ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Apache choppers: ಸೇನೆಗೆ ಮತ್ತೊಂದು ಬಲ; ಇದೇ ಮೊದಲ ಬಾರಿ ಅಪಾಚೆ ಹೆಲಿಕಾಪ್ಟರ್‌ಗಳು ಸೇರ್ಪಡೆ

15 ತಿಂಗಳ ವಿಳಂಬದ ನಂತರ, ಭಾರತೀಯ ಸೇನೆಯು ಅಂತಿಮವಾಗಿ ಅಪಾಚೆ AH-64E ದಾಳಿ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ. ಮೊದಲ ಮೂರು ಹೆಲಿಕಾಪ್ಟರ್‌ಗಳನ್ನು ಜುಲೈ 22 ರಂದು ಭಾರತೀಯ ಸೇನೆಯ ವಾಯುಯಾನ ದಳಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಸೇನೆಗೆ ಮತ್ತೊಂದು ಬಲ; 3 ಅಪಾಚೆ ಹೆಲಿಕಾಪ್ಟರ್‌ಗಳು ಸೇರ್ಪಡೆ

Profile Vishakha Bhat Jul 20, 2025 4:05 PM

ಜೈಪುರ: 15 ತಿಂಗಳ ವಿಳಂಬದ ನಂತರ, ಭಾರತೀಯ ಸೇನೆಯು ಅಂತಿಮವಾಗಿ ಅಪಾಚೆ AH-64E ದಾಳಿ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ( Apache choppers) ಅನ್ನು ಸ್ವೀಕರಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ. ಮೊದಲ ಮೂರು ಹೆಲಿಕಾಪ್ಟರ್‌ಗಳನ್ನು ಜುಲೈ 22 ರಂದು ಭಾರತೀಯ ಸೇನೆಯ ವಾಯುಯಾನ ದಳಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ. ಆರು ಅಪಾಚೆ ದಾಳಿ ಹೆಲಿಕಾಪ್ಟರ್‌ಗಳಿಗಾಗಿ ಭಾರತೀಯ ಸೇನೆಯು 2020 ರಲ್ಲಿ ಅಮೆರಿಕದೊಂದಿಗೆ 600 ಮಿಲಿಯನ್ ಯುಎಸ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು, ಆರಂಭದಲ್ಲಿ 2024 ರ ಮೇ ಮತ್ತು ಜೂನ್ ನಡುವೆ ವಿತರಣೆಯನ್ನು ನಿರೀಕ್ಷಿಸಲಾಗಿತ್ತು.

ಇಂದು ಅಥವಾ ನಾಳೆ (ಜುಲೈ 21) ಜೋಧ್‌ಪುರಕ್ಕೆ ಆಗಮಿಸುತ್ತವೆ ಎಂದು ಹೇಳಲಾಗಿದೆ. ಸೇನಾ ವಾಯುಯಾನ ದಳವು ಮಾರ್ಚ್ 2024 ರಲ್ಲಿ ಜೋಧ್‌ಪುರದ ನಾಗತಲಾವ್‌ನಲ್ಲಿ ತನ್ನ ಮೊದಲ ಅಪಾಚೆ ಸ್ಕ್ವಾಡ್ರನ್ ಅನ್ನು ಸ್ಥಾಪಿಸಿತು. ಪೈಲಟ್‌ಗಳು ಮತ್ತು ಸಿಬ್ಬಂದಿಗಳಿಗಳಿಗೆ ತರಬೇತಿ ನೀಡಲಾಗಿತ್ತು. ಆದರೆ ಸ್ಕ್ವಾಡ್ರನ್‌ನಲ್ಲಿ ಹೆಲಿಕಾಪ್ಟರ್‌ಗಳೇ ಇರಲಿಲ್ಲ. ಇದೀಗ ಸೇನೆಗೆ ಮತ್ತೊಂದು ಬಲ ಸೇರ್ಪಡೆಯಾಗಿದೆ.

ಅಪಾಚೆ ಹೆಲಿಕಾಪ್ಟರ್‌ಗಳು ಏಕೆ ಮುಖ್ಯ?

AH-64E ಅಪಾಚೆ ವಿಶ್ವದ ಅತ್ಯಂತ ಮುಂದುವರಿದ ಯುದ್ಧ ಹೆಲಿಕಾಪ್ಟರ್‌ ಆಗಿದೆ. ಪ್ರತಿಕೂಲ ಯುದ್ಧ ವಲಯಗಳಲ್ಲಿ ಪ್ರಬಲ ದಾಳಿಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಯುಎಸ್ ರಕ್ಷಣಾ ದೈತ್ಯ ಬೋಯಿಂಗ್‌ನಿಂದ ತಯಾರಿಸಲ್ಪಟ್ಟ ಅಪಾಚೆಯನ್ನು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್, ಯುಕೆ, ಇಸ್ರೇಲ್, ಈಜಿಪ್ಟ್ ಮತ್ತು ಈಗ ಭಾರತದಂತಹ ದೇಶಗಳ ಸಶಸ್ತ್ರ ಪಡೆಗಳಲ್ಲಿವೆ. 2015 ರ ಒಪ್ಪಂದದಡಿಯಲ್ಲಿ ಭಾರತವು ಮೊದಲು ಭಾರತೀಯ ವಾಯುಪಡೆಗಾಗಿ 22 ಅಪಾಚೆ ಹೆಲಿಕಾಪ್ಟರ್‌ಗಳ ಬೇಡಿಕೆ ಇಟ್ಟಿತ್ತು. ಫೆಬ್ರವರಿ 2020 ರಲ್ಲಿ, ಭಾರತ ಸರ್ಕಾರವು ಸುಮಾರು $600 ಮಿಲಿಯನ್ ಮೌಲ್ಯದ ಒಪ್ಪಂದದಲ್ಲಿ ಆರು AH-64E ಅಪಾಚೆಗಳ ಖರೀದಿಗೆ ಅನುಮೋದನೆ ನೀಡಿತ್ತು.

ಈ ಸುದ್ದಿಯನ್ನೂ ಓದಿ: Sher AK-203 Rifle: ಸೇನೆಗೆ ಆನೆ ಬಲ; ನಿಮಿಷಕ್ಕೆ 700 ಗುಂಡುಗಳು, 800 ಮೀಟರ್ ವ್ಯಾಪ್ತಿಯ ʼಶೇರ್‌ʼ ರೈಫಲ್‌ಗಳ ಸೇರ್ಪಡೆ

ಭಾರತೀಯ ವಾಯುಪಡೆಯ ಬದಲು ಭಾರತೀಯ ಸೇನೆಯು ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿರುವುದು ಇದೇ ಮೊದಲು. ಈ ಹೆಲಿಕಾಪ್ಟರ್ ಶಕ್ತಿಶಾಲಿ 30 ಎಂಎಂ ಚೈನ್ ಗನ್, ನಿಖರ ದಾಳಿಗಾಗಿ ಲೇಸರ್ ಮತ್ತು ರಾಡಾರ್-ನಿರ್ದೇಶಿತ ಹೆಲ್‌ಫೈರ್ ಕ್ಷಿಪಣಿಗಳು ಮತ್ತು ಬಹು ನೆಲದ ಗುರಿಗಳನ್ನು ಗುರಿಯಾಗಿಸುವ ಸಾಮರ್ಥ್ಯವಿರುವ ರಾಕೆಟ್ ಪಾಡ್‌ಗಳಿಂದ ಶಸ್ತ್ರಸಜ್ಜಿತವಾಗಿದೆ. ಇದು ರೋಟರ್ ಮೇಲೆ ಜೋಡಿಸಲಾದ ಲಾಂಗ್‌ಬೋ ರಾಡಾರ್ ಅನ್ನು ಸಹ ಒಳಗೊಂಡಿದೆ.