About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಯಂಗ್‌ ಇಂಡಿಯಾದಿಂದ ನನಗೆ ಆದಾಯವೇ ಇಲ್ಲ: ಸೋನಿಯಾ

ದೆಹಲಿ: ತಮ್ಮ ನೇತೃತ್ವದ ಯಂಗ್‌ ಇಂಡಿಯಾ ಸಂಸ್ಥೆಗೆ ಯಾವುದೇ ಆದಾಯ ಬರದ ಕಾರಣ ಯಾವುದೇ ತೆರಿಗೆ ಪಾವತಿ ಮಾಡುವ ಪ್ರಮೇಯ ತಮಗಿಲ್ಲ ಎಂದು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ದೆಹಲಿ ಹೈಕೋರ್ಟ್‌ನಲ್ಲಿ ಹೇಳಿದ್ದಾರೆ.

ಅಸೋಸಿಯೇಟೆಡ್‌ ಜರ್ನಲ್‌ ಲಿ(ಎಜೆಎಲ್‌)ಅನ್ನು 50 ಲಕ್ಷ ರು ತೆತ್ತು 2010ರಲ್ಲಿ ಖರೀದಿ ಮಾಡಿದ್ದ ಯಂಗ್‌ ಇಂಡಿಯಾ, ತನ್ಮೂಲಕ ನ್ಯಾಷನಲ್ ಹೆರಾಲ್ಡ್‌ ದೈನಿಕವನ್ನು ಖರೀದಿ ಮಾಡಿ, ಎಜೆಎಲ್‌ನ 90 ಕೋಟಿ ರು ಮೌಲ್ಯದ ಸಾಲವನ್ನೂ ತನ್ನ ಮೇಲೆ ತೆಗೆದುಕೊಂಡಿತ್ತು.

ಈ ಕುರಿತಂತೆ ಸೋನಿಯಾ ಗಾಂಧಿ ಪರವಾಗಿ ಹಿರಿಯ ವಕೀಲ ಪಿ ಚಿದಂಬರಮ್‌ ವಾದ ಮಾಡುತ್ತಿದ್ದಾರೆ. ಯಂಗ್‌ ಇಂಡಿಯಾ ಆದಾಯವು ತೆರಿಗೆ ವ್ಯಾಪ್ತಿಯೊಳಗೆ ಬಂದಿದ್ದರೂ ಸಹ ಇದು ಶೇರುದಾರರಾದ ಕಾಂಗ್ರೆಸ್‌ ಅಧ್ಯಕ್ಷರ ಖಾತೆಗೆ ಸೇರುತ್ತಿರಲಿಲ್ಲ ಎಂದು ಚಿದಂಬರಮ್‌ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close