Narendra Modi: ಅವರು ನಮ್ಮ ನಾಯಕನಲ್ಲದಿದ್ದರೆ, ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲೂ ಸಾಧ್ಯವಿಲ್ಲ: 'ಮೋದಿ ವರ್ಚಸ್ಸನ್ನು ಹೊಗಳಿದ ಸಂಸದ
ಸತತವಾಗಿ 2o14 ರಿಂದ ಇಡೀ ದೇಶದಲ್ಲಿ ಬಿಜೆಪಿ ಪಕ್ಷ ಗೆಲುವನ್ನು ಸಾಧಿಸುತ್ತಿರಲು ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ. ಅವರು ಇಲ್ಲದಿದ್ದರೆ ಪಕ್ಷ ಇಂದು ಇಷ್ಟೊಂದು ಬಲಿಷ್ಠ ಸ್ಥಾನದಲ್ಲಿರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ


ನವದೆಹಲಿ: ಸತತವಾಗಿ 2o14 ರಿಂದ ಇಡೀ ದೇಶದಲ್ಲಿ ಬಿಜೆಪಿ ಪಕ್ಷ ಗೆಲುವನ್ನು ಸಾಧಿಸುತ್ತಿರಲು ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi) ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey) ಹೇಳಿದ್ದಾರೆ. ಅವರು ಇಲ್ಲದಿದ್ದರೆ ಪಕ್ಷ ಇಂದು ಇಷ್ಟೊಂದು ಬಲಿಷ್ಠ ಸ್ಥಾನದಲ್ಲಿರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿಯವರ ವರ್ಚಸ್ಸು ಮತ್ತು ರಾಜಕೀಯ ಆಕರ್ಷಣೆಯು ಹೆಚ್ಚಿನ ಸಂಖ್ಯೆಯ ಮತದಾರರನ್ನು ಪ್ರಭಾವಿತಗೊಳಿಸಿತು, ಇಲ್ಲದಿದ್ದರೆ ಅವರು ಬಿಜೆಪಿಗೆ ಮತ ಹಾಕುತ್ತಿರಲಿಲ್ಲ ಎಂದು ದುಬೆ ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿಯವರ ನಾಯಕತ್ವದ ಪ್ರಭಾವವನ್ನು ಎತ್ತಿ ತೋರಿಸಿದ ಜಾರ್ಖಂಡ್‌ನ ಗೊಡ್ಡಾದ ಬಿಜೆಪಿ ಸಂಸದ ದುಬೆ, , ವಿವಿಧ ಚುನಾವಣೆಗಳಲ್ಲಿ ನಿರ್ಣಾಯಕ ಯಶಸ್ಸನ್ನು ಸಾಧಿಸಲು ಪಕ್ಷವು ಕೆಲವು ಪ್ರಭಾವಿ ನಾಯಕರ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಹೇಳಿದ್ದಾರೆ. "ಇಂದು, ಮೋದಿಜಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಅವರಿಲ್ಲದಿದ್ದರೆ, ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲೂ ಸಾಧ್ಯವಿಲ್ಲ" ಎಂದು ನಿಶಿಕಾಂತ್ ದುಬೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 2024 ರಲ್ಲಿ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿತು ಮತ್ತು ಏಕಾಂಗಿಯಾಗಿ 240 ಸ್ಥಾನಗಳನ್ನು ಗೆದ್ದಿತು. 2014 ಮತ್ತು 2019 ರಲ್ಲಿ ಕ್ರಮವಾಗಿ 282 ಮತ್ತು 303 ಲೋಕಸಭಾ ಸ್ಥಾನಗಳನ್ನು ಗೆದ್ದ ಪಕ್ಷವು ತನ್ನದೇ ಆದ ಸ್ಪಷ್ಟ ಬಹುಮತದೊಂದಿಗೆ ವಿಜಯ ಸಾಧಿಸಿತು.
ಮೋದಿಜಿ ಬಂದಾಗ, ಬಿಜೆಪಿಗೆ ಮತ ಹಾಕುವವರ ಸಂಖ್ಯೆ ಹೆಚ್ಚಾಯಿತು. ಬಡವರು, ಮಧ್ಯಮ ವರ್ಗದ ಜನರು ಮೋದಿಜಿ ಮೇಲೆ ನಂಬಿಕೆ ಇಟ್ಟರು. ಕೆಲವರಿಗೆ ಇದು ಇಷ್ಟವಾಗಬಹುದು, ಕೆಲವರಿಗೆ ಇಷ್ಟವಾಗದಿರಬಹುದು, ಆದರೆ ಇದು ವಾಸ್ತವ" ಎಂದು ದುಬೆ ಹೇಳಿದ್ದಾರೆ. ಸದನದಲ್ಲಿ ತಮ್ಮ ತೀಕ್ಷ್ಣ ಮತ್ತು ನೇರ ಭಾಷಣಗಳಿಗೆ ಹೆಸರುವಾಸಿಯಾದ ಫೈರ್‌ಬ್ರ್ಯಾಂಡ್ ಸಂಸದ, ಮೋದಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ (2029) ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸ್ಪರ್ಧಿಸುವುದು ಬಿಜೆಪಿಗೆ ಕಡ್ಡಾಯ ಹಾಗೂ ಅನಿವಾರ್ಯ ಎಂದು ಅವರು ಹೇಳಿದರು. ಪಕ್ಷದ ಕಾರ್ಯಕರ್ತನಾಗಿ, ನಮಗೆ ಮೋದಿಜಿಯ ನಾಯಕತ್ವ ಬೇಕು ಎಂದು ನಾನು ನಂಬುತ್ತೇನೆ" ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: PM Modhi: ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕ 27 ಅಂತಾರಾಷ್ಟ್ರೀಯ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
75 ವರ್ಷ ವಯಸ್ಸಿನ ನಂತರ ಬಿಜೆಪಿ ನಾಯಕರು ನಿವೃತ್ತರಾಗುತ್ತಾರೆ ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಗಳನ್ನು ನಿಶಿಕಾಂತ್ ದುಬೆ ತಳ್ಳಿಹಾಕಿದರು ಮತ್ತು ಪ್ರಧಾನಿ ಮೋದಿ ಹಾಗೆ ಮಾಡುವ ಅಗತ್ಯವಿಲ್ಲ ಎಂದು ದುಬೆ ಅಭಿಪ್ರಾಯಪಟ್ಟಿದ್ದಾರೆ.