಂದು ಧರ್ಮಗುರು

Maulana Jarjis Ansari: ಶ್ರೀಕೃಷ್ಣನು ಮುಸ್ಲಿಂ ಆಗಿದ್ದ, ಅವನು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ ಎಂದು ಹೇಳಿರುವ ಮುಸ್ಲಿಂ ಧರ್ಮಗುರುವಿನ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. “ನೀವು ನಂಬದಿದ್ದರೆ, ಶ್ರೀ ಭಗವದ್ಗೀತೆಯ 6ನೇ ಅಧ್ಯಾಯದ 10ನೇ ಶ್ಲೋಕವನ್ನು ಓದಿ” ಎಂದು ಅನ್ಸಾರಿ ಹೇಳಿದ್ದ.

ಒಂದು ದೇಶ-ಒಂದು ಚುನಾವಣೆ: ಮಳೆಗಾಲ ಅಧಿವೇಶನದಲ್ಲೇ ಮಸೂದೆ ಮಂಡಿಸಲು ಕೇಂದ್ರದ ಸಿದ್ಧತೆ

'ಒಂದು ದೇಶ - ಒಂದು ಚುನಾವಣೆ' ಮಸೂದೆ ಜಾರಿಗೆ ಮತ್ತೆ ಚರ್ಚೆ

One Nation One Election Bill: ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ 'ಒಂದು ದೇಶ - ಒಂದು ಚುನಾವಣೆ' ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಕ್ಕೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ವಿಶೇಷ ಬಹುಮತದ ಲೆಕ್ಕಾಚಾರ ನಡೆಯುತ್ತಿದ್ದು, 2034ರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಒಂದೇ ಸಮಯದಲ್ಲಿ ನಡೆಸುವ ಗುರಿ ಹೊಂದಲಾಗಿದೆ.

ಫೇಸ್‌ಬುಕ್‌ನಲ್ಲಿ ಶುರುವಾದ ಪ್ರೀತಿ ಜೈಲಿನಲ್ಲಿ ಅಂತ್ಯ: ವೀಸಾ ಇಲ್ಲದೆ ಪ್ರಿಯತಮೆಗಾಗಿ ಗಡಿ ದಾಟಿದ ಉತ್ತರ ಪ್ರದೇಶದ ʼಅಮರ ಪ್ರೇಮಿʼ ವ್ಯಕ್ತಿ ಈಗ ಪಾಕಿಸ್ತಾನದಲ್ಲಿ ಖೈದಿ

ಫೇಸ್‌ಬುಕ್‌ನಲ್ಲಿ ಶುರುವಾದ ಪ್ರೀತಿ ಪಾಕಿಸ್ತಾನದ ಜೈಲಿನಲ್ಲಿ ಅಂತ್ಯ

Love ends in prison: ಫೇಸ್‌ಬುಕ್‌ನಲ್ಲಿ ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಿದ ಕೊನೆಗೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪಾಕಿಸ್ತಾನದ ಜೈಲು ಪಾಲಾಗಿದ್ದಾನೆ. ಎರಡು ದೇಶಗಳ ನಡುವೆ ನೆಲೆಸಿದ್ದ ಇಬ್ಬರ ಪ್ರೀತಿಯ ಕಥೆಯು ಅಂತ್ಯಾವಾಗಿದ್ದು ಹೀಗೆ. ಆತನನ್ನು ಬಿಡುಗಡೆ ಮಾಡಿಸುವಂತೆ ಕುಟುಂಬವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

Gold Price Today On 16th July 2026: ಮತ್ತೆ ಇಳಿದ ಚಿನ್ನದ ಬೆಲೆ; ಬೆಂಗಳೂರಿನ ಇಂದಿನ ದರ ಚೆಕ್‌ ಮಾಡಿ

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಬೆಲೆ ಚೆಕ್‌ ಮಾಡಿ

Gold Silver Price Today: ಬುಧವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು ಇಳಿಕೆಯ ಹಾದಿಯಲ್ಲಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 25 ರುಪಾಯಿ ಕಡಿಮೆಯಾಗಿ 13,135 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 28 ರುಪಾಯಿ ಅಗ್ಗವಾಗಿ, 14,329 ರುಪಾಯಿಗೆ ಬಂದಿದೆ.

Loading...