Ahmedabad Plane Crash: ಹಾಸ್ಟೆಲ್ನಲ್ಲಿ ಊಟ ಮಾಡುತ್ತಿದ್ದವರ ಮೇಲೆ ಯಮನಂತೆ ಬಂದ ವಿಮಾನ; ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು
ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ (ಜೂನ್ 12) ಮಧ್ಯಾಹ್ನ (Ahmedabad Plane Crash) ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಫೈಟ್ನಲ್ಲಿದ್ದ 242 ರ ಪೈಕಿ 241 ಜನರು ಮೃತಪಟ್ಟಿದ್ದಾರೆ.


ಗಾಂಧೀನಗರ: ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ (ಜೂನ್ 12) ಮಧ್ಯಾಹ್ನ (Ahmedabad Plane Crash) ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಫೈಟ್ನಲ್ಲಿದ್ದ 242 ರ ಪೈಕಿ 241 ಜನರು ಮೃತಪಟ್ಟಿದ್ದಾರೆ. ವಿಮಾನ ವೈದ್ಯಕೀಯ ಹಾಸ್ಟೆಲ್ ಮೇಲೆ ಬಿದ್ದಿದೆ. ಪರಿಣಾಮ 5 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 230 ಪ್ರಯಾಣಿಕರು, 10 ಸಿಬ್ಬಂದಿ ಮತ್ತು 2 ಪೈಲಟ್ಗಳಿದ್ದ 242 ಜನರಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ತಕ್ಷಣ ಅಪಘಾತಕ್ಕೀಡಾಯಿತು .
ಲಂಡನ್ಗೆ ತೆರಳುತ್ತಿದ್ದ ವಿಮಾನವು ಮಧ್ಯಾಹ್ನ 13:38 ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. 825 ಅಡಿಗಳಷ್ಟು ಕಡಿಮೆ ಎತ್ತರದಲ್ಲಿ ಲಿಫ್ಟ್ ಪಡೆಯುವಲ್ಲಿ ವಿಫಲವಾಗಿದೆ. ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದರು. ಅಪಘಾತದ ಬಳಿಕ ಅಲ್ಲಿ ಬಿದ್ದಿರುವ ಅನ್ನದ ತಟ್ಟೆಗಳು ಅಪಘಾತದ ಭೀಕರತೆಯನ್ನು ಬಿಚ್ಚಿಟ್ಟಿವೆ.
ಅಹಮದಾಬಾದ್ನಲ್ಲಿ AI ವಿಮಾನ ಅಪಘಾತಕ್ಕೀಡಾದ ಸುದ್ದಿಯಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ. BJMC, ಹಾಸ್ಟೆಲ್ನಲ್ಲಿ ವಿಮಾನವು ನಜ್ಜುಗುಜ್ಜಾಗಿದೆ ಮತ್ತು ಅನೇಕ MBBS ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದ ನಂತರ ಸುದ್ದಿಗಳು ಇನ್ನಷ್ಟು ಭಯಾನಕವಾಗಿವೆ!!!! ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಯಾವುದೇ ಸಹಾಯಕ್ಕೂ ಸಿದ್ಧರಿದ್ದೇವೆ!" FAIMA ವೈದ್ಯರ ಸಂಘವು X (ಹಿಂದೆ ಟ್ವಿಟರ್) ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Ahmedabad Plane Crash: ಗುಜರಾತ್ನಲ್ಲಿ ಏರ್ ಇಂಡಿಯಾ ವಿಮಾನ ಪತನ; 242 ಪ್ರಯಾಣಿಕರ ಪೈಕಿ ಓರ್ವ ಪವಾಡ ಸದೃಶ ಪಾರು
ಸುಮಾರು 40 ವೈದ್ಯರು ಗಾಯಗೊಂಡಿದ್ದು, ಕನಿಷ್ಠ ಒಬ್ಬರ ಸ್ಥಿತಿ ಗಂಭೀರವಾಗಿದೆ. ಎನ್ಡಿಟಿವಿ ಜೊತೆ ಮಾತನಾಡಿದ ಬಿಜೆ ವೈದ್ಯಕೀಯ ಕಾಲೇಜಿನ ಪ್ರತ್ಯಕ್ಷದರ್ಶಿ ಡಾ. ಶ್ಯಾಮ್ ಗೋವಿಂದ್, "ನಾನು ಮತ್ತು ನನ್ನ ಕಿರಿಯ ವೈದ್ಯರು ಗಾಯಗೊಂಡಿದ್ದೇವೆ. 30-40 ಪದವಿಪೂರ್ವ ವೈದ್ಯರು ಕೂಡ ಗಾಯಗೊಂಡಿದ್ದಾರೆ ಮತ್ತು ಒಬ್ಬರಿಂದ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ" ಎಂದು ಹೇಳಿದರು.