About Us Advertise with us Be a Reporter E-Paper

Breaking Newsದೇಶಪ್ರಚಲಿತ

ನೀರವ್​ ಮೋದಿ ಸೋದರಿ ಪೂರ್ವಿ ಮೋದಿ ವಿರುದ್ಧ ರೆಡ್ ಕಾರ್ನರ್​ ನೋಟಿಸ್​!

ದೆಹಲಿ: ಪಂಜಾಬ್​ ನ್ಯಾಷನಲ್ ಬ್ಯಾಂಕ್‌‌‌ಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿರುವ ವಜ್ರೋದ್ಯಮಿ ನೀರವ್​ ಮೋದಿ ಸೋದರಿ ಪೂರ್ವಿ ಮೋದಿಗೆ ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ.

ಹಣ ವಂಚನೆ ಪ್ರಕರಣದಲ್ಲಿ​ ಪೂರ್ವಿ ದೀಪಕ್​ ಮೋದಿ ಅವರು ಬೇಕಾಗಿದ್ದಾರೆ ಎಂದು  ಅಂತಾರಾಷ್ಟ್ರೀಯ ಅರೆಸ್ಟ್​ ವಾರೆಂಟ್‌‌ನಲ್ಲಿ ಹೇಳಲಾಗಿದೆ.

ಜಾರಿ ನಿರ್ದೇಶನಾಲಯ (ಇ.ಡಿ.)ದ ಮನವಿ ಮೇರೆಗೆ ಆರ್​ಸಿಎನ್​ ಪೂರ್ವಿ ವಿರುದ್ಧ ನೋಟಿಸ್​ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವಿಯವರನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನು ಮುಂದುವರಿಸಲು ಇಚ್ಛಿಸುತ್ತಿರುವುದಾಗಿ ಇ.ಡಿ. ಹೇಳಿದೆ. ಇ.ಡಿ. ಮಾರ್ಚ್​ನಲ್ಲಿ ಸಲ್ಲಿಸಿದ ತನ್ನ ಮೊದಲ ಚಾರ್ಜ್​ಶೀಟ್​ನಲ್ಲಿ ಪೂರ್ವಿ ಹೆಸರನ್ನು ಉಲ್ಲೇಖಿಸಿದೆ. ಪಂಜಾಬ್ ನ್ಯಾಷನಲ್​ ಬ್ಯಾಂಕ್​ ಬ್ರಾಡಿ ಹೌಸ್​ ಶಾಖೆಯಲ್ಲಿ ನಡೆದ ಹಣ ಅಕ್ರಮ ವರ್ಗಾವಣೆ ​ ಪ್ರಕರಣದಲ್ಲಿ ಆರೋಪಿ ಎಂದು ಹೇಳಿದೆ.

.

Tags

Related Articles

Leave a Reply

Your email address will not be published. Required fields are marked *

Language
Close