About Us Advertise with us Be a Reporter E-Paper

ಅಂಕಣಗಳು

ಹೊಲ ಮೇಯುವ ಬೇಲಿಯ ಅವಶ್ಯಕತೆ ಇದೆಯೇ?

ಆಶಯ: ಡಾ .ದಯಾನಂದ ಲಿಂಗೇಗೌಡ, ರೇಡಿಯೊಲೊಜಿಸ್‌ಟ್

ಶ್ಚಿಮ ಬಂಗಾಳದ ಹೆದ್ದಾರಿಗಳಲ್ಲಿ ಸಾಗುತ್ತಿದ್ದರೆ, ಸಾಲು ಬಾಗಿಲುಮುಚ್ಚಿರುವ ಉದ್ದಿಮೆಗಳು ಕಣ್ಣಿಗೆ ಕಾಣುತ್ತವೆ. ಮುಚ್ಚಿರುವ ಕಾರ್ಖಾನೆಗಳ ಮುಂದೆ ಫಲವತ್ತಾಗಿ ಬೆಳೆದಿರುವ ಕಳೆ ಗಿಡಗಳು, ದಶಕಗಳ ಕಮ್ಯುನಿಸ್‌ಟ್ ಆಡಳಿತದಿಂದ ಫಲವನ್ನು ಸಾರಿ ಸಾರಿ ಹೇಳುತ್ತವೆ. ಹೊಡಿ, ಬಡಿ, ಕಡಿ ಸಂಸ್ಕೃತಿ ಬರಿ ಚುನಾವಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದೆಲ್ಲದರ ಪರಿಣಾಮ ವೈದ್ಯಕೀಯ ಕ್ಷೇತ್ರದ ಮೇಲೆಯೂ ಆಗಿದೆ.

ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇದ್ದ ಸಣ್ಣ ಪುಟ್ಟ ಆಸ್ಪತ್ರೆಗಳು ಬಾಗಿಲು ಮುಚ್ಚುತ್ತಿವೆ. ಆಸ್ಪತ್ರೆ ನಡೆಸುತ್ತಿದ್ದ ಮಾಲೀಕ ವೈದ್ಯರುಗಳು, ಮೆಟ್ರೋ ನಗದ ಆಸ್ಪತ್ರೆಗಳನ್ನು ಸೇರಿಕೊಂಡಿದ್ದಾರೆ. ಕೋಲ್ಕತ್ತಾ ನಗರದಿಂದಾಚೆಗೆ, ಉತ್ತಮ ಆಸ್ಪತ್ರೆಗಳು ಅತಿ ವಿರಳ. ಬೇರೆ ರಾಜ್ಯಗಳಲ್ಲಿ ಶೇಕಡಾ 70ಕಿಂತ ಹೆಚ್ಚು ಜನರು ಸರಕಾರಿ ಆಸ್ಪತ್ರೆಗಳಿಂದ ವಿಮುಖವಾಗಿ, ಖಾಸಗಿ ಆಸ್ಪತ್ರೆ ಸೇವೆ ಪಡೆದು ಕೊಳ್ಳುತ್ತಿದ್ದರೆ, ಪಕ್ಷಿಮ ಬೆಂಗಾಲದಲ್ಲಿ ಅತೀ ಹೆಚ್ಚು ಜನರು ಅವಲಂಬಿತವಾಗಿರುವುದು ಸರಕಾರಿ ಆಸ್ಪತ್ರೆಗಳ ಮೇಲೆಯೇ. ಆಗೆಂದು ಸರಕಾರೀ ಆಸ್ಪತ್ರೆಗಳು ಚನ್ನಗಿವೆ ಎಂದು ಅರ್ಥವಲ್ಲ. ಅವರಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಆಯ್ಕೆ ಇಲ್ಲ ಅಷ್ಟೇ.

ಕೋಲ್ಕತ್ತಾ ನಗರದಿಂದ ದಕ್ಷಿಣ ಭಾರತದ ಮೆಟ್ರೋ ಸಂಪರ್ಕಿಸುವ ರೈಲ್ವೆ ಅಥವಾ ವಿಮಾನಗಳಲ್ಲಿ ಪ್ರಯಾಣ ಮಾಡುವಾಗ,ನಿಮಗೆ ಸಾಮಾನ್ಯವಾಗಿ ಚಿಕಿತ್ಸೆಗೆಂದು ಹೋಗುತ್ತಿರುವ ರೋಗಿಗಳು ಸಿಕ್ಕೇ ಸಿಗುತ್ತಾರೆ. ಆಗೆಂದು ನೋಡಿದರೆ ಅಂತಹ ಸೌಲಭ್ಯ ಕೋಲ್ಕತ್ತಾ ನಗರದಲ್ಲಿ ಇಲ್ಲ ಎಂದೇನೂ ಇಲ್ಲ. ಕೋಲ್ಕತ್ತಾ ನಗರದಲ್ಲಿ ಉತ್ತಮ ಆಸ್ಪತ್ರೆಗಳಿವೆ ಮತ್ತು ವೈದ್ಯರಿದ್ದಾರೆ. ಆದರೆ ಬಹಳಷ್ಟು ರೋಗಿಗಳು ,ಇಲ್ಲಿನ ಆಸ್ಪತ್ರೆಗಳ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ.

ಇತ್ತ ಕೋಲ್ಕತ್ತಾ ನಗರದ ವೈದ್ಯರುಗಳು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಒಲವು ತೋರುತ್ತಿದ್ದಾರೆ. ಏಕೆಂದರೆ ಅಲ್ಲಿ ರೋಗಿಗಳ ರಕ್ಷಣೆಗೆ ಸಿಬ್ಬಂದಿಗಳಿದ್ದಾರೆ ಎಂಬುದು ಮುಖ್ಯ ಕಾರಣ. ಒಟ್ಟಿನಲ್ಲಿ ಒಬ್ಬರನೊಬ್ಬರು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.

ಪರಿಸ್ಥಿತಿ ಸುದಾರಿಸಬಹುದಾಗಿದ್ದ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ ಎಂಬುದು ಸಾರ್ವಜನಿಕರ ಅನಿಸಿಕೆ. ಪದೇ ಪದೆ ರೋಗಿಗಳ ಕಡೆಯವರಿಂದ ಆಗುತ್ತಿರುವ ದಾಳಿಗಳನ್ನು ಹತ್ತಿಕ್ಕಲು ಪೊಲೀಸರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಅಸಮಾದಾನ ವೈದ್ಯರಲ್ಲಿ ಸಾಮಾನ್ಯವಾಗಿದೆ. ಈ ಇಮೇಜ್ ನಿಂದ ಹೊರಬರಲು ಪೊಲೀಸರು ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಕಳೆದ ವೈದ್ಯರ ದಿನದಂದು ವೈದ್ಯರುಗಳನ್ನು ಭೇಟಿಮಾಡಿ, ನೀಡಿ , ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು. ಆಸ್ಪತ್ರೆ ಆವರಣಗಳಲ್ಲಿ ’ವೈದ್ಯರ ಮೇಲಿನ ದಾಳಿ ಶಿಕ್ಷಾರ್ಹ ಅಪರಾಧ. ಹತ್ತು ವರ್ಷದವರೆಗೂ ಜೈಲಾಗುವ ಸಂಭವವಿದೆ’ ಎಂಬ ಎಚ್ಚರಿಕೆಯ ಫಲಕಗಳನ್ನು ಪೊಲೀಸರು ತೂಗು ಹಾಕಿದ್ದರು.ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅಂದುಕೊಳ್ಳುತ್ತಿರುವ ಸಮಯದಲ್ಲಿ, ಮಾಡಿದ ಕೆಲಸವೆಲ್ಲ ಹೊಳೆ ನೀರಿನಲ್ಲಿ ಹುಣಸೆ ಹಣ್ಣು ತೇದಂತೆ ಎಂದು ಆಡಿಕೊಳ್ಳುವಂತ ಘಟನೆಗಳು ನಡೆಯುತ್ತಿವೆ.

ಕೋಲ್ಕತ್ತಾ ನಗರದ ಪೊಲೀಸ್ ಅಧಿಕಾರಿ ಒಬ್ಬರು ಎಡಗೈ ಗಾಯದಿಂದ ನರಳುತ್ತಿದ್ದರು. ಸಕ್ಕರೆ ಕಾಯಿಲೆಯು ಅವರಿಗೆ, ಸೋಂಕು ತಗಲಿಕೊಂಡು ತುಂಬಾ ತೊಂದರೆ ಆಗಿತ್ತು. ಇವರು ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದರೆ. ಈ ಸಮಯದಲ್ಲಿ ಆಸ್ಪತ್ರೆಯ ಕಿರಿಯ ವೈದ್ಯರು ಅರೋಗ್ಯ ವಿಚಾರಿಸಲು ಹೋಗಿದ್ದಾರೆ. ಗುಳಿಗೆ ಸೇವಿಸಿರದ ವಿಚಾರದಲ್ಲಿ ಮಾತುಗಳ ಚಕಮಕಿ ನೆಡೆದಿದೆ. ಪೊಲೀಸ್ ಅಧಿಕಾರಿ, ತಾವು ಆಸ್ಪತ್ರೆಯಲ್ಲಿ ಇರುವುದನ್ನು ಮರೆತು, ಲಾಕಪ್‌ನಲ್ಲಿ ನೆಡೆದು ಕೊಂಡಂತೆ ನೆಡೆದುಕೊಂಡಿದ್ದಾರೆ. ಈ ಹಿಂದೆ ಎರಡು ಚಿತ್ರದಲ್ಲಿ ನಟಿಸಿರುವ ಈ ಪೊಲೀಸ್ ಅಧಿಕಾರಿ,ಥೇಟ್ ಸಿನಿಮಾದ ನಾಯಕನಂತೆ ಪ್ಲಾಸ್ಟರ್ ಹಾಕಿರುವ ಕಿರಿಯ ವೈದ್ಯರ ಕೈ ನುಳಿಚಿ, ಬಲಗೈನಿಂದ ಕುತ್ತಿಗೆ ಹಿಚುಕಿ ಗಾಯಗೊಳಿಸಿದ್ದಾರೆ. ವಿಷಯ ತಿಳಿಯುತ್ತಿದಂತೆ ಇಡೀ ಆಸ್ಪತ್ರೆಯ ಸಿಬ್ಬಂದಿ ಕೆಲಸ ನಿಲ್ಲಿಸಿ ಪ್ರತಿಭಟನೆ ನೆಡೆಸಲಾಗಿದೆ. ಯಾಕೋ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿ, ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾರೆ.ವಿಷಯವನ್ನು ತಿಳಿದು ಕೂಡ, ವೈದ್ಯರುಗಳ ವಿರೋಧದ ನಡುವೆ, ಬೇರೊಂದು ಆಸ್ಪತ್ರೆ ಪೊಲೀಸ್ ಅಧಿಕಾರಿಗೆ ಚಿಕಿತ್ಸೆ ನೀಡಲು ಒಪ್ಪಿ ದಾಖಲಿಸಿಕೊಂಡಿದೆ. ವಿಷಯ ತಿಳಿದ ಭಾರತೀಯ ವೈದ್ಯಸಂಘ ಕಠಿಣ ಸಂದೇಶ ನೀಡಲು ನಿರ್ಧರಿಸಿ, ಮಾಡಿದ ಕೆಲಸಕ್ಕೆ ಕೇಳುವವರೆಗೂ ಯಾವ ಪೊಲೀಸರಿಗೂ ಚಿಕಿತ್ಸೆ ನೀಡುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ. ಕ್ಷಮೆ ಕೇಳಲು ಒತ್ತಡದ ಪರಿಸ್ಥಿತಿ ನಿರ್ಮಾಣ ವಾಗುತ್ತಿರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿ, ಕಿರಿಯ ವೈದ್ಯರನ್ನು ಭೇಟಿಮಾಡಿದ್ದಾರೆ.ಕಿರಿಯ ವೈದ್ಯರಲ್ಲಿ, ಹಿರಿಯ ಪೊಲೀಸ್ ಅಧಿಕಾರಿ ಕ್ಷಮೆ ಕೇಳಿದ ಪರಿ, ರಾಜಕೀಯ ನಾಯಕನ್ನು ನಾಚಿಸುವಂತೆ ಇತ್ತು ಎಂದರೆ ತಪ್ಪಾಗಲಾರದು. ಏಕೆಂದರೆ ಪೊಲೀಸ್ ಅಧಿಕಾರಿ ವೈದ್ಯರ ಹೆಗಲ ಮೇಲೆ ಕೈಯಿಟ್ಟು ‘ಆದದ್ದೆಲ್ಲ ಮರೆತುಬಿಡು’ ಎಂದಿದ್ದಾರೆ ಅಷ್ಟೇ. ಇದನ್ನೇ ಕ್ಷಮೆಯಾಚನೆ ಎಂದು ತಿಳಿದುಕೊಳ್ಳಬೇಕಂತೆ!. ಕೆರಳಿದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಲಾಗಿದೆ.ಆದರೆ ಎಫ್ ಐ ಆರ್ ದಾಖಲಿಸಲು ಕೊಡ ನಿರಾಕರಿಸಿರುವ ಪೊಲೀಸರು, ಆಂತರಿಕ ಇಲಾಖಾ ವಿಚಾರಣೆಗೆ ಆರೋಪವಿರುವ ಅಧಿಕಾರಿಯನ್ನು ಒಳಪಡಿಸುವು ದಾಗಿ ಭರವಸೆ ಕೊಡಲಾಗಿದೆ. ’ರಜದಲ್ಲಿರುವ ಅಧಿಕಾರಿ ಮಾಡಿರುವ ಅಪರಾಧ ,ಆಂತರಿಕ ಇಲಾಖೆ ವಿಚಾರಣೆಯ ವ್ಯಾಪ್ತಿಯ ಬರವುದಿಲ್ಲ. ಇದು ಬರಿ ಒಂದು ಕಣ್ಣೊರೆಸುವ ತಂತ್ರ’ ಎಂದು ಮನಗಂಡ ವೈದ್ಯಸಂಘ ರಸ್ತೆಗಿಳಿದು ಪ್ರತಿಭಟನೆ ಮಾಡಲು ಮುಂದಾಯಿತು.

ಪ್ರತಿಭಟನೆ ಮಾಡಲು, ರಸ್ತೆ ಚಳವಳಿ ಆರಂಭಿಸಿದ ವೈದ್ಯರ ದುರಾದೃಷ್ಟ ನೋಡಿ.ಚಳುವಳಿ ಆರಂಭಿಸಿದ ಅರ್ಧ ಗಂಟೆಯಲ್ಲಿ, ಹತ್ತಿರದಲ್ಲೇ ಇದ್ದ ಒಂದು ಮೇಲ್ಸೇತುವೆ ಕುಸಿದು ಬಿತ್ತು. ನೂರಾರು ಗಾಯಗೊಂಡ ಸಾರ್ವಜನಿಕರು, ಅದೇ ಆಸ್ಪತ್ರೆಗೆ ದೌಡಾಯಿಸಿದರು. ಮಾನವೀಯತೆ ನೆಲೆಯಲ್ಲಿ, ರೋಗಿಗಳಿಗೆ ಸಹಾಯವಾಗಲಿ ಎಂದು ಪ್ರತಿಭಟನೆ ಹಿಂತೆದುಕೊಂಡು, ಪೊಲೀ ಸನ್ನು ಸೇರಿದಂತೆ ಗಾಯಗೊಂಡ ಎಲ್ಲಾ ಸಾರ್ವಜಕರಿಗೆ ಚಿಕಿತ್ಸೆ ನೀಡಲಾಗಿದೆ. ಒಂದು ವಾರವಾದರೂ ಪೊಲೀಸ್ ಅಧಿಕಾರಿಯ ಮೇಲೆ ಎಫ್ ಐ ಆರ್ ದಾಖಲಿಸದ ಪೊಲೀಸರು, ರಸ್ತೆ ತಡೆ ನೆಡೆದ ಅರ್ಧ ಒಳಗೆ, ಅನುಮತಿ ಇಲ್ಲದೆ ಪ್ರತಿಭಟನೆ ನೆಡೆಸಿದ್ದಾರೆ ವೈದ್ಯರ ಮೇಲೆಯೇ ಎಫ್ ಐ ಆರ್ ಹಾಕಿದ್ದಾರೆ!.

ಈ ಮದ್ಯೆ ದಾಳಿ ಮಾಡಿದ ಪೊಲೀಸ್ ಅಧಿಕಾರಿ ಹೇಳಿಕೆ ನೀಡಿ ಆಸ್ಪತ್ರೆಯ ಒಳಗೆ ಬಂದ ವ್ಯಕ್ತಿ ವೈದ್ಯರು ಎಂದು ಗೊತ್ತಾಗಲಿಲ್ಲ. ಅವರ ಕೊರಳಲ್ಲಿ ಸ್ಟೆಥೋಸ್ಕೋಪ್ ಅಥವಾ ಬಿಳಿಯ ಕೋಟು ಇರಲಿಲ್ಲ. ನಾನು ಈ ವ್ಯಕ್ತಿ ಬೇರೆ ಯಾವುದೊ ಪ್ಯಾರಾ ಮೆಡಿಕಲ್ ಸಿಬ್ಬಂಧಿ ಎಂದು ಅನಿಸಿತ್ತು. ಅವರು ಮಾಡನಾಡುವ ರೀತಿ ಇಷ್ಟವಾಗಲಿಲ್ಲ.ಆದ್ದರಿಂದ ಹೊಡೆದೆ’ ಎಂದು ಕೊಟ್ಟಿದ್ದಾರೆ! ಇದೆ ನಿಯಮನ್ನು ಪಾಲಿಸಿದರೆ, ಅನಾಗರಿಕವಾಗಿ ಸಾರ್ವಜಕರೊಂದಿಗೆ ವರ್ತಿಸುವ ಪೊಲೀಸರ ಮೇಲೆ, ಸಾರ್ವಜನಿಕರು ಕೈ ಮಾಡಬಹುದೇ? ಆವ್ಯಕ್ತಿ ವೈದ್ಯನಲ್ಲದಿದ್ದರೆ ಏನಂತೆ? ಎದುರಿಗಿರುವ ವ್ಯಕ್ತಿ ಮಾತನಾಡುವ ಶೈಲಿ ಇಷ್ಟವಾಗದಿದ್ದರೆ ದಾಳಿ ಮಾಡಬಹುದು ಎಂದು ಅರ್ಥವೇ?

ಎಲ್ಲಾ ಘಟನೆಗಳಿಂದ ಪೋಲೀಸರ ನಿಜವಾದ ಬಣ್ಣ ಯಾವುದು ಎಂದು ಜಿಜ್ಞಾಸೆ ಮೂಡಿದೆ. ಒಂದು ಕೈಯಲ್ಲಿ, ವೈದ್ಯರ ದಿನದಂದು ಕೊಟ್ಟ ಹೂ ಗುಚ್ಛವನ್ನು ಕೊಡುವ ಪೊಲೀಸರು, ನಿಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಭಟನೆ ಮಾಡಿದರೆ, ಇನ್ನೊಂದು ಎಫ್‌ಐಆರ್ ಹಾಕುತ್ತಾರೆ. ನಿಜವಾಗಲೂ ತಮ್ಮ ಇಮೇಜ್ ಬದಲಾವಣೆ ಮಾಡಿಕೊಳ್ಳುವ ಇಚ್ಛೆ ಇದ್ದರೆ, ತಪ್ಪು ಮಾಡಿದ ಪೊಲೀಸ್ ಅಧಿಕಾರಿಯನ್ನು ಬಂಧಿಸಿದರೆ ಸಾಕಿತ್ತು.

ಬಿಹಾರದಲ್ಲಿ ಪೊಲೀಸರಿಂದ ರಕ್ಷಣೆ ಸಿಗುವುದಿಲ್ಲ ಎಂದು ಪೊಲೀಸರು ಸಂವಿದಾನದ ಆಶಯಗಳಿಗೂ ಮತ್ತು ಸಾರ್ವಜಕರಿಗೂ ಇರುವ ಕೊಂಡಿ. ನೆಲದ ಕಾನೂನನ್ನು ಜಾರಿಗೆತರುವ ದೊಡ್ಡ ಜವಾಬ್ದಾರಿ ಅವರ ಹೆಗಲ ಮೇಲೆ ಇದೆ. ಪೊಲೀಸರು ದಾರಿ ತಪ್ಪಿದರೆ, ಶ್ರೇಷ್ಠ ಸಂವಿದಾನ ಕೊಡ ನಿಷ್ಕ್ರಿಯವಾಗುತ್ತದೆ. ಸಂಸ್ಥೆಗಳು ಮುಚ್ಚಿಹೋಗುತ್ತವೆ. ಎಲ್ಲೇ ಮೀರಿದರೆ ದೇಶವೇ ಅಸ್ಥಿರವಾಗಬಹುದು. ಎದ್ದು ಹೊಲ ಮೇಯ್ದರೆ, ಬೇಲಿಯ ಅವಶ್ಯಕತೆ ಬರುವುದೇ ಇಲ್ಲ. ಬೇಲಿಯೇ ಹೊಲ ಮೇಯುತ್ತಿದೆ ಎಂದು ಗೊತ್ತಾದರೆ, ರೈತ ಕಷ್ಟ ಪಟ್ಟು ಬೇಲಿವನ್ನು ಹಾಕುವುದಕ್ಕೆ ಹೋಗುವುದಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close