ಲಂಡನ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಪತ್ನಿ ಕುಲ್ಸೋಮ್ ನವಾಜ್ ಅವರು ಲಂಡನ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ನವಾಜ್ ಷರೀಫ್ ಹಾಗೂ ಪುತ್ರಿ ಪೆರೋಲ್ ಮೇಲೆ ಹೊರಬಂದಿದ್ದಾರೆ. ತಮ್ಮ ಪತ್ನಿಕುಲ್ಸೋಮ್ ನವಾಜ್ಗೆ ಷರೀಫ್ ವಿದಾಯ ಹೇಳುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ತೀವ್ರ ಅನಾರೋಗ್ಯದಿಂದಾಗಿ ಲಂಡನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪತ್ನಿ ಕುಲ್ಸೋಮ್ಗೆ ನವಾಜ್ ಷರೀಫ್ ಭಾವನಾತ್ಮಕ ವಿದಾಯ ಹೇಳಿದ್ದಾರೆ. ಉರ್ದುವಿನಲ್ಲಿ ದೇವರು ನಿನಗೆ ಶಕ್ತಿ ಕೊಡಲಿ ಎಂದಿದ್ದಾರೆ. ಅಲ್ಲದೆ ಕಣ್ಣುಗಳನ್ನು ತೆರೆ ಎಂದು ಪತ್ನಿಗೆ ಕೇಳಿಕೊಂಡಿದ್ದಾರೆ. ಷರೀಫ ಮಾತು ಕೇಳಿಸಿಕೊಂಡ ಕುಲ್ಸೊಮ್ ಕಷ್ಟಪಟ್ಟು ನಿಧಾನಕ್ಕೆ 5 ಸೆಕಂಡ್ಗಳ ಕಾಲ ಕಣ್ಣು ತೆರೆದರು.
ಇನ್ನು ಗಂಟಲು ಕ್ಯಾನ್ಸರ್ನಿಂದ ಬಳಲುತ್ತಿದ್ದ ಕುಲ್ಸೋಮ್ ನವಾಜ್ ಮಂಗಳವಾರ ತಡರಾತ್ರಿ ಇಹಲೋಕ ತ್ಯಜಿಸಿದರು. ಅವೆನ್ಫೀಲ್ಡ್ ರೆಫರೆನ್ಸ್ ಪ್ರಕರಣದಡಿಯಲ್ಲಿ ನವಾಜ್ ಷರೀಫ್ ಅವರಿಗೆ ಪಾಕಿಸ್ತಾನದ ನ್ಯಾಯಾಲಯ 10 ವರ್ಷಗಳ ಶಿಕ್ಷೆ ವಿಧಿಸಿದೆ. ಮಗಳು ಮರ್ಯಾಮ್ಗೆ ಕೂಡ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇವರಿಬ್ಬರು ರಾವಲ್ಪಿಂಡಿ ಜೈಲಿನಲ್ಲಿ ಬಂಧನದಲ್ಲಿರಿಸಲಾಗಿದೆ.