ಬಾಲಕಿ ಮೇಲೆ ಕುದಿಯುತ್ತಿದ್ದ ನೀರು ಹಾಕಿದ ನೆರೆಮನೆ ಮಹಿಳೆ

Posted In : ಕೊಪ್ಪಳ, ರಾಜ್ಯ

ಕೊಪ್ಪಳ: ಕ್ಷುಲಕ ಕಾರಣಕ್ಕೆ 14 ವರ್ಷದ ಬಾಲಕಿ ಮೇಲೆ ನೆರೆಮನೆಯಾಕೆ ಬಿಸಿನೀರು ಎಸೆದು ಕೋಪ ನೀಗಿಸಿಕೊಂಡ ಅಮಾನುಷ ಬಗೆ ಕೊಪ್ಪಳ ತಾಲೂಕಿನ ಕೊಳೂರು ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ 9 ನೇ ತರಗತಿ ಓದುತ್ತಿದ್ದ ಶ್ರೀದೇವಿ ಎಂಬ ಬಾಲಕಿಯ ಎಡಭಾಗದ ದೇಹ ಹಾಗೂ ಎರಡೂ ಕೈಗಳೂ ಸುಟ್ಟು ಹೋಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನೆರೆಮನೆಯ ಪಾರಮ್ಮ ಎಂಬಾಕೆ ಈ ಅಮಾನುಷ ಕೃತ್ಯ ಎಸಗಿದ್ದು  ಆಕೆಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಶ್ರೀದೇವಿಯ ಪೋಷಕರು ನಿರ್ಧರಿಸಿದ್ದಾರೆ. 

ಶ್ರೀದೇವಿಯ ಅಜ್ಜಿ ಹಾಗೂ ತಾಯಿ ಪಾರಮ್ಮನೊಂದಿಗೆ ಜಗಳವಾಡಿದ್ದರ ಹಿನ್ನೆಲೆಯಲ್ಲಿ ಸಿಟ್ಟುಕೊಂಡ ಪಾರಮ್ಮ ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ.  
 

Leave a Reply

Your email address will not be published. Required fields are marked *

15 + twenty =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top