About Us Advertise with us Be a Reporter E-Paper

Breaking Newsದೇಶ

ವಾಹನಗಳಿಗೆ ಬೆಂಕಿ ಹಚ್ಚಿ ನಕ್ಸಲರ ಅಟ್ಟಹಾಸ

ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಹಲವು ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದಾರೆ.

ದಂತೇವಾಡ: ಛತ್ತೀಸ್‍ಗಢದ ದಂತೇವಾಡದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ತಡರಾತ್ರಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಬಚೇಲಿ ನಗರದಲ್ಲಿ ಸುಮಾರು 2.30ರ ಹೊತ್ತಿಗೆ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದ್ದ ವೇಳೆ ಮಾವೋವಾದಿಗಳು ಈ ದುಷ್ಕೃತ್ಯವೆಸಗಿದ್ದಾರೆ. ಶಸ್ತ್ರಸಜ್ಜಿತರಾಗಿ ಬಂದಿದ್ದ 40ಕ್ಕೂ ಹೆಚ್ಚು ನಕ್ಸಲರು ಟ್ರಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಲಾರಿ ಚಾಲಕರಿಂದ ಮೊಬೈಲ್ ಫೋನ್ ಕಿತ್ತು ವಿಧ್ವಂಸಕ ಕೃತ್ಯ ಎಸಗಿದ್ದಾರೆ.

ಛತ್ತೀಸ್ ಗಢದಲ್ಲಿ ನಕ್ಸಲರು ಕಳೆದ ಒಂದು ವಾರದಿಂದ ಇದು ಮೂರನೇ ಬಾರಿ ಈ ರೀತಿ ಕ್ರೌರ್ಯ ಎಸಗಿದ್ದು,  ಮೊನ್ನೆಯಷ್ಟೇ ಕಮರೂರು ರೈಲ್ವೇ ನಿಲ್ದಾಣ ಬಳಿ ರೈಲ್ವೇ ಟ್ರ್ಯಾಕ್‍ಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ ಎರಡು ಬಸ್‍ಗಳು ಹಾಗೂ ಒಂದು ಟ್ರಕ್‍ಗೆ ಬೆಂಕಿ ಹಚ್ಚಿದ್ದರು.

ಛತ್ತೀಸ್‍ಗಢದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ್ದ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಹಲವು ಮಾವೋವಾದಿಗಳು ಮೃತಪಟ್ಟಿದ್ದರು. ಹೀಗಾಗಿ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close