ಭಾರತೀಯ ಸೇನೆ ಮೇಲೆ ಕೇಂದ್ರ ಸರ್ಕಾರದಿಂದ ಒತ್ತಡ; ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ವಿವಾದಾತ್ಮಕ ಹೇಳಿಕೆ
Renuka Chowdhury: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಭಾರತೀಯ ಸೇನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಒತ್ತಡದಲ್ಲಿ ಭಾರತೀಯ ಸೇನೆ ಇದೆ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸೇನೆಯ ತ್ಯಾಗ ಮತ್ತು ನಿಷ್ಠೆಯನ್ನು ರಾಜಕೀಯಕ್ಕೆ ತರುವ ಪ್ರಯತ್ನ ಇದುಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ರೇಣುಕಾ ಚೌಧರಿ (ಸಂಗ್ರಹ ಚಿತ್ರ) -
ನವದೆಹಲಿ, ಡಿ. 2: ಭಾರತೀಯ ಸೇನೆಯ (Indian Army) ಕೇಂದ್ರ ಸರ್ಕಾರದ ಪರವಾಗಿ ಮಾತನಾಡುವಂತೆ ಒತ್ತಡ ಹೇರಲಾಗಿದೆ ಎಂದು ಹೇಳಿ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ (Congress MP Renuka Chowdhury) ವಿವಾದಕ್ಕೆ ಗುರಿಯಾಗಿದ್ದಾರೆ. ಇದನ್ನು ಅತ್ಯಂತ ಭಯಾನಕ ಪರಿಸ್ಥಿತಿ ಎಂದು ಕರೆದ ಚೌಧರಿ, ಭಾರತೀಯ ಜನತಾ ಪಕ್ಷದ (BJP) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಬಿಜೆಪಿಗೆ ಕೋಪ ತರಿಸಿದೆ. ಸೇನೆಯ ತ್ಯಾಗ ಮತ್ತು ನಿಷ್ಠೆಯನ್ನು ರಾಜಕೀಯಕ್ಕೆ ತರುವ ಪ್ರಯತ್ನ ಇದು ಎಂದು ಆಡಳಿತಾರೂಢ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಹೇಳಿಕೆಯು ಮಾತಿನ ಸಮರಕ್ಕೆ ಕಾರಣವಾಗಿದೆ.
ಅತ್ಯಂತ ಭಯಾನಕ ಸನ್ನಿವೇಶವೆಂದರೆ, ಮೊದಲ ಬಾರಿಗೆ ಸೇನಾ ನಾಯಕರು ಹೊರಬಂದು ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಮಾತನಾಡಲು ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ನಾಲಗೆ ಹರಿಯಬಿಟ್ಟಿದ್ದಾರೆ.
"ಭಾರತೀಯ ಸೇನೆಯು ಮೇಲ್ಜಾತಿಯವರ ಕೈಯಲ್ಲಿದೆ"; ಮತ್ತೆ ಸಶಸ್ತ್ರ ಪಡೆ ಕುರಿತು ನಾಲಿಗೆ ಹರಿಬಿಟ್ಟ ರಾಹುಲ್
ಬಿಜೆಪಿ ಆಕ್ರೋಶ
ರೇಣುಕಾ ಚೌಧರಿ ಅವರ ಆಘಾತಕಾರಿ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ನಾಯಕ ಕೇಶವನ್, ಇದು ಅತ್ಯಂತ ಖಂಡನೀಯ ಹೇಳಿಕೆ ಎಂದು ಹೇಳಿದರು. ಜತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸೇನಾ ವಿರೋಧಿ (ಮಿಲಿಟರಿ ವಿರೋಧಿ) ಮನಸ್ಥಿತಿಯನ್ನು ಬಿಜೆಪಿ ವಕ್ತಾರರು ಟೀಕಿಸಿದರು.
ರೇಣುಕಾ ಚೌಧರಿ ಅವರ ವಿವಾದಾತ್ಮಕ ಹೇಳಿಕೆ:
#WATCH | Delhi | Congress MP Renuka Chowdhury says, "I am an Armyman's daughter. Many people from my family have served in the Army... I never said that someone pressurised the Army Officers. I am saying that Army should never come before the media. They are our pride. They… pic.twitter.com/IvfiVPrRau
— ANI (@ANI) December 2, 2025
ರಾಹುಲ್ ಗಾಂಧಿ ಮತ್ತು ಅವರ ಸೇನಾ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ ನಾಯಕರು ನಮ್ಮ ಸಶಸ್ತ್ರ ಪಡೆಗಳನ್ನು ಹೀನಾಯವಾಗಿ ಮಾತನಾಡಿದ್ದಾರೆ. ಈ ಹಿಂದೆ, ಕಾಂಗ್ರೆಸ್ ನಾಯಕರು, ಗೂಂಡಾನಂತಹ ಅವಹೇಳನಕಾರಿ ಪದಗಳಿಂದ ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನು ಅವಮಾನಿಸಿದ್ದಾರೆ ಎಂದು ಕೇಶವನ್ ಹೇಳಿದರು.
ಕಾಂಗ್ರೆಸ್‌ಗೆ ದೇಶಭಕ್ತಿಯಿಲ್ಲ ಎಂದು ಬಿಜೆಪಿ ವಕ್ತಾರರು ಹೇಳಿದರು. ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ವಾಯುದಾಳಿ ಮತ್ತು ಆಪರೇಷನ್ ಸಿಂದೂರ್‌ನಂತಹ ವಿಶ್ವಾಸಾರ್ಹತೆಯನ್ನು ಪದೇ ಪದೆ ಪ್ರಶ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಪಿತಾಯಿ ಎಂಬ ಪದವನ್ನು ಬಳಸಿಕೊಂಡು ಸೇನೆಯನ್ನು ಅವಮಾನಿಸಿದ್ದಕ್ಕಾಗಿ ನ್ಯಾಯಾಲಯದಿಂದ ಛೀಮಾರಿ ಹಾಕಲ್ಪಟ್ಟರು ಎಂದು ಅವರು ಹೇಳಿದರು.
ರಷ್ಯಾದ ಸೈನ್ಯಕ್ಕೆ ಸೇರದಂತೆ ಭಾರತೀಯರಿಗೆ ಕೇಂದ್ರದ ಎಚ್ಚರಿಕೆ
ಕೇಶವನ್, ಸಶಸ್ತ್ರ ಪಡೆಗಳಿಗೆ ಜನರು ಮತ್ತು ರಾಷ್ಟ್ರೀಯ ಹಿತಾಸಕ್ತಿ ಮೊದಲು ಬರುತ್ತದೆ ಎಂದು ಹೇಳಿದರು. ಆದ್ದರಿಂದ, ಸೇನಾ ಸಿಬ್ಬಂದಿಯ ನಿಸ್ವಾರ್ಥ ತ್ಯಾಗ ಮತ್ತು ಶೌರ್ಯವನ್ನು ರಾಜಕೀಯಗೊಳಿಸಿದ ಹೇಳಿಕೆಗಳಿಗಾಗಿ ಚೌಧರಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕತ್ವಕ್ಕೆ ನಾಚಿಕೆ ಇದ್ದರೆ ಚೌಧರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಶವನ್ ಹೇಳಿದರು. ಆದರೆ ರಾಹುಲ್ ಗಾಂಧಿ ಕೂಡ ಚೌಧರಿಯಂತಹದ್ದೇ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ನೀವು ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಪ್ರವಾಹಪೀಡಿತ ಶ್ರೀಲಂಕಾಗೆ ಭಾರತದಿಂದ ನೆರವಿನ ಹಸ್ತ
ದ್ವಿತಾ ಚಂಡಮಾರುತಕ್ಕೆ ನೆರೆಯ ರಾಷ್ಟ್ರ ಶ್ರೀಲಂಕಾ ಅಕ್ಷರಶಃ ತತ್ತರಿಸಿ ಹೋಗಿದೆ. ಶ್ರೀಲಂಕಾ ದಶಕಗಳಲ್ಲಿಯೇ ಅತ್ಯಂತ ಭೀಕರವಾದ ಪ್ರವಾಹ ವಿಪತ್ತನ್ನು ಎದುರಿಸುತ್ತಿದೆ. ಶ್ರೀಲಂಕಾದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಸಹಾಯಹಸ್ತ ಚಾಚಿದೆ. ನೌಕಾಸೇನೆಯ ಮುಖಾಂತರ ಶ್ರೀಲಂಕಾಗೆ ಬೇಕಾದ ಧವಸ ಧಾನ್ಯಗಳು ಹಾಗೂ ಅಗತ್ಯ ವಸ್ತುಗಳನ್ನು ರವಾನಿಸಿದೆ. ಭಾರತ ಹಾಗೂ ಭಾರತೀಯ ಸೈನಿಕರ ಈ ಕಾರ್ಯಕ್ಕೆ ಶ್ರೀಲಂಕಾ ಜನತೆ ಕೃತಜ್ಞತೆ ಸಲ್ಲಿಸಿದೆ.