About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಉಗ್ರರ ವಿರುದ್ಧ ಮತ್ತೊಂದು ಸರ್ಜಿಕಲ್ ದಾಳಿ ಅಗತ್ಯ: ಬಿಪಿನ್ ರಾವತ್

ದೆಹಲಿ: ಉಗ್ರರ ವಿರುದ್ಧ ಮತ್ತೊಂದು ಸರ್ಜಿಕಲ್ ದಾಳಿ ನಡೆಸುವ ಅಗತ್ಯವಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು,  ‘ಉಗ್ರರ  ವಿರುದ್ಧ ಮತ್ತೊಂದು ಅಂತಹುದೇ ದಾಳಿ ಅಗತ್ಯವಿದೆ ಎನ್ನುವುದು ನನ್ನ ನಂಬಿಕೆ. ಆದರೆ ಅದನ್ನು ಹೇಗೆ ಮಾಡುತ್ತೇವೆ ಎನ್ನುವುದನ್ನು ಬಹಿರಂಗಪಡಿಸುವುದಿಲ್ಲ’ ಎಂದರು. ವಾಸ್ತವ ನಿಯಂತ್ರಣ ರೇಖೆಯ ಸನಿಹದಲ್ಲಿರುವ ಉಗ್ರರ ತಾಣಗಳ ಮೇಲೆ ಮತ್ತೊಂದು ಸರ್ಜಿಕಲ್ ದಾಳಿ ನಡೆಸುವುದು ಅಗತ್ಯವಿದೆ ಎಂದರು.

ಅಲ್ಲದೆ ಉಗ್ರರು ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ ಎಂದು ರಾವತ್‌ ಹೇಳಿದರು. ಈ ಮಧ್ಯೆ ಪಾಕಿಸ್ತಾನದ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನು ಹಿಂಪಡೆದ ಕೇಂದ್ರದ ಕ್ರಮವನ್ನು ರಾವತ್ ಸ್ವಾಗತಿಸಿದರು.

2016ರ ಸೆಪ್ಟೆಂಬರ್ 29ರಂದು ಉಗ್ರರ ತಾಣಗಳ ಮೇಲೆ ವಾಸ್ತವ ನಿಯಂತ್ರಣ ರೇಖೆಯಿಂದಾಚೆ ತೆರಳಿದ್ದ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿತ್ತು. ಈ ವೇಳೆ ಸುಮಾರು 60ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಉಗ್ರರ ಬಂಕರ್ ಗಳನ್ನು ನಾಶಪಡಿಸಲಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close