About Us Advertise with us Be a Reporter E-Paper

ಸಿನಿಮಾಸ್

ನೀನಾಸಂ ಅಶ್ವಥ್‌ನಿಂದ ಉಂಡೆ ನಾಮ ?

ಹಿರಿತೆರೆ ನಟ ನೀನಾಸಂ ಅಶ್ವಥ್ ವಂಚನೆ ಪ್ರಕರಣವೊಂದು ಕೇಳಿಬಂದಿದೆ. ತನ್ನ ಸ್ನೇಹಿತ ರಜತ್ ಎಂಬುವವರಿಗೆ 18 ಲಕ್ಷ ರೂಪಾಯಿಗಳನ್ನು ಪಡೆದಿದ್ದು ಹಿಂತಿರುಗಿಸಿಲ್ಲವೆಂದು ಸುದ್ದಿ ಮಾಧ್ಯಮಗಳಲ್ಲಿ ಸ್ವತಃ ರಜತ್ ಅವರೇ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ನೀನಾಸಂ ಅಶ್ವಥ್, ರತನ್‌ನಿಂದ ಹಣವನ್ನು ಪಡೆದಿದ್ದು ನಿಜ, ಆದರೆ  ಹಂತ ಹಂತವಾಗಿ ಹಣ ವಾಪಸ್ಸು ನೀಡಿದ್ದೇನೆ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.

ರತ್ನಜ ಅವರಿಂದ ಮತ್ತೊಂದು ಆರೋಪ
ಈ ಪ್ರಕರಣ ಕೇಳಿ ಬಂದ ಬೆನ್ನಲ್ಲೇ ರತ್ನಜ ನೀನಾಸಂ ಅಶ್ವಥ್‌ರಿಂದ 6ಲಕ್ಷ ಬಾಕಿ ಹಣ ಬರದಿರುವ ಬಗ್ಗೆ ಆರೋಪ ಮಾಡಿದ್ದಾರೆ. ವಿಶ್ವವಾಣಿ ಜತೆಗೆ ಮಾತನಾಡಿದ ರತ್ನಜ ಹೇಳಿದಿಷ್ಟು…

‘‘ಐದು ವರ್ಷಗಳ ಹಿಂದೆ ನಮ್ಮ ನಡುವೆ ನಾಲ್ಕುವರೆ ಲಕ್ಷ ಮೌಲ್ಯದ ಹಸುವಿನ ವ್ಯಾಪಾರ ನಡೆದಿತ್ತು. ಹಣ ನೀಡಲು ಸ್ವಲ್ಪ ಸಮಯವಕಾಶ ಕೇಳಿದ್ದ ಅಶ್ವಥ್, ಈವರೆಗೂ ಒಂದು ರೂಪಾಯಿಯನ್ನೂ ಸಹ ಕೊಟ್ಟಿಲ್ಲ. ಇತ್ತ ನಾನು ನಮ್ಮ ತಾಯಿಯವರ ಅನಾರೋಗ್ಯದ ನಡುವೆಯೂ ಬ್ಯಾಂಕ್ ಬಡ್ಡಿ ಕಟ್ಟುತ್ತಿದ್ದರೆ, ಅವರು ಎ.ಸಿ ಕಾರಿನಲ್ಲಿ ಓಡಾಡುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close