About Us Advertise with us Be a Reporter E-Paper

ಪ್ರಚಲಿತವಿದೇಶ

ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ನವಾಝ್ ಶರೀಫ್ ನಿರ್ಧಾರ

ಇಸ್ಲಮಾಬಾದ್: ಜೈಲು ಶಿಕ್ಷೆಗೆ ಒಳಗಾಗಿರುವ ಪಾಕ್ ಮಾಜಿ ಪ್ರಧಾನಿ ನವಾಝ್ ಶರೀಫ್ ವಿರುದ್ಧ ನೀಡಿದ ತೀರ್ಪನ್ನು ಪುನರ್‌ಪರಿಶೀಲನೆಗೆ ಒಳಪಡಿಸಬೇಕು ಎಂದು ಸುಪ್ರಿ ಕೋರ್ಟ್‌‌ಗೆ ಮನವಿ ಮಾಡಲಾಗುವುದು ಎಂದು ನವಾಝ್ ಶರೀಫ್ ಪರ ವಕೀಲರು ತಿಳಿಸಿದ್ದಾರೆ.

ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ನೀಡಿದ ತೀರ್ಪನ್ನು ಪರಿಶೀಲನೆ ನಡೆಸಬೇಕು ಎಂದು ಸುಪ್ರಿಂ ಕೋರ್ಟ್‌‌ಗೆ ಮನವಿ ಸಲ್ಲಿಸಲಾಗುವುದು ಎಂದು ನವಾಖ್ ಶರೀಫ್ ಪರ ವಕೀಲ ಖ್ವಾಜಾ ಹಾರಿಸ್ ಹೇಳಿದ್ದಾರೆ ಎಂದು ಪಾಕ್ ಮೂಲದ ವಕ್ತ್ ನ್ಯೂಸ್ ವರದಿ ಮಾಡಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಪನಾಮ ಪೇಪರ್ಸ್‌ ಹಗರಣದಲ್ಲಿ ಭಾಗಿಯಾಗಿದ್ದ ನವಾಝ್   ಶರೀಫ್ ಹಾಗೂ ಪುತ್ರಿ ಮರಿಯಂಗೆ  ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿತ್ತು.

 

ಆರೊಪ ಸಾಬೀತಾದ ಬಳಿಕ ಒಲಂಡನ್‌ನಲ್ಲಿ ನೆಲೆಸಿದ್ದ ನವಾಝ್ ಶರೀಫ್ ಹಾಗೂ ಪುತ್ರಿ ನಿನ್ನೆ ಅಬುದಾಬಿ ಮಾರ್ಗವಾಗಿ ಲಾಹೋರ್‌ಗೆ ಬಂದಿಳಿದಿದ್ದರು. ಅಲ್ಲಿಯೇ ಅವರನ್ನು ಬಂಧಿಸಿ ರಾವಲ್ಪಿಂಡಿ ಜೈಲಿನಲ್ಲಿಡಲಾಗಿತ್ತು. ಇದಾದ ಒಂದು ದಿನದ ಬಳಿಕ ನವಾಝ್ ಶರೀಫ್ ಪರ ಲಾಯರ್‌ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಜೈಲಿನಲ್ಲಿ ಬಿ ದರ್ಜೆ ಸವಲತ್ತನ್ನು ಇವರಿಬ್ಬರಿಗೆ ನೀಡಲಾಗಿದ್ದು, ಜೈಲಿನ ಸುತ್ತಲೂ ಬಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close