ವಿಶ್ವವಾಣಿ

ನೆಹರು, ಇಂದಿರಾ, ರಾಜೀವ್ ಅವರ 37 ವರ್ಷಗಳ ಅಧಿಕಾರ ಅವಧಿಯಲ್ಲಿ ಒಂದು ವರ್ಷ ಮಾತ್ರ ಪ್ರತಿಪಕ್ಷ ನಾಯಕರಿದ್ದರು!

ಪ್ರಧಾನಿ ನರೇಂದ್ರ ಮೋದಿ ಅವರು ಅವರ ಪಾಡಿಗೆ ದಿನಕ್ಕೆ ಹದಿನೆಂಟು-ಇಪ್ಪತ್ತು ಗಂಟೆ ಕೆಲಸ ಮಾಡುತ್ತಾರೆ. ಅವರ ಬೆಂಬಲಿಗರು ಹಾಗೂ ಟೀಕಾಕಾರರು ಮಾತ್ರ ದಿನವಿಡೀ ಕಿತ್ತಾಡುತ್ತಿರುತ್ತಾರೆ. ಪ್ರಾಯಶಃ ಮೋದಿಯವರಷ್ಟು ಚರ್ಚೆಗೆ ಒಳಗಾದ ವ್ಯಕ್ತಿ ಮತ್ತೊಬ್ಬ ಇರಲಾರ.  ಟೀಕೆ ಎಷ್ಟರಮಟ್ಟಿಗೆ ಒಗ್ಗಿರಬಹುದೆಂದರೆ, ಅದನ್ನು ಕೇಳದಿದ್ದರೆ ಏನನ್ನೋ ಕಳೆದುಕೊಂಡ ಭಾವ ಉಂಟಾಗಬಹುದು. ಇಲ್ಲವೇ ಈ ಟೀಕೆಗಳೇ ಅವರಿಗೆ ಪ್ರೇರಣೆಯೂ ಆಗಿರಬಹುದು.

ಇತ್ತೀಚೆಗೆ ಪ್ರಗತಿಪರ ಹಾಗೂ ವಿಚಾರವಾದಿ ಎಂದು ಕರೆಯಿಸಿಕೊಂಡವರೊಬ್ಬರು ‘ಈ ಮೋದಿ ಅದೆಂಥ ನಂಜಿನ ಮನಸ್ಸಿನವರೆಂದರೆ, ತಮಗೆ ಎದುರಾಳಿಯೇ ಇರಬಾರದು ಎಂಬ ಸರ್ವಾಧಿಕಾರಿ ಮನೋಭಾವದವರು. ಅದಕ್ಕಾಗಿಯೇ ಕಾಂಗ್ರೆಸ್ ಮುಕ್ತ ಭಾರತದ ಮಾತಾಡುತ್ತಿದ್ದಾರೆ. ಮೋದಿ ಅದೆಷ್ಟು ಸಣ್ಣ ಮನಸ್ಸಿನವರೆಂದರೆ, ಲೋಕಸಭೆಯಲ್ಲಿ ಕಾಂಗ್ರೆಸ್ ಎರಡನೇ ದೊಡ್ಡ ಪಕ್ಷ. ನ್ಯಾಯಯುತವಾಗಿ ಕಾಂಗ್ರೆಸ್‌ಗೆ ಪ್ರತಿಪಕ್ಷದ  ಸಿಗಬೇಕು. ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷ ನಾಯಕರಾಗಬೇಕು. ಈ ಮೋದಿ ಅದೆಷ್ಟು ದಲಿತ ವಿರೋಧಿ ಅಂದರೆ, ಖರ್ಗೆಯವರಿಗೆ  ಆ ಸ್ಥಾನವನ್ನು ನೀಡಲಿಲ್ಲ. ಮೋದಿ ಮನಸ್ಸು ಮಾಡಿದರೆ, ಕಾಂಗ್ರೆಸ್‌ಗೆ ಹಾಗೂ ಖರ್ಗೆಗೆ ಆ ಸ್ಥಾನವನ್ನು ಕೊಡಬಹುದಿತ್ತು. ಪ್ರಧಾನಿ ಜಾಗದಲ್ಲಿ ಕುಳಿತವರು ಇಷ್ಟು ನೀಚ ಮನಸ್ಸಿನವರಿರಬಾರದು, ಪ್ರಧಾನಿಯಾದವರು ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು. ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷ ನಾಯಕನಿಲ್ಲದೇ ಸದನ ನಡೆಸುವುದು ಭೂಷಣ ಅಲ್ಲ ಎಂಬ ಸಾಮಾನ್ಯ ತಿಳಿವಳಿಕೆಯಾದರೂ ಮೋದಿಗೆ  ಅವರಿಗೆ ಸಂವಿಧಾನ ಹಾಗೂ ಪ್ರಜಾಸತ್ತೆಯಲ್ಲಿ ನಂಬಿಕೆ ಇಲ್ಲ ಎಂದು ಭಾವಿಸಲು ಇದೊಂದೇ ನಿದರ್ಶನ ಸಾಕು’ ಎಂದು ಭಾಷಣ ಮಾಡಿದ್ದಲ್ಲದೇ ಇದರ ಸಾರಾಂಶವನ್ನು ಟ್ವೀಟ್ ಸಹ ಮಾಡಿದರು.

ನನಗೆ ಇದನ್ನು ನೋಡಿ ಅವರ ಬಗ್ಗೆ ಅನುಕಂಪ ಮೂಡಿತು. ಅಯ್ಯೋ ಪಾಪ ಎನಿಸಿತು.

ಕೆಲವರಿಗೆ ವಿಟಮಿನ್ ಕೊರತೆ ಇರುವಂತೆ ಜ್ಞಾನ (ಓ್ಞಟಡ್ಝಿಛಿಜಛಿ ಛ್ಛಿಜ್ಚಿಜಿಠಿ)ದ ಕೊರತೆಯೂ ಇರುತ್ತದೆ. ವಿಟಮಿನ್ ಕೊರತೆಗೆ ಮಾತ್ರೆ ತೆಗೆದುಕೊಂಡು ಸುಧಾರಿಸಿಕೊಳ್ಳಬಹುದು. ಆದರೆ ಜ್ಞಾನದ ಕೊರತೆಗೆ ನಂಜನ್ನು ಮೊದಲು ತೆಗೆದುಹಾಕಬೇಕಾಗುತ್ತದೆ.  ಇಟ್ಟುಕೊಂಡರೆ ಜ್ಞಾನವೆಲ್ಲ ನೆತ್ತಿಗೆ ಹೋಗದೇ ಪಿತ್ತವಾಗಿ ಹೊರಟುಹೋಗುತ್ತದೆ.

ನಾನು ಈ ವಿಚಾರವಾದಿಗಳಿಗೆ ಹೇಳೋದಿಷ್ಟು. ನಾನೇನು ಮೋದಿಭಕ್ತನೂ ಅಲ್ಲ, ಭಂಡಾರಿಯೂ ಅಲ್ಲ. ಆದರೆ ಊ್ಚಠಿ ಸರಿಯಾಗಿ ತಿಳಿದುಕೊಳ್ಳದಿದ್ದರೆ, ಯಾರ್ಯಾರೋ ಏನೇನೋ ಆಗಿ ಕಾಣಿಸುತ್ತಾರೆ. ನಮ್ಮ ಮೌಢ್ಯ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತದೆ. ಕೇವಲ ಆ ವಿಚಾರವಾದಿಗಳಷ್ಟೇ ಅಲ್ಲ, ಆ ಅಭಿಪ್ರಾಯ ಹೊಂದಿರುವವರಿಗೆ ಕೆಲವು ಐತಿಹಾಸಿಕ ಸತ್ಯಗಳನ್ನು ಹೇಳಬೇಕು. ಆಗಲಾದರೂ ಅವರ ಉದರ ಶಾಂತವಾಗಬಹುದು.

1952ರಲ್ಲಿ ಮೊದಲು ಲೋಕಸಭಾ ಚುನಾವಣೆ ನಡೆಯಿತು. ಆಗ  ನಡೆದ ಕ್ಷೇತ್ರಗಳ ಸಂಖ್ಯೆ 489. ದೇಶದಲ್ಲಿದ್ದ ಅರ್ಹ ಮತದಾರರ ಸಂಖ್ಯೆ 17.3 ಕೋಟಿ. ಕಾಂಗ್ರೆಸ್ ಪಕ್ಷ 364 ಕ್ಷೇತ್ರಗಳಲ್ಲಿ ಗೆದ್ದು ಜಯಭೇರಿ ಬಾರಿಸಿತು.

ಆ ಚುನಾವಣೆಯಲ್ಲಿ ನೆಹರು ಸಂಪುಟದಲ್ಲಿ ಕೈಗಾರಿಕೆ ಸಚಿವರಾಗಿದ್ದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರು ಕಾಂಗ್ರೆಸ್‌ನಿಂದ ಹೊರಬಂದು ಭಾರತೀಯ ಜನಸಂಘ ಸ್ಥಾಪಿಸಿ ಸೆಣಸಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಶೆಡ್ಯೂಲ್‌ಡ್ ಕಾಸ್‌ಟ್ ಫೆಡರೇಶನ್(ನಂತರ ಇದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಆಯಿತು) ಸ್ಥಾಪಿಸಿ ಸೆಣಸಿದರು. ಆಚಾರ್ಯ ಜೆ.ಬಿ. ಕೃಪಲಾನಿ  ಮಜದೂರ್ ಪ್ರಜಾ ಪಾರ್ಟಿಯಿಂದ ಸ್ಪರ್ಧಿಸಿದ್ದರು. ರಾಮಮನೋಹರ ಲೋಹಿಯಾ ಹಾಗೂ ಜಯಪ್ರಕಾಶ ನಾರಾಯಣ ಸೋಶಿಯಲಿಸ್‌ಟ್ ಪಾರ್ಟಿಯಿಂದ ಸೆಣಸಿದ್ದರು.

ಕಮ್ಯುನಿಷ್ಟರು ಸಹ 49 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಅಂಬೇಡ್ಕರ್ ಅವರು ಮುಂಬೈ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನಾರಾಯಣ ಸದೋಬಾ ಕಾಜ್ರೋಲ್ಕರ್ ವಿರುದ್ಧ ಸೋತು ಹೋದರು. ಕಾಂಗ್ರೆಸ್ ಹೊರತುಪಡಿಸಿದರೆ, ಕೇವಲ ಡಬಲ್ ಡಿಜಿಟ್ ಪಡೆದ ಪಕ್ಷಗಳೆಂದರೆ, ಸಿಪಿಐ(16ಸೀಟು) ಹಾಗೂ ಸೋಷಿಯಲಿಸ್‌ಟ್ ಪಾರ್ಟಿ(12ಸೀಟು).

ಒಟ್ಟೂ ಮತದಾನದ ಪೈಕಿ ಶೇ.45ರಷ್ಟು ವೋಟುಗಳನ್ನು ಕಾಂಗ್ರೆಸ್ ಪಡೆದಿತ್ತು.  ಜನಸಂಘ 3 ಸ್ಥಾನಗಳಲ್ಲಿ ಗೆದ್ದಿತ್ತು. 10 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿತ್ತು. ಪಕ್ಷೇತರರು 47 ಕ್ಷೇತ್ರಗಳಲ್ಲಿ ಗೆದ್ದಿದ್ದರು.

ಕಾಂಗ್ರೆಸ್ ಬಿಟ್ಟರೆ ಎರಡನೆ ಅತಿದೊಡ್ಡ ಪಕ್ಷವೆಂದರೆ 16 ಸ್ಥಾನಗಳನ್ನು ಪಡೆದ ಸಿಪಿಐ. ಆ ಪಕ್ಷದ ಎ.ಕೆ. ಗೋಪಾಲನ್ ಪ್ರತಿಪಕ್ಷದ ನಾಯಕ ಆಗಬೇಕಿತ್ತು.

ಆದರೆ ನೆಹರು ಅವರು ಒಂದು ಉಪಾಯ ಮಾಡಿದರು. ಪ್ರತಿಪಕ್ಷದ ನಾಯಕನ ಸ್ಥಾನ ಇರಲೇಕೂಡದು ಎಂದು ನಿರ್ಧರಿಸಿದರು. ಸದನದ ಒಟ್ಟೂ ಸ್ಥಾನಗಳ ಪೈಕಿ ಶೇ.10ರಷ್ಟು ಸ್ಥಾನಗಳಲ್ಲಾದರೂ ಗೆದ್ದ ಪಕ್ಷದ ನಾಯಕ  ನಾಯಕರಾಗಬಹುದು ಎಂಬ ಕಾನೂನು ಮಾಡಿದರು. 489 ಸ್ಥಾನಗಳಲ್ಲಿ ಶೇ.10ರಷ್ಟು ಅಂದ್ರೆ 48 ಸ್ಥಾನಗಳು. ಅಷ್ಟು ಸ್ಥಾನ ಯಾವ ಪಕ್ಷಗಳಿಗೂ ಬಂದಿರಲಿಲ್ಲ. ಅದು ಗೊತ್ತಿದ್ದರಿಂದಲೇ ನೆಹರು ಆ ತಂತ್ರ ಹೆಣೆದಿದ್ದರು.

1957ರಲ್ಲಿ ಎರಡನೆಯ ಲೋಕಸಭೆ ಚುನಾವಣೆ ನಡೆಯಿತು. ಆಗ 484 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ನಡೆಯಿತು. ಕಾಂಗ್ರೆಸ್ ಶೇ.48ರಷ್ಟು ಮತಗಳನ್ನು ಪಡೆಯಿತು. ಆ ಪಕ್ಷ 371 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಡಬಲ್ ಡಿಜಿಟ್ ಪಡೆದ ಪಕ್ಷಗಳೆಂದರೆ, ಸಿಪಿಐ(27) ಹಾಗೂ ಪ್ರಜಾ ಸೋಶಿಯಲಿಸ್‌ಟ್  ಭಾರತೀಯ ಜನಸಂಘ 4 ಕ್ಷೇತ್ರಗಳಲ್ಲಿ (ವಾಜಪೇಯಿ ಸೇರಿ) ಗೆದ್ದಿತು. ಪಕ್ಷೇತರರು 41 ಕ್ಷೇತ್ರಗಳಲ್ಲಿ ವಿಜಯಿಯಾಗಿದ್ದರು.

ಸಹಜವಾಗಿ ಅತಿ ಹೆಚ್ಚು ಸ್ಥಾನ ಗಳಿಸಿದ ಕಾಂಗ್ರೆಸ್‌ನ ನೆಹರು ಪ್ರಧಾನಿಯಾದರು. ಅವರೇ ರೂಪಿಸಿದ ಕಾನೂನಿಂದಾಗಿ ಪ್ರತಿಪಕ್ಷದ ನಾಯಕನ ಸ್ಥಾನ ಯಾರಿಗೂ ಸಿಗದೇ ತಪ್ಪಿಹೋಯಿತು.

ಇನ್ನು 1962ರಲ್ಲಿ ನಡೆದ ಮೂರನೇ ಲೋಕಸಭಾ ಚುನಾವಣೆ. ಒಟ್ಟೂ 494 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 361(ಶೇ.45ರಷ್ಟು ಮತ)ಕ್ಷೇತ್ರಗಳಲ್ಲಿ ಗೆದ್ದಿತು. ಎರಡಂಕಿ ಸ್ಥಾನಗಳನ್ನು ಪಡೆದ ಪಕ್ಷಗಳೆಂದರೆ, ಸಿಪಿಐ(29), ಸ್ವತಂತ್ರ  ಹಾಗೂ ಭಾರತೀಯ ಜನಸಂಘ(14), 20 ಪಕ್ಷೇತರ ಅಭ್ಯರ್ಥಿಗಳು ಆರಿಸಿ ಬಂದಿದ್ದರು.

ನ್ಯಾಯಯುತವಾಗಿ ಸಿಪಿಐಗೆ ಪ್ರತಿಪಕ್ಷ ನಾಯಕನ ಹುದ್ದೆ ಸಿಗಬೇಕಿತ್ತು. ಆದರೆ ನೆಹರು ರೂಪಿಸಿದ ಕಾನೂನು ಪ್ರತಿಪಕ್ಷಗಳ ಎಲ್ಲ ನಾಯಕರ ಬಾಯಿ ಮುಚ್ಚಿಸಿತ್ತು. ಒಟ್ಟೂ ಸ್ಥಾನಗಳ ಪೈಕಿ ಶೇ.10ರಷ್ಟು ಸ್ಥಾನ ಪಡೆದ ಪಕ್ಷಕ್ಕೆ ಮಾನ್ಯತೆ ನೀಡಬೇಕೆಂದು ಲೋಕಸಭೆಯಲ್ಲಿ ಭಾರೀ ಚರ್ಚೆಯಾಯಿತು. ಕಳೆದ ಮೂರು ಅವಧಿಗೆ ಪ್ರತಿಪಕ್ಷದ ಮಾನ್ಯತೆ ನೀಡದೇ, ನಾಯಕನೂ ಇಲ್ಲದೇ ಸದನದ ಸದಸ್ಯರ ಹಕ್ಕುಗಳನ್ನು ಕಸಿಯುತ್ತಿದ್ದಾರೆ,  ನೆಹರು ಅವರಿಗೆ  ಸದಸ್ಯರ ಮೇಲೆ ನಂಬಿಕೆ ಇಲ್ಲ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬಹುಮತವಿದ್ದರೂ ಪ್ರತಿಪಕ್ಷದ ನಾಯಕನನ್ನು ಎದುರಿಸಲು ನೆಹರು ಅವರಿಗೇಕೆ ಅಂಜಿಕೆ? ವಿರೋಧದ ನುಡಿಗಳನ್ನು ಕೇಳುವ ವ್ಯವಧಾನವಿಲ್ಲ. ನೆಹರು ‘ಪ್ರಜಾಪ್ರಭುತ್ವವಾದಿ’ ಅಲ್ಲ ಎಂದು ಪ್ರತಿಪಕ್ಷಗಳ ನಾಯಕರು ಸದನದಲ್ಲಿ ಕೋಲಾಹಲವೆಬ್ಬಿಸಿ ಸಭಾತ್ಯಾಗ ಮಾಡಿದರು. ಆದರೆ ನೆಹರು ಜಪ್ಪಯ್ಯ ಎನ್ನಲಿಲ್ಲ.

ನೆಹರು ಧೋರಣೆ ಖಂಡಿಸಿ ‘ಇಂಡಿಯನ್ ಎಕ್‌ಸ್ಪ್ರೆಸ್’ ಪತ್ರಿಕೆ ಮುಖಪುಟದಲ್ಲಿ ಸಂಪಾದಕೀಯ ಬರೆಯಿತು. ‘ಯಾವುದೇ ಸದನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಪ್ರತಿಪಕ್ಷ ನಾಯಕ ಅತ್ಯಗತ್ಯ. ಆಡಳಿತ ಪಕ್ಷ  ನಾಯಕರಿಗೆ ಮಹತ್ವ ನೀಡಲೇಬೇಕು. ಆಗಲೇ ಪ್ರಜಾತಂತ್ರ ವ್ಯವಸ್ಥೆಗೆ ಬೆಲೆ. ಆದರೆ ನೆಹರು ಅವರು ತಮ್ಮ ಕುಯುಕ್ತಿ ಬಳಸಿ ಸತತವಾಗಿ ಪ್ರತಿಪಕ್ಷ ನಾಯಕ ಸ್ಥಾನ ಇರಲೇಬಾರದೆಂದು ನಿರ್ಧರಿಸಿದಂತಿದೆ. ಇದು ನೆಹರು ಅವರ ಅಭದ್ರತೆಯ ದ್ಯೋತಕ. ಪ್ರಧಾನಿಗೆ ಸಂಸದೀಯ ನಡೆವಳಿಕೆ ಹಾಗೂ ಸಂಪ್ರದಾಯದಲ್ಲಿ ನಂಬಿಕೆ, ವಿಶ್ವಾಸವಿದ್ದರೆ, ಅವರು ಕಾನೂನು ತಿದ್ದುಪಡಿ ತಂದು, ಪ್ರತಿಪಕ್ಷದ ನಾಯಕನ ನೇಮಕಕ್ಕೆ  ಅನುವು ಮಾಡಿಕೊಡಬೇಕು’ ಎಂದು ಬರೆಯಿತು.

ನೆಹರು ಸ್ವಲ್ಪವೂ ದರಕರಿಸಲಿಲ್ಲ. ಪ್ರತಿಪಕ್ಷಗಳ ಮಾತಿಗೆ ಕವಡೆ ಕಿಮ್ಮತ್ತು  ತಾವು ಪ್ರಧಾನಿಯಾಗಿದ್ದಷ್ಟೂ ವರ್ಷವೂ ಕಾನೂನು ತಿದ್ದುಪಡಿ ಮಾಡಲಿಲ್ಲ ಹಾಗೂ ಪ್ರತಿಪಕ್ಷ ನಾಯಕನಿಲ್ಲದೇ  ಸದನ ನಡೆಸಿದರು. ಅಂದರೆ 1952ರಿಂದ 1969ರ ವರೆಗೆ, ಅಂದರೆ ಹದಿನೇಳು ವರ್ಷಗಳ ವರೆಗೆ ಸಂಸತ್ತಿನ ಕೆಳಮನೆಯಲ್ಲಿ ಅರ್ಥಾತ್ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನೇ ಇರಲಿಲ್ಲ!

ಈ ಕಾರಣಕ್ಕೆ ಮೋದಿಯನ್ನು ‘ಸರ್ವಾಧಿಕಾರಿ’ ಎಂದು ಕರೆಯುವವರು ಒಮ್ಮೆ ತಮ್ಮ ಮೂತಿಯನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ನೆಹರು ಅಂದು ಮಾಡಿದ ಆ ಕಾನೂನು ಇಂದಿಗೂ ಚಾಲ್ತಿಯಲ್ಲಿದೆ. 545ಸ್ಥಾನಗಳ ಪೈಕಿ ಶೇ. 10ರಷ್ಟು ಸ್ಥಾನ  55 ಸ್ಥಾನ ಪಡೆದ ಪಕ್ಷದವರು ಪ್ರತಿಪಕ್ಷ ನಾಯಕರಾಗಬೇಕು ತಾನೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದಿದ್ದು ಕೇವಲ 44 ಸ್ಥಾನ. ನೆಹರು ರೂಲನ್ನು ಅನ್ವಯಿಸಿದರೆ ಖರ್ಗೆಯವರನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡುವುದು ಹೇಗೆ?

ಹದಿನೇಳು ವರ್ಷ ಟಟಜಿಠಿಜಿಟ್ಞ ್ಝಛಿಛ್ಟಿ ಇಲ್ಲದೇ ಲೋಕಸಭೆ ಕಲಾಪ ನಡೆಸಿದ್ದನ್ನು ಪ್ರಗತಿಪರ ಚಿಂತಕರು ಮರೆತುಬಿಟ್ಟರಾ? ಅವರಿಗೆ ನೆಹರು ಸರ್ವಾಧಿಕಾರಿ ಎಂದು ಏಕೆ ಅನಿಸಲಿಲ್ಲ? ಇದು ಮೌಢ್ಯವೋ, ಮರೆವೋ, ಅಜ್ಞಾನವೋ, ಅಲ್ಪ ತಿಳಿವಳಿಕೆಯೋ?

1969ರಲ್ಲಿ ಕಾಂಗ್ರೆಸ್(ಓ) ನಾಯಕ ರಾಮ  ಸಿಂಗ್ ಲೋಕಸಭೆಯ ಪ್ರತಿಪಕ್ಷ ನಾಯಕನಾಗುವವರೆಗೆ ಯಾರೂ ಆ ಸ್ಥಾನವನ್ನು ಅಲಂಕರಿಸಿರಲಿಲ್ಲ. ಅವರೇ ಪ್ರಪ್ರಥಮ ಪ್ರತಿಪಕ್ಷದ ನಾಯಕ.

ಆನಂತರ ನೆಹರು ಪುತ್ರಿ ಇಂದಿರಾಗಾಂಧಿಯವರ ಜಮಾನ. 1970ರಿಂದ ಏಳು ವರ್ಷಗಳವರೆಗೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರೇ ಇರಲಿಲ್ಲ. ಆಗಲೂ ನೆಹರು ಮಾಡಿದ ಕಾನೂನನ್ನು ಬದಲಿಸಬೇಕೆಂದು ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ಮಧು ಲಿಮಯೇ, ದಂಡವತೆ ಮುಂತಾದ ನಾಯಕರು ಬಲವಾಗಿ ಆಗ್ರಹಿಸಿದರೂ ಇಂದಿರಾಗಾಂಧಿ ಕೇಳಲಿಲ್ಲ.

ಅದಾದ ತರುವಾಯ 1979ರಿಂದ 1989ರ ತನಕ ಇಂದಿರಾಗಾಂಧಿ ಹಾಗೂ ರಾಜೀವಗಾಂಧಿಯವರ  ಪರ್ವ. ಆ ಅವಧಿಯಲ್ಲೂ ಲೋಕಸಭಾ ಪ್ರತಿಪಕ್ಷ ನಾಯಕನ ಪಟ್ಟ ಖಾಲಿಯಾಗಿಯೇ ಇತ್ತು.

ಅಂದರೆ ನೆಹರು, ಇಂದಿರಾ ಹಾಗೂ ರಾಜೀವಗಾಂಧಿ ಅವರ 37 ವರ್ಷಗಳ ಅಧಿಕಾರ ಅವಧಿಯಲ್ಲಿ ಕೇವಲ ಒಂದು ವರ್ಷ ಮಾತ್ರ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಿದ್ದರು. ಅಂದರೆ ಈ ಮೂವರು ಪ್ರಧಾನಿಗಳು ಪ್ರತಿಪಕ್ಷ ನಾಯಕರಿಲ್ಲದೇ ಸದನ ಎದುರಿಸಿದರು. ಅವರು ಇರಬಾರದೆಂದೇ ಕಾನೂನಿನ ತಿದ್ದುಪಡಿಗೂ ಜಗ್ಗಲಿಲ್ಲ, ಒಪ್ಪಲಿಲ್ಲ. ಇವರು ಮಾಡಿದ್ದನ್ನೇ ಮೋದಿ ಮುಂದುವರಿಸಿದರು. ಈ ಐದು ವರ್ಷಗಳ ಕಾಲ ಲೋಕಸಭೆಯಲ್ಲಿ  ಸ್ಥಾನ ಮಾನ ಯಾವ ಪಕ್ಷಕ್ಕೂ ಸಿಗಲಿಲ್ಲ. ಈಗ ನಮ್ಮ ಪ್ರಗತಿಪರರಿಗೆ, ಕಾಂಗ್ರೆಸ್ ನಾಯಕರಿಗೆ, ಈ ಕಾರಣಕ್ಕೆ ಸರ್ವಾಧಿಕಾರಿಯಂತೆ ಯಾಕೆ ಕಾಣುತ್ತಿದ್ದಾರೆ. ಹೇಗಿದೆ ತಮಾಷೆ?!

1984ರಲ್ಲಿ ಇಂದಿರಾಗಾಂಧಿ ಹತ್ಯೆ ನಂತರ ನಡೆದ ಚುನಾವಣೆಯಲ್ಲಿ ಅನುಕಂಪದ ಅಲೆಯ ಪರಿಣಾಮ ಕಾಂಗ್ರೆಸ್ 415 ಸ್ಥಾನಗಳನ್ನು ಪಡೆಯಿತು. ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದು ಹೀನಾಯ ಮುಖಭಂಗ ಅನುಭವಿಸಿತು. ಪ್ರಾದೇಶಿಕ ಪಕ್ಷವಾದ ತೆಲುಗುದೇಶಂ 30 ಸ್ಥಾನಗಳನ್ನು ಗಳಿಸಿ ಕಾಂಗ್ರೆಸ್ ನಂತರ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

 ಪ್ರತಿಪಕ್ಷದ ನಾಯಕನಾಗಿ ತೆಲುಗು ದೇಶಂನ ಪಿ. ಉಪೇಂದ್ರ ಅವರನ್ನು ನೇಮಿಸುವಂತೆ ಸದನದಲ್ಲಿ ಚರ್ಚೆಯಾಯಿತು. ಹಾಗೆ ನೋಡಿದರೆ, ಲೋಕ ಸಭೆಯಲ್ಲಿ ಪ್ರತಿಪಕ್ಷಗಳೇ ಇರಲಿಲ್ಲ. ಎಲ್ಲ ಪಕ್ಷಗಳೂ ನೆಲಕಚ್ಚಿದ್ದವು. ರಾಜೀವ ಗಾಂಧಿ ಮನಸ್ಸು ಮಾಡಿದ್ದರೆ, ಅಷ್ಟೊಂದು ಬಹುಮತ ಇಟ್ಟುಕೊಂಡು ಕಾಯಿದೆಗೆ ತಿದ್ದುಪಡಿ ತಂದು, ತತ್‌ಕ್ಷಣ ಉಪೇಂದ್ರ ಅವರಿಗೆ ಆ ಹುದ್ದೆ ಕರುಣಿಸಬಹುದಿತ್ತು.

ರಾಜೀವ ಗಾಂಧಿ ಅವರನ್ನು ಪ್ರತಿಪಕ್ಷಗಳ ನಾಯಕರು ಭೇಟಿಯಾಗಿ ಹೊಸ ಪರಂಪರೆಗೆ ನಾಂದಿ ಹಾಡುವಂತೆ ಮನವಿ ಮಾಡಿಕೊಂಡರು. ಆದರೆ ರಾಜೀವ  ಕೊನೆಗೂ ಒಪ್ಪಲೇ ಇಲ್ಲ.

ಈಗ ಹೇಳಿ, ಯಾರು ಸರ್ವಾಧಿಕಾರಿ?

ಸುಮ್ನೆ ಮಾತಾಡ್ತಾರೆ!