ವಿಶ್ವವಾಣಿ

ಸಿಧುಗೆ ಜೈಲು ಶಿಕ್ಷೆ? ರಸ್ತೆ ಗಲಭೆ ಪ್ರಕರಣ ಮತ್ತೊಮ್ಮೆ ಕೈಗೆತ್ತಿಕೊಂಡ ಸುಪ್ರೀಂ

ಮಾಜಿ ಕ್ರಿಕೆಟಿಗ ಹಾಗು ಕಾಂಗ್ರೆಸ್‌ ನಾಯಕ  ನವಜೋತ್‌ ಸಿಂಗ್‌ ಸಿಧುಗೆ ಗ್ರಹಚಾರ ವಕ್ಕರಿಸಿದಂತೆ ಕಾಣುತ್ತಿದೆ.

1988ರ ರಸ್ತೆ ಗಲಭೆ ಪ್ರಕರಣವನ್ನು ಮರಳಿ ತೆಗೆಯಲು ಸುಪ್ರೀಂ ಕೋರ್ಟ್ ಇಂದು ತೀರ್ಮಾನಿಸಿದೆ. ನ್ಯಾಯಾಧೀಶರಾದ ಎ ಎಂ ಖಾನ್ವಿಲ್ಕರ್‌ ಹಾಗು ಸಂಜಯ್‌ ಕಿಶನ್‌ ಕೌಲ್‌ ಇದ್ದ ಪೀಠ ಈ ತೀರ್ಮಾನಕ್ಕೆ ಬಂದಿದೆ.

ಇದೇ ಸಂಬಂಧದ ವಿಚಾರಣೆಯಲ್ಲಿ, ಗಲಭೆಯಲ್ಲಿ ಸಿಧು ಹಲ್ಲೆ ನಡೆಸಿದ್ದು ಧೃಡಪಟ್ಟಿತ್ತು. ಬಳಿಕ, “ಕೊಲೆಗೆ ಕಾರಣವಾಗದ ಮಟ್ಟದ ಕೊಲೆ ಯತ್ನ”ದ ಕಾರಣ ಸಿಧುಗೆ ಜೈಲು ಶಿಕ್ಷೆ ನೀಡುವುದರಿಂದ ನ್ಯಾಯಾಲಯ ಹಿಂದೆ ಸರಿದಿತ್ತು.

1988ರ ಡಿಸೆಂಬರ್‌ 27ರಂದು ಪಂಜಾಬ್‌ನ ಪಟಿಯಾಲಾದಲ್ಲಿ ನಡೆದಿದ್ದ ಗಲಭೆಯಲ್ಲಿ, 65 ವರ್ಷ ವಯಸ್ಸಿನ ಗುರ್ನಾಮ್‌ ಸಿಂಗ್‌ ಎಂಬುವವರ ಮೇಲೆ ಸಿಧು ಹಲ್ಲೆ ಮಾಡಿದ್ದ ಆರೋಪವಿದೆ. ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳ ಕೊರತೆ ಕಾರಣ ಸೆಪ್ಟೆಂಬರ್‌ 22, 1999ರಲ್ಲಿ ಪಟಿಯಾಲಾ ಸತ್ರ ನ್ಯಾಯಾಲಯವು ಸಿಧು ಹಾಗು ಅವರ ಮಿತ್ರ ರೂಪಿಂದರ್‌ ಸಿಂಗ್‌ ಸಂಧುರನ್ನು ಖುಲಾಸೆಗೊಳಿಸಿತ್ತು.

ಆದರೆ,  ಪ್ರಕರಣದಲ್ಲಿ ಸಿಧು ಕೊಲೆ ಯತ್ನ ಮಾಡಿದ್ದಾರೆ ಎಂದು ಸಂಬಂಧಿತ ದಂಡಸಂಹಿತೆಯಡಿ ಬಳಿಕ ಪಂಜಾಬ್‌ ಹಾಗು ಹರಿಯಾಣಾ ಹೈಕೋರ್ಟ್‌ ಸಿಧುರನ್ನು ತಪ್ಪಿತಸ್ಥ ಎಂದು ತೀರ್ಪಿತ್ತಿದ್ದವು.

ಬಳಿಕ ಸಿಧುಗೆ ನೀಡಿರುವ ಮೂರು ವರ್ಷಗಳ ಶಿಕ್ಷೆ ಕಡಿಮೆಯಾಯಿತೆಂದು ಸಂತ್ರಸ್ತರ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೊಗಿತ್ತು. ಆದರೆ ಸಿಧು ಶಿಕ್ಷೆಯನ್ನು ಮೂರು ವರ್ಷಗಳಿಗೆ ಸೀಮಿತಗೊಳಿಸಬೇಕೆಂದು ಪಂಜಾಬ್‌ ಸರಕಾರ ಬಳಿಕ ಕೋರಿಕೊಂಡಿತ್ತು.