About Us Advertise with us Be a Reporter E-Paper

ಅಂಕಣಗಳು

ಬೇಕು ಇಂಧನ ದರ ಏರಿಕೆಗೆ ಕಡಿವಾಣ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನಂಪ್ರತಿ ಏರುತಿಯತ್ತಲೇ ಸಾಗುತ್ತಿವೆ. ಡಾಲರ್ ಮುಂದೆ ರೂಪಾಯಿಯ ಬೆಲೆ ಕುಸಿತ ಈ ಏರುಗತಿಗೆ ವೇಗವರ್ಧಕವಾಗಿದೆ. ಇವೆರಡೂ ಉತ್ಪನ್ನಗಳ ಧಾರಣೆ ಪ್ರತಿಪೈಸೆ ಹೆಚ್ಚದರೂ ಅದರಿಂದ ಹೈರಾಣಾಗುವುದು ಜನಸಾಮಾನ್ಯ ಎಂಬುದು ನಿರ್ವಿವಾದ. ಡೀಸೆಲ್ ಧಾರಣೆಗೂ ಹಣದುಬ್ಬರಕ್ಕೂ ಅವಿನಾಭಾ ಸಂಬಂಧ. ಒಂದಕ್ಕೊಂದು ಪೂರಕ. ಡೀಸೆಲ್ ಬೆಲೆ ಏರಿದಂತೆಲ್ಲ ಹಣದುಬ್ಬರ ಹೆಚ್ಚುತ್ತದೆ. ಪರಿಣಾಮ  ಪೆಟ್ಟು ಬೀಳುತ್ತದೆ. ಸರಕಾರದ ನೀತಿ ನಿರ್ಧಾರಗಳ ನಿಯತ್ತನ್ನೇ ಇವು ಒರೆಗೆ ಹಚ್ಚುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಸಿತದ ಕಾರಣ ಕಳೆದ 10 ದಿನಗಳಿಂದ ಇಂಧನ ಬೆಲೆ ಸತತವಾಗಿ ಏರುತ್ತಲೇ ಇದೆ. ಇಂಧನ ಬೆಲೆ ಎನ್ನುವುದು ಒಂದಿ ರೀತಿಯಲ್ಲಿ ಸರಕಾರಕ್ಕೆ ಚಿನ್ನದ ಕತ್ತರಿ ಇದ್ದಂತೆ. ಬೆಲೆ ಏರಿಕೆಯಿಂದ ಬೊಕ್ಕಸ ಸಮೃದ್ಧವಾದರೂ, ಅದರ ಅಡ್ಡಪರಿಣಾಮಗಳಿಂದಾಗುವ ಹಾನಿಯನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಮದ್ದೇ ಇಲ್ಲ ಎಂದೇನಲ್ಲ. ಆದರೆ ಮದ್ದು ಚುಚ್ಚುವವರು ಯಾರು ಮತ್ತು  ಎಂಬುದೇ ಯಕ್ಷಪ್ರಶ್ನೆ. ಇಂಧನದ ಮೇಲಿನ ತೆರಿಗೆಗಳನ್ನು ಅರ್ಧ ಭಾಗ ಇಳಿಸಿದರೂ ಧಾರಣೆ ಗಣನೀಯವಾಗಿ ಕಡಿಮೆಯಾಗಲಿದೆ. ಜನರೂ ನಿಟ್ಟುಸಿರು ಬಿಡಬಹುದು. ಆದರೆ ಇದರಿಂದ ಆಗುವ ಆದಾಯದ ಕೊರತೆಯನ್ನು ಭರಿಸಿಕೊಳ್ಳುವ ಶಕ್ತಿ ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಇಲ್ಲದಿರುವುದೇ ಪರಿಹಾರವನ್ನು ಮರೀಚಿಕೆಯಾಗಿಸಿದೆ. ದೇಶದ ಆರ್ಥಿಕತೆಯಲ್ಲಿರುವ ಎಲ್ಲ ಲೋಪಳಿಗೂ ಮಂತ್ರದಂಡ ಎಂದೇ ಬಿಂಬಿಸಿ ತರಲಾದ ಸರಕು ಸೇವಾ ತೆರಿಗೆ ವ್ಯವಸ್ಥೆಯೂ ಇದಕ್ಕೆ ಪರಿಹಾರ ನೀಡಿಲ್ಲ. ಈ ವ್ಯವಸ್ಥೆಯ ವ್ಯಾಪ್ತಿಯಿಂದ ಇಂಧನವನ್ನು ಹೊರಗಿಟ್ಟಿರುವುದೇ ಇದಕ್ಕೆ  ಇಂಧನ ಬೆಲೆ ಗಗನಮುಖಿಯಾಗಿರುವ ಸಂದರ್ಭದಲ್ಲಿ ಜಿಎಸ್‌ಟಿ ಮಂಡಳಿ ಅನೇಕ ಸಭೆಗಳನ್ನು ನಡೆಸಿದರೂ ಇಂಧನವನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ಒಳಪಡಿಸುವ ವಿಚಾರದಲ್ಲಿ ಯಾವುದೇ ಒಮ್ಮತ ಮೂಡಿಲ್ಲ. ಸದ್ಯದ ಆರ್ಥಿಕ ಪರಿಸ್ಥಿತಿ ನೋಡಿದರೆ ಒಮ್ಮತ ಮೂಡುವುದೂ ಇಲ್ಲ ಎಂದೇ ಹೇಳಬಹುದು. ಚುನಾವಣಾ ವರ್ಷದಲ್ಲಿ ಇದು ಕೇಂದ್ರ ಸರಕಾರಕ್ಕೂ ದುಬಾರಿ ಎನಿಸಿದೆ. ಹಾಗೆಂದು ಅಂಕೆಗೆ ತರಲು ಪ್ರಯತ್ನಿಸಿದರೆ ಆದಾಯಕ್ಕೇ ಕತ್ತರಿ ಬೀಳುವ ಅಪಾಯ. ಚುನಾವಣಾ ಪೂರ್ವ ಬಜೆಟ್ಟಿನಲ್ಲಿ ಜನರ ಮೂಗಿಗೆ ತುಪ್ಪ ಸವರುವ   ತನ್ನ ಬೊಕ್ಕಸಕ್ಕೆ ನಷ್ಟ ಸಹಿಸಿಕೊಳ್ಳುವ ದುಸ್ಸಾಹಸಕ್ಕೆ ಸರಕಾರ ಕೈಹಾಕುವುದಿಲ್ಲ. ಇದೇನೇ ಇರಲಿ ಶ್ರೀಸಾಮಾನ್ಯನಿಗೆ ಮಾತ್ರ ನಿತ್ಯದ ಗೋಳು ತಪ್ಪಿದ್ದಲ್ಲ.

Tags

Related Articles

Leave a Reply

Your email address will not be published. Required fields are marked *

Language
Close