About Us Advertise with us Be a Reporter E-Paper

ವಿದೇಶ
Trending

ನವಾಝ್‌ ಶರೀಫ್‌, ಪುತ್ರಿಗೆ ಬಿ ಕ್ಲಾಸ್‌ ಬಂದೀಖಾನೆ ವಾಸ್ತವ್ಯ

ಸಾಮಾಜಿಕ ಸ್ಥಿತಿಗತಿ ಆಧಾರದ ಮೇಲೆ ಶಿಕ್ಷೆಯಲ್ಲಿ ಅಲ್ಪ ವಿನಾಯಿತಿ

ಇಸ್ಲಾಮಾಬಾದ್‌: ಭ್ರಷ್ಟಾಚಾರ ಆಪಾದನೆ ಮೇಲೆ ಬಂಧಿತರಾಗಿರುವ ಪಾಕ್‌ ಮಾಜಿ ಪ್ರಧಾನಿ ನವಾಝ್‌ ಶರೀಫ್‌ ಹಾಗು ಅವರ ಪುತ್ರಿಯ ಸಾಮಾಜಿಕ ಸ್ಥಾನಮಾನ ಪರಿಗಣಿಸಿ ಜೈಲಿನಲ್ಲಿ ಬಿ ಕ್ಲಾಸ್‌ ಮಟ್ಟದ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿದೆ.

ರಾವಲ್ಪಿಂಡಿಯ ಅಡಿಯಯಾಲಾ ಜೈಲಿನಲ್ಲಿ ಶರೀಫ್‌ ಹಾಗು ಅವರ ಪುತ್ರಿಯನ್ನು ಇರಿಸಲಾಗಿದೆ. ಎ ಹಾಗು ಬಿ ಕ್ಲಾಸ್‌ನ ಖೈದಿಗಳಿಗೆ ಜೈಲಿನಲ್ಲಿ ಕಠಿಣ ಕೆಲಸಗಳನ್ನು ನೀಡುವುದಿಲ್ಲ, ಬದಲಾಗಿ ಇತರ ಖೈದಿಗಳನ್ನು ಶಿಕ್ಷಣ ನೀಡುವ ಜವಾಬ್ದಾರಿ ನೀಡಲಾಗುತ್ತದೆ.

ಮಂಚ, ಕುರ್ಚಿ, ಶೌಚ ವಸ್ತುಗಳು ಹಾಗು ಖೈದಿಗಳ ಬಳಕೆಯ ಇತರ ವಸ್ತುಗಳನ್ನು ನೀಡಲಾಗುತ್ತದೆ. ಜೈಲು ಇಲಾಖೆಯಿಂದ ಅನುಮತಿ ಪಡೆದು, ಈ ಸವಲತ್ತುಗಳಿಗೆ ಎ ಹಾಗು ಬಿ ಕ್ಲಾಸ್‌ ಖೈದಿಗಳು ತಮ್ಮದೇ ಸ್ವಂತ ಖರ್ಚಿನಲ್ಲಿ ಪಾವತಿ ಮಾಡಬೇಕಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ ಹಿನ್ನಲೆಯಲ್ಲಿ ಶರೀಫ್‌ಗೆ ಹತ್ತು ವರ್ಷ ಹಾಗು ಮರಿಯಮ್‌ಗೆ ಏಳು ವರ್ಷ ಜೈಲು ಶಿಕ್ಷೆಯನ್ನು ಪಾಕ್‌ ನ್ಯಾಯಾಲಯ ವಿಧಿಸಿತ್ತು. ಶಿಕ್ಷೆ ಅನುಭವಿಸಲು ಅಪ್ಪ-ಮಗಳು ಲಂಡನ್‌ನಿಂದ ಲಾಹೋರ್‌ಗೆ ಶುಕ್ರವಾರ ಆಗಮಿಸಿದ್ದರು.

ಆದಾದಯ ಮೀರಿದ ಆಸ್ತಿಯನ್ನು ಶರೀಫ್‌ ಹೊಂದಿರುವುದು ಖಾತ್ರಿಯಾದ ಕಾರಣ ಶರೀಫ್‌ಗೆ 800 ಕೋಟಿ ರು ದಂಡ ಹಾಗು ಮರೆಯಮಗೆ 200 ಕೋಟಿ ರ ದಂಡ ವಿಧಿಸಿ ಅವರ ಬಳಿಯಿದ್ದ ಹೆಚ್ಚುವರಿ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲು ಕ್ರಮ ಜಾರಿ ಮಾಡಲಾಗಿದೆ. ಭ್ರಷ್ಟಾಚಾರದ ಸಂಬಂಧ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕಾದ ಕಾರಣ ಶರೀಫ್‌ ಪ್ರಧಾನಿ ಹುದ್ದೆಯಿಂದ 2017ರ ಜುಲೈ 28ರಂದು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು.

Related Articles

Leave a Reply

Your email address will not be published. Required fields are marked *

Language
Close